ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ(ಮೆಸ್ಕಾಂ)ದಲ್ಲಿ ಖಾಲಿ ಇರುವ 449 ಕಿರಿಯ ಪವರ್ ಮ್ಯಾನ್(JSM) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, 1:5ರ ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಹನಾ ಶಕ್ತಿ ಪರೀಕ್ಷೆಯು ಮೇ 27 ರಿಂದ ಮೇ 30ವರೆಗೆ ನಡೆಯಲಿದ್ದು, ಸದರಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ಸಹನ ಶಕ್ತಿ ಪರೀಕ್ಷೆಯ ಕರೆ ಪತ್ರಗಳನ್ನು ಮೆಸ್ಕಾಂನ ವೆಬ್‌ಸೈಟ್ mescom.karnataka.gov.inನಲ್ಲಿ ಮೇ 20ರಿಂದ ಡೌನ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ದಿನಾಂಕ ಮೇ 27 ರಿಂದ ಮೇ 30ವರೆಗೆ ಮಂಗಳೂರು, ಉಡುಪಿ ಮತ್ತು ಶಿವಮೊಗ್ಗದ ವಿವಿಧ ಕೇಂದ್ರಗಳಲ್ಲಿ, ಮಂಗಳೂರಿನ ಮಣ್ಣಗುಡ್ಡ ಮಂಗಳ ಕ್ರೀಡಾಂಗಣದಲ್ಲಿ, ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಹಾಗೂ ಶಿವಮೊಗ್ಗದ ನವಿಲೆ ಸವಳಂಗ ರಸ್ತೆ, ಕೃಷಿ ಮಹಾವಿದ್ಯಾಲಯ ಇಲ್ಲಿ ಸಹನ ಶಕ್ತಿ ಪರೀಕ್ಷೆಯನ್ನು ನಡೆಸಲಾಗುವುದು.
How to Download MESCOM Physical Hall Ticket 2025
ಹಾಲ್ ಟಿಕೆಟ್ ಡೌನ್ಲೋಡ್ ಮಾಡುವ ವಿಧಾನ;
ಮೆಸ್ಕಾಂನ ಅಧಿಕೃತ ವೆಬ್‌ಸೈಟ್ https://mescom.karnataka.gov.in ಗೆ ಭೇಟಿ ನೀಡಿ.
ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆ ನೇಮಕಾತಿ – 2024 ಸಹನ ಶಕ್ತಿ ಪರೀಕ್ಷೆಗೆ ಕರೆ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
Mescom Physical Hall Ticket 2025
ಅಪ್ಲಿಕೇಶನ್ ಸಂಖ್ಯೆ ಹಾಗೂ ಪಾಸ್ವರ್ಡ್ ಮೂದಿಸಿ ನಮೂದಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಕರೆ ಪತ್ರದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.