UPSC ಸಿಡಿಎಸ್‌-Iರ ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟ

Published on:

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು ಏ.12ರಂದು ನಡೆಸಿದ್ದ 2026ನೇ ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ-Iರ ಫಲಿತಾಂಶವನ್ನು ಶುಕ್ರವಾರ(ಮೇ 08) ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಸದರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಎರಡನೇ ಹಂತದದ ಸಂದರ್ಶನಕ್ಕೆ ಅರ್ಹತೆ ಪಡೆದ ಒಟ್ಟು 8826 ಅಭ್ಯರ್ಥಿಗಳ ರೋಲ್ ಸಂಖ್ಯೆಗಳನ್ನು ಒಳಗೊಂಡ ಪಿಡಿಎಫ್ ಫಲಿತಾಂಶವನ್ನು ಆಯೋಗದ ಜಾಲತಾಣ http://www.upsc.gov.inದಲ್ಲಿ ಬಿಡುಗಡೆಗೊಳಿಸಲಾಗಿದೆ. ಸಂದರ್ಶನವನ್ನು ರಕ್ಷಣಾ ಸಚಿವಾಲಯದ ಸೇವಾ ಆಯ್ಕೆ ಮಂಡಳಿ(ಎಸ್‌ಎಸ್‌ಬಿ) ನಡೆಸಲಿದೆ.

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಸೇನೆಯ (IMA/OTA) ಹುದ್ದೆಗೆ ಮೊದಲ ಆಯ್ಕೆಯನ್ನು ನೀಡಿದ ಅಭ್ಯರ್ಥಿಗಳು SSB ಸಂದರ್ಶನಕ್ಕಾಗಿ ಕರೆ ಮಾಹಿತಿಯನ್ನು ಪಡೆಯಲು ನೇಮಕಾತಿ ನಿರ್ದೇಶನಾಲಯದ ವೆಬ್‌ಸೈಟ್ www.joinindianarmy.nic.in ನಲ್ಲಿ ನೊಂದಾಯಿಸಿಕೊಳ್ಳಬೇಕು.

ಭಾರತೀಯ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್ ಕೋರ್ಸ್, ಭಾರತೀಯ ನೌಕಾ ಅಕಾಡೆಮಿ ಎಳಿಮಲ ಕೋರ್ಸ್, ಹೈದರಾಬಾದ್‌ನ ವಾಯುಪಡೆ ಅಕಾಡೆಮಿ(ಪ್ರಿ-ಫೈಯಿಂಗ್) ತರಬೇತಿ ಕೋರ್ಸ್ ಹಾಗೂ ಅಧಿಕಾರಿಗಳ ತರಬೇತಿ ಅಕಾಡೆಮಿ ಕೋರ್ಸ್ ಸೇರಿದಂತೆ ಒಟ್ಟು 451 ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು.

UPSC CDS-I ಲಿಖಿತ ಪರೀಕ್ಷೆ ಫಲಿತಾಂಶ ಪರಿಶೀಲಿಸುವ ವಿಧಾನ;

• ಮೊದಲಿಗೆ ಅಭ್ಯರ್ಥಿಗಳು UPSC ಅಧಿಕೃತ ವೆಬ್ಸೈಟ್ http://www.upsc.gov.in ಗೆ ಭೇಟಿ ನೀಡಿ.

• ನಂತರ ಹೊಸದೇನಿದೆ ವಿಭಾಗದ ಕೆಳಗೆ ನೀಡಲಾಗಿರುವ “ಲಿಖಿತ ಫಲಿತಾಂಶ: ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (I), 2026” – ಎಂಬ ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ.

• ನಂತರ *ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (I), 2026* – “ಲಿಖಿತ ಫಲಿತಾಂಶ” ಪಿಡಿಎಫ್ ಮೇಲೆ ಕ್ಲಿಕ್ ಮಾಡಿ.

• CDS-I ಲಿಖಿತ ಪರೀಕ್ಷೆಯ ಫಲಿತಾಂಶವೂ ಪಿಡಿಎಫ್ ರೂಪದಲ್ಲಿ ಕಾಣಿಸಿತ್ತದೆ.

• ಪಿಡಿಎಫ್ ನಲ್ಲಿ ರೋಲ್ ಸಂಖ್ಯೆಯ ಮೂಲಕ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಿ.

• ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

UPSC CDS 1 Written Result 2026 PDFDownload
Official Websiteupsc.gov.in
More UpdatesKarnatakahelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “UPSC ಸಿಡಿಎಸ್‌-Iರ ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟ”

Leave a Comment