ಆಗ್ನೇಯ ಮಧ್ಯ ರೈಲ್ವೆಯಲ್ಲಿ ಶಿಶಿಕ್ಷು ತರಬೇತಿ; ಐಟಿಐ ಅರ್ಹತೆ

Published on:

ರಾಯ್‌ಪುರ: ಆಗ್ನೇಯ ಮಧ್ಯ ರೈಲ್ವೆಯಲ್ಲಿ 2026-27ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ ಟ್ರೇಡ್‌ ಅಪ್ರೆಂಟಿಸ್‌(ಶಿಶಿಕ್ಷು)ಗಳ ಭರ್ತಿಗಾಗಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಕಚೇರಿಯು ಅಧಿಸೂಚನೆ ಹೊರಡಿಸಿದೆ.

ಇಲ್ಲಿನ ಡಿಆರ್‌ಎಂ ಕಚೇರಿ ಹಾಗೂ ವ್ಯಾಗನ್ ರಿಪೇರ್ ಶಾಪ್‌ನಲ್ಲಿ ವೆಲ್ಡರ್, ಟರ್ನರ್, ಫಿಟ್ಟರ್, ಎಲೆಕ್ಟ್ರಿಷಿಯನ್‌, ಸ್ಟೆನೋಗ್ರಾಫರ್ ಸೇರಿದಂತೆ ಇತರೆ ನಾನಾ ಟ್ರೇಡ್‌ಗಳಿಗೆ ಒಟ್ಟು 1644 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ನಿಗದಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರುವ ಆಸಕ್ತರು ಅಪ್ರೆಂಟಿಶಿಪ್ ಇಂಡಿಯಾ ಅಧಿಕೃತ ಜಾಲತಾಣhttps://www.apprenticeshipindia.gov.in/ಕ್ಕೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಜೂ.04ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಮೇ 05, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 04, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜೂನ್ 04, 2026

ವಿಭಾಗವಾರು ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ವಿವರ;

✓ ಡಿಆರ್‌ಎಂ ಕಚೇರಿ, ರಾಯ್‌ಪುರ ವಿಭಾಗ

ವೆಲ್ಡರ್ 262
ಟರ್ನರ್ 28
ಫಿಟ್ಟರ್ 406
ಎಲೆಕ್ಟ್ರಿಷಿಯನ್ 337
ಸ್ಟೆನೋಗ್ರಾಫರ್(ಹಿಂದಿ) 10
ಸ್ಟೆನೋಗ್ರಾಫರ್(ಇಂಗ್ಲಿಷ್) 11
ಹೆಲ್ತ್ ಅಂಡ್ ಸ್ಯಾನಿಟರಿ Insp 25
COPA 81
ಮೆಷಿನಿಸ್ಟ್ 14
ಮೆಕ್ಯಾನಿಕ್ ಡೀಸೆಲ್ 97
ಮೆಕ್ಯಾನಿಕ್ Ref.& AC 26
ಬ್ಲ್ಯಾಕ್ ಸ್ಮಿತ್ 02
ಹ್ಯಾಮರ್‌ಮ್ಯಾನ್ 01
ಮೇಸನ್ 02
ಪೈಪ್ ಲೈನ್ ಫಿಟ್ಟರ್ 02
ಕಾರ್ಪೆಂಟರ್ 06
ಪೇಂಟರ್ 06
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ 47

✓ ವ್ಯಾಗನ್ ರಿಪೇರ್ ಶಾಪ್ ರಾಯ್‌ಪುರ

ಫಿಟ್ಟರ್ 110
ವೆಲ್ಡರ್ 110
ಮಿಷಿನಿಸ್ಟ್ 18
ಟರ್ನರ್ 15
ಎಲೆಕ್ಟ್ರಿಷಿಯನ್ 18
COPA 08
ಸ್ಟೆನೋಗ್ರಾಫರ್(ಇಂಗ್ಲಿಷ್) 01
ಸ್ಟೆನೋಗ್ರಾಫರ್(ಹಿಂದಿ) 01

ಒಟ್ಟು – 1644

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಮಾನ್ಯತೆ ಪಡೆದ ಸಂಸ್ಥೆಯಿಂದ ಅಧಿಸೂಚಿತ ಟ್ರೇಡ್‌ನಲ್ಲಿ ಐಟಿಐ ಕೋರ್ಸ್‌ ಪೂರ್ಣಗೊಳಿಸಿರಬೇಕು.

ವಯೋಮಿತಿ:

05-05-2026 ರಂತೆ;

ಕನಿಷ್ಠ ವಯಸ್ಸಿನ ಮಿತಿ 15 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 24 ವರ್ಷಗಳು.

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 10 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
  • ಅಂತಿಮ ಆಯ್ಕೆ

ಶಿಷ್ಯವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ರೈಲ್ವೆ ಮಂಡಳಿಯ ನಿಯಮಗಳ ಪ್ರಕಾರ ಶಿಷ್ಯವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ಉಲ್ಲೇಖಿಸಲಾಗಿರುವುದಿಲ್ಲ
ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಉಲ್ಲೇಖಿಸಲಾಗಿರುವುದಿಲ್ಲ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕ್ರಿಯೆ:

• ಮೊದಲಿಗೆ ಅಭ್ಯರ್ಥಿಗಳು ಅಪ್ರೆಂಟಿಶಿಪ್ ಇಂಡಿಯಾ ಅಧಿಕೃತ ಜಾಲತಾಣhttps://www.apprenticeshipindia.gov.in/ಕ್ಕೆ ಭೇಟಿ ನೀಡಿ.

• ನೋಂದಾಯಿತ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

• ನಂತರ “ಶಿಷ್ಯವೃತ್ತಿಯ ಅವಕಾಶಗಳು” ಅಡಿಯಲ್ಲಿ ನೀಡಲಾಗಿರುವ “SECR ರಾಯ್‌ಪುರ -1962ರ ಅಡಿಯಲ್ಲಿ ಆಕ್ಟ್ ಅಪ್ರೆಂಟಿಸ್‌ಶಿಪ್‌ಗೆ ನೇಮಕಾತಿ” ಜಾಹೀರಾತು ಅನ್ನು ಹುಡುಕಿ.

• ಬಳಿಕ ನೀವು ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯ ಮೇಲೆ *ಅನ್ವಯಿಸು* ಆಯ್ಕೆಯನ್ನು ಕ್ಲಿಕ್ ಮಾಡಿ.

• ಈಗ ನೀವು ಖಾಲಿ ಹುದ್ದೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುತ್ತೀರಿ.

Important Direct Links:

Official Notification PDFDownload
Online Application Form LinkApply Now
Official Websitesecr.indianrailways.gov.in
More UpdatesKarnatakahelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ಆಗ್ನೇಯ ಮಧ್ಯ ರೈಲ್ವೆಯಲ್ಲಿ ಶಿಶಿಕ್ಷು ತರಬೇತಿ; ಐಟಿಐ ಅರ್ಹತೆ”

Leave a Comment