ನೀಟ್‌-ಯುಜಿ 2026: ತಾತ್ಕಾಲಿಕ ಕೀ ಉತ್ತರ ಪ್ರಕಟ

Published on:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಯು ಪದವಿಪೂರ್ವ ಹಂತದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿ ಸಂಬಂಧ ಮೇ 03ರಂದು ದೇಶದಾದ್ಯಂತ ನಡೆಸಿದ್ದ ನೀಟ್‌-ಯುಜಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಬುಧವಾರ(ಮೇ 06) ಪ್ರಕಟಿಸಿದೆ.

ಎಲ್ಲಾ ಸರಣಿ(ಸಿರೀಸ್‌)ಗಳ ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳನ್ನು ಎನ್‌ಟಿಎ ನೀಟ್‌ ಅಧಿಕೃತ ಜಾಲತಾಣ https://neet.nta.nic.in/ದಲ್ಲಿ ಅಪ್ಲೋಡ್‌ ಮಾಡಲಾಗಿದೆ. ಸ್ಕ್ಯಾನ್ಡ್‌ ಓಎಂಆರ್‌ ಉತ್ತರ ಪ್ರತಿಗಳನ್ನು ಅಪ್ಲೋಡ್‌ ಮಾಡಿದ ನಂತರ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಬಹುದು. ಓಎಂಆರ್‌ ಹಾಳೆ ಮತ್ತು ಪರೀಕ್ಷಾ ಸುತ್ತಿನ ಅಪ್‌ಲೋಡ್ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

NTA NEET UG 2026 Provisional Answer Keys PDFDownload

ತಾತ್ಕಾಲಿಕ ಕೀ ಉತ್ತರಗಳನ್ನು ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಅಧಿಕೃತ ಜಾಲತಾಣ https://neet.nta.nic.in/ಕ್ಕೆ ಭೇಟಿ ನೀಡಿ

ಹಂತ-2 ಮುಖಪುಟದ “ಸಾರ್ವಜನಿಕ ಪ್ರಕಟಣೆ(Public Notice)“ಯಡಿ ನೀಡಲಾದ “Provisional Answer Keys for NEET (UG) – 2026” ಶಿರ್ಷೀಕೆ ಲಿಂಕ್‌ ಮೇಲೆ ಒತ್ತುವ ಮೂಲಕ ತಾತ್ಕಾಲಿಕ ಕೀ ಉತ್ತರವಿರುವ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ:- 011-40759000/011-69227700 ಅಥವಾ ಇ-ಮೇಲ್‌: neetug2026@nta.ac.inಗೆ ಸಂಪರ್ಕಿಸಬಹುದು.

Important Direct Links:

Notice PDFDownload
Official Websiteneet.nta.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment