NABARD Assistant Manager Recruitment 2024: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೇಮಕಾತಿ

Follow Us:

NABARD Assistant Manager Recruitment 2024: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(NABARD) ನಲ್ಲಿ‌ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಆರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

NABARD ಕನ್ಸಲ್ಟೆನ್ಸಿ ಸೇವೆಗಳ ನೇಮಕಾತಿಯಲ್ಲಿ ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಒಟ್ಟು 102 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು NABARD ಬ್ಯಾಂಕ್ ನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪದವಿ ಡಿಪ್ಲೋಮೋ,CA, MBA ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ https://ibpsonline.ibps.in/nabardjul24 ಭೇಟಿ ನೀಡಿ ಆಗಸ್ಟ್ 15 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಈ ಲೇಖನದಲ್ಲಿ ನಾವು NABARD Consultancy Services (NABCONS) Recruitment 2024 ರ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Nabard Assistant Manager Recruitment 2024
Nabard Assistant Manager Recruitment 2024

Shortview of NABARD Grade A Notification 2024

Organization Name – National Bank for Agriculture and Rural Development (NABARD)
Post Name – Assistant Manager (Grade A Officer)
Total Vacancy – 102
Application Process: Online
Job Location – All Over India

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-07-2024
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-ಆಗಸ್ಟ್-2024
  • ಹಂತ I (ಪೂರ್ವಭಾವಿ) ದಿನಾಂಕ – ಆನ್‌ಲೈನ್ ಪರೀಕ್ಷೆ : 01-ಸೆಪ್ಟೆಂಬರ್-2024

ಹುದ್ದೆಗಳ ವಿವರ:

  • ಸಹಾಯಕ ವ್ಯವಸ್ಥಾಪಕ (RDBS) : 100
  • ಸಹಾಯಕ ವ್ಯವಸ್ಥಾಪಕ (ರಾಜಭಾಷಾ) : 2

ಶೈಕ್ಷಣಿಕ ಅರ್ಹತೆ:

  • ಸಹಾಯಕ ವ್ಯವಸ್ಥಾಪಕ (RDBS) ಹುದ್ದೆಗಳಿಗೆ– ಪದವಿ , ಡಿಪ್ಲೊಮಾ, CA ಅಥವಾ ICWA, Ph.D, MBA, ಸ್ನಾತಕೋತ್ತರ ಪದವಿ, ICAI, BBA, BMS, BE ಅಥವಾ B.Tech, ಪದವೀಧರರು ಈ ಉಡುಗಳಿಗೆ ಅರ್ಜಿಯನ್ನು ಸಲ್ಲಿಸಬಹುದು
  • ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ(ರಾಜಭಾಷಾ)– ಪದವಿ, ಪಿಜಿ ಡಿಪ್ಲೊಮಾ

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

ಆಯ್ಕೆ ವಿಧಾನ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ಸಂದರ್ಶನ

ಅರ್ಜಿ ಶುಲ್ಕ:

  • SC/ST/PWBD ಅಭ್ಯರ್ಥಿಗಳಿಗೆ : ರೂ.150/-
  • ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.850/-
  • ಪಾವತಿ ವಿಧಾನ : ಆನ್‌ಲೈನ್ ಮೋಡ್

Also Read: Rajiv Gandhi Entrepreneurship Program 2024: ಪದವಿ ಪಡೆದವರಿಗೆ ಉದ್ಯಮಶೀಲತೆ ಉತ್ತೇಜಿಸಲು 25,000 ವರೆಗೂ ಸ್ಟೇಫಂಡ್; ಹೆಚ್ಚಿನ ಮಾಹಿತಿ ಇಲ್ಲಿದೆ

How to Apply for NABARD Grade A Recruitment 2024

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ಭೇಟಿ ಅಧಿಕೃತ https://ibpsonline.ibps.in/nabardjul24 ವೆಬ್‌ಸೈಟ್‌ಗೆ ಭೇಟಿ ‌ನೀಡಿ.
  • ಮುಖಪುಟದಲ್ಲಿ ಕಾಣುವ‌ “Click here for new Registration” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಗತ್ಯ ವಿವರಗಳನ್ನು ಸಲ್ಲಿಸಿ ಲಾಗಿನ್ ಮಾಡಿ.
  • ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ಕೊನೆಯದಾಗಿ ಸಲ್ಲಿಸಿ ಕ್ಲಿಕ್ ಮಾಡಿ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.

Important Direct Links:

Official Notification PDFDownload
Online Application Form LinkApply Here
Official Websitewww.nabard.org
More UpdatesKarnataka Help.in

Leave a Comment