ಆರ್‌ಆರ್‌ಬಿ ವಿಭಾಗ ನಿಯಂತ್ರಕ(SC) ಸಿಬಿಟಿ ಫಲಿತಾಂಶ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್‌.ನಂ 04/2025ರಡಿ ಅಧಿಸೂಚಿತ ವಿಭಾಗ ನಿಯಂತ್ರಕ(ಸೆಕ್ಷನ್‌ ಕಂಟ್ರೋಲರ್) ಹುದ್ದೆಗಳ ಭರ್ತಿ ಸಂಬಂಧ ಫೆ.11 ಮತ್ತು 12ರಂದು ನಡೆಸಿದ್ದ ಸಿಬಿಟಿಯ ಫಲಿತಾಂಶವನ್ನು ಶುಕ್ರವಾರ(ಮೇ 08) ಪ್ರಕಟಿಸಿದೆ.

ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕಂಪ್ಯೂಟರ್ ಆಧಾರಿತ ಸಾಮರ್ಥ್ಯ ಪರೀಕ್ಷೆ(ಸಿಬಿಎಟಿ)ಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್‌ ಪಟ್ಟಿ ಜೊತೆಗೆ ಕಟ್‌-ಆಫ್‌ ಅಂಕಗಳನ್ನು ಮಂಡಳಿಯ ಆಯಾ ಪ್ರಾದೇಶಿಕ ವೆಬ್‌ಸೈಟ್‌ಗಳಲ್ಲಿ ಪ್ರಚುರಪಡಿಸಲಾಗಿದ್ದು, ಅಭ್ಯರ್ಥಿಗಳು ಪರಿಶೀಲನೆ ಮಾಡಿಕೊಳ್ಳಬಹುದು.

ಕಂಪ್ಯೂಟರ್ ಆಧಾರಿತ ಸಾಮರ್ಥ್ಯ ಪರೀಕ್ಷೆ(ಸಿಬಿಎಟಿ)ಯು ಮೇ 24ರಂದು ನಡೆಸಲು ನಿಗದಿಪಡಿಸಲಾಗಿದೆ. ಈ ದಿನಾಂಕ ಹತ್ತು ದಿನದ ಮುಂಚೆ ಸಿಟಿ ಇಂಟಿಮೇಶನ್‌ ದೊರಕಲಿದ್ದು, ಪ್ರವೇಶ ಪತ್ರವು ನಾಲ್ಕು ದಿನದ ಮುಂಚೆ ಲಭ್ಯವಾಗಲಿದೆ ಎಂದು ಮಂಡಳಿಯು ತಿಳಿಸಿದೆ.

ಫಲಿತಾಂಶ ವೀಕ್ಷಣೆ/ಡೌನ್ಲೋಡ್‌ ಹೇಗೆ ಮಾಡುವುದು?

ಹಂತ-1 ಆಯಾ ಪ್ರಾದೇಶಿಕ ಜಾಲತಾಣಕ್ಕೆ ಭೇಟಿ. (ಉದಾ: ಆರ್‌ಆರ್‌ಬಿ ಬೆಂಗಳೂರು https://rrbbnc.gov.in/)

ಹಂತ-2 ನಂತರ ಮುಖಪುಟದ “Latest Updates” ವಿಭಾಗದಲ್ಲಿ “08-05-2026CEN 04/2025- Section Controller” ಶಿರ್ಷೀಕೆಯಡಿ ನೀಡಲಾದ “Shortlisted for CBAT” ಅಥವಾ “View Cut Off” ಉಪಶಿರ್ಷೀಕೆ ಲಿಂಕ್‌ ಮೇಲೆ ಒತ್ತುವ ಮೂಲಕ ಫಲಿತಾಂಶವಿರುವ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

RRB Bengaluru Section Controller CEN 04 2025 CBT Result 2026 PDFDownload
Score Card Check LinkLogin Now
Other RRB Results….RRBs
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment