ದೇಶದ ಅತಿದೊಡ್ಡ ಮ್ಯಾಂಗನೀಸ್ ಅದಿರು ಉತ್ಪಾದನೆ ಸಂಸ್ಥೆಯಾಗಿರುವ ಮ್ಯಾಂಗನೀಸ್ ಓರ್ ಇಂಡಿಯಾ ಲಿಮಿಟೆಡ್ (MOIL)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ವಿವಿಧ ವೃಂದಗಳಲ್ಲಿ ಎಲೆಕ್ಟ್ರಿಷಿಯನ್, MCO(ಫಿಟ್ಟರ್), MCO(ವೆಲ್ಡರ್), ಮೈನ್ ಫೋರ್‌ಮ್ಯಾನ್, ಸೆಲೆಕ್ಟ್ ಗ್ರೇಡ್ ಮೈನ್ ಫೋರ್‌ಮ್ಯಾನ್, ಮೈನ್ ಮೇಟ್ ಮತ್ತು ಬ್ಲಾಸ್ಟರ್ ಸೇರಿದಂತೆ ಒಟ್ಟು 99 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು MOIL ಅಧಿಕೃತ ಜಾಲತಾಣ https://www.moil.nic.in/ಕ್ಕೆ ಭೇಟಿ ನೀಡಿ. ನ.06 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
✓ ಎಲೆಕ್ಟ್ರಿಷಿಯನ್, ಮೆಕ್ಯಾನಿಕ್-ಕಮ್-ಆಪರೇಟರ್ (ಫಿಟ್ಟರ್) ಹಾಗೂ ಮೆಕ್ಯಾನಿಕ್-ಕಮ್-ಆಪರೇಟರ್ (ವೆಲ್ಡರ್) ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣ ಹಾಗೂ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಜೊತೆಗೆ ಎನ್‌ಟಿಸಿಯಿಂದ ನೀಡಲಾದ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು.
✓ ಗಣಿ ಫೋರ್‌ಮನ್ ಹುದ್ದೆಗೆ – ಗಣಿಗಾರಿಕೆ ಮತ್ತು ಗಣಿ ಸಮೀಕ್ಷೆಯಲ್ಲಿ ಡಿಪ್ಲೊಮಾ ಮತ್ತು ಮಾನ್ಯ ಗಣಿ ಫೋರ್‌ಮನ್ ಪ್ರಮಾಣಪತ್ರ /ಎರಡನೇ ದರ್ಜೆಯ ವ್ಯವಸ್ಥಾಪಕರು/ಪ್ರಥಮ ದರ್ಜೆ ವ್ಯವಸ್ಥಾಪಕರ ಸಾಮರ್ಥ್ಯ ಪ್ರಮಾಣಪತ್ರ ಹೊಂದಿರಬೇಕು.
✓ ಮೈನ್ ಫೋರ್‌ಮನ್ ಹುದ್ದೆಗೆ – ಗಣಿಗಾರಿಕೆಯಲ್ಲಿ ಬಿ.ಇ/ಬಿ.ಟೆಕ್/ಗಣಿಗಾರಿಕೆ ಮತ್ತು ಗಣಿ ಸಮೀಕ್ಷೆಯಲ್ಲಿ ಡಿಪ್ಲೊಮಾ/ತತ್ಸಮಾನ ಪದವಿ ಮತ್ತು ಮಾನ್ಯ ಮೈನ್ ಫೋರ್‌ಮನ್ ಪ್ರಮಾಣಪತ್ರ/ದ್ವಿತೀಯ ದರ್ಜೆ/ಪ್ರಥಮ ದರ್ಜೆ ವ್ಯವಸ್ಥಾಪಕರ ಸಾಮರ್ಥ್ಯ ಪ್ರಮಾಣಪತ್ರ ಹೊಂದಿರಬೇಕು.
✓ ಗಣಿ ಮೇಟ್ ಹಾಗೂ ಬ್ಲಾಸ್ಟರ್ ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಸಂಬಂಧಿತ ಸಾಮರ್ಥ್ಯ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ:
06-11-2025 ರಂತೆ;
* ಎಲೆಕ್ಟ್ರಿಷಿಯನ್, ಮೆಕ್ಯಾನಿಕ್-ಕಮ್-ಆಪರೇಟರ್ ಗ್ರೇಡ್-III (ಫಿಟ್ಟರ್), ಮೆಕ್ಯಾನಿಕ್-ಕಮ್-ಆಪರೇಟರ್ ಗ್ರೇಡ್-III (ವೆಲ್ಡರ್) ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
* ಗಣಿ ಫೋರ್‌ಮನ್, ಮೈನ್ ಫೋರ್‌ಮನ್ ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ – 45 ವರ್ಷಗಳು
* ಗಣಿ ಮೇಟ್ 23 ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
* ಬ್ಲಾಸ್ಟರ್ 08 ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 03 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ವಿಧಾನ:
✓ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ✓ ಅರ್ಹತೆ ಪಡೆದ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ✓ ಅಂತಿಮ ಆಯ್ಕೆ
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಪ್ರತಿ ತಿಂಗಳು 23,400-50,040ರೂ.ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 295 ರೂ. ಪ.ಜಾತಿ, ಪ.ಪಂಗಡ ಹಾಗೂ MOIL ಲಿಮಿಟೆಡ್‌ನ ಉದ್ಯೋಗಿಗಳಿಗೆ – ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
• ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು MOIL ಅಧಿಕೃತ ಜಾಲತಾಣ https://www.moil.nic.in/ಕ್ಕೆ ಭೇಟಿ ನೀಡಿ.
• ಎಲೆಕ್ಟ್ರಿಷಿಯನ್, ಎಂಸಿಒ(ಫಿಟ್ಟರ್), ಎಂಸಿಒ(ವೆಲ್ಡರ್) ಮೈನ್ ಫೋರ್‌ಮ್ಯಾನ್, ಟ್ರೈನಿ ಮೈನ್ ಮೇಟ್ ಮತ್ತು ಟ್ರೈನಿ ಬ್ಲಾಸ್ಟರ್ ಹುದ್ದೆಗಳಿಗೆ ಆಂತರಿಕ ನೇಮಕಾತಿ – ಅರ್ಜಿ ಲಿಂಕ್ http://ibpsreg.ibps.in/moilsep25/ ಮೇಲೆ ಕ್ಲಿಕ್ ಮಾಡಿ.
Moil Limited Job Online Application Form 2025
• ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.