Navodaya Vidyalaya Class 6 Admission 2026: 2026ನೇ ಸಾಲಿನ ಜವಾಹರ್ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶಾತಿಗೆ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಗೆ (JNVST) ನವೋದಯ ವಿದ್ಯಾಲಯ ಸಮಿತಿಯು ಅರ್ಜಿ ಆಹ್ವಾನಿಸಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗೆ ನವೋದಯ ವಿದ್ಯಾಲಯ ಪ್ರವೇಶಾತಿ ಪರೀಕ್ಷೆಯನ್ನು ನಡೆಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ನವೋದಯ ಅಧಿಕೃತ ವೆಬ್ ಸೈಟ್ https://cbseitms.rcil.gov.in/nvs/Index/Registration ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾದ ನವೋದಯ ವಿದ್ಯಾಲಯ ಸಮಿತಿ (NVS) – ಪ್ರಸ್ತುತ ಭಾರತದಲ್ಲಿ ಒಟ್ಟು 654 ಜವಾಹರ್ ನವೋದಯ ವಿದ್ಯಾಲಯಗಳು (ಜೆಎನ್‌ವಿ) ಕಾರ್ಯನಿರ್ವಹಿಸುತ್ತಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣದ ಸೌಲಭ್ಯವನ್ನು ನೀಡುತ್ತಾ ಬಂದಿದೆ. ಜವಾಹರ್ ನವೋದಯ ವಿದ್ಯಾಲಯಗಳು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ (CBSE) ಸಂಯೋಜಿತವಾಗಿದ್ದು, 6 ರಿಂದ 12 ನೇ ತರಗತಿಯವರೆಗೆ ಶಿಕ್ಷಣವನ್ನು ನೀಡುತ್ತವೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮೇ 30, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 13, 2025 (ವಿಸ್ತರಿಸಲಾಗಿದೆ)
JNVST ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ.
- ಹಂತ – 1ರ ಪರೀಕ್ಷೆಯ ದಿನಾಂಕ – 13-12-2025
- ಹಂತ – 2ರ ಪರೀಕ್ಷೆಯ ದಿನಾಂಕ – 11-04-2026
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗೆ ಇರಬೇಕಾದ ಅರ್ಹತೆಗಳು:
- ಅಭ್ಯರ್ಥಿಯು ಪ್ರಸ್ತುತ 5 ನೇ ತರಗತಿಯಲ್ಲಿ ಓದುತ್ತಿರುವ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.
- ಅಭ್ಯರ್ಥಿಯು ಆಯಾ ಜವಾಹರ್ ನವೋದಯ ವಿದ್ಯಾಲಯ ಇರುವ ಜಿಲ್ಲೆಗೆ ಮಾತ್ರ ಸೇರಿದವರಾಗಿರಬೇಕು. (ಅಭ್ಯರ್ಥಿಯು ಅದೇ ಜಿಲ್ಲೆಯಲ್ಲಿ ಅಧ್ಯಯನ ಮಾಡಿರಬೇಕು ಮತ್ತು ಅದೇ ಜಿಲ್ಲೆಯ ಸ್ಥಳೀಯರಾಗಿರಬೇಕು.)
- 2025-26ನೇ ಸಾಲಿನಲ್ಲಿ ಅಭ್ಯರ್ಥಿಯು ಅದೇ ಜಿಲ್ಲೆಯ ಸರ್ಕಾರಿ ಅಥವಾ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
- 5ನೇ ತರಗತಿಯಲ್ಲಿ ಉತ್ತೀರ್ಣರಾದ ಅಥವಾ 5ನೇ ತರಗತಿಯನ್ನು ಪುನರಾವರ್ತಿಸಿದ ವಿದ್ಯಾರ್ಥಿಗಳು JNV 6ನೇ ತರಗತಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ವಯೋಮಿತಿ:
- ಅಭ್ಯರ್ಥಿಯು 2014ರ ಮೇ 1 ರಿಂದ 2016 ರ ಜುಲೈ 31 ರ ನಡುವೆ ಜನಿಸಿರಬೇಕು. (ಈ ಎರಡೂ ದಿನಾಂಕಗಳು ಸೇರಿದಂತೆ)
- ಈ ವಯಸ್ಸಿನ ಮಿತಿ ಎಲ್ಲಾ ವರ್ಗಗಳಿಗೂ ಸಮಾನವಾಗಿ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
- ಜನನ ಪ್ರಮಾಣಪತ್ರ
- ಆಧಾರ್ ಕಾರ್ಡ್
- 3, 4 ಮತ್ತು 5 ನೇ ತರಗತಿಯಲ್ಲಿ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಓದುತ್ತಿರುವ ಬಗ್ಗೆ ದೃಢೀಕರಣ.
- ವಾಸಸ್ಥಳ ದೃಡೀಕರಣ ಪ್ರಮಾಣಪತ್ರ (ಅನ್ವಯಿಸಿದರೆ)
- ಹಿಂದಿನ ತರಗತಿಯಿಂದ ವರ್ಗಾವಣೆ ಪ್ರಮಾಣಪತ್ರ.
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಇತ್ಯಾದಿ.
ಅರ್ಜಿ ಶುಲ್ಕ:
ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ.
How to Apply for Navodaya Vidyalaya Class 6 Admission 2026
ಅರ್ಜಿ ಸಲ್ಲಿಸುವ ವಿಧಾನ;
- ನವೋದಯ ಅಧಿಕೃತ ವೆಬ್ ಸೈಟ್ https://cbseitms.rcil.gov.in/nvs/Index/Registration ಗೆ ಭೇಟಿ ನೀಡಿ.
- ONLINE APPLICATION FOR ADMISSION TO CLASS VI (2026-27) ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
- ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
Navodaya Vidyalaya Admission 2026 Notification PDF | Download |
JNVST Class 6 Admission 2025-26 Online Form Link | Apply Now |
Official Website | navodaya.gov.in |
More Updates | Karnataka Help.in |
Bharath kumar