2026-27ನೇ ಶೈಕ್ಷಣಿಕ ವರ್ಷಕ್ಕಾಗಿ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ 9ನೇ ಮತ್ತು 11ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಲ್ಯಾಟರಲ್ ಎಂಟ್ರಿ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸ ಬಯಸುವವರು ಆಯಾ ಜಿಲ್ಲೆಯ ಮೂಲ ನಿವಾಸಿಯಾಗಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಓದುತ್ತಿರುವ(8ನೇಯಲ್ಲಿ) ಹಾಗೂ ಓದಿರುವ(10ನೇ ತೇರ್ಗಡೆ) ಅಭ್ಯರ್ಥಿಗಳು https://cbseitms.nic.in/2025/nvsix_9 ಅಥವಾ https://cbseitms.nic.in/2025/nvsxi_11 ಗೆ ಭೇಟಿ ನೀಡಿ ನೋಂದಣಿ ಮಾಡಬಹುದಾಗಿದೆ ಎಂದು ಎಂದು ನವೋದಯ ವಿದ್ಯಾಲಯ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
9, 11ನೇ ತರಗತಿ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಲು ಕೊನೆಯ ದಿನಾಂಕ – ಸೆಪ್ಟೆಂಬರ್ 23, 2025
ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ – ಫೆಬ್ರವರಿ 07, 2026
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳು:
9ನೇ ತರಗತಿಗೆ ನೋಂದಣಿ ಮಾಡಲು ಇರಬೇಕಾದ ಅರ್ಹತೆ;
ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಬಯಸುವ ಜಿಲ್ಲೆಯ ಮೂಲ ನಿವಾಸಿಯಾಗಿರಬೇಕು.
ಸರ್ಕಾರಿ / ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 8ನೇ ತರಗತಿಯಲ್ಲಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಪ್ರವೇಶ ಬಯಸುವ ವಿದ್ಯಾರ್ಥಿಗಳು ಆಯಾ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನವೋದಯ ವಿದ್ಯಾಲಯಗಳಿಗೆ ನೋಂದಾಯಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿ 01-05-2011 ರಿಂದ 31-07-2013ರ (ಎರಡು ದಿನಾಂಕಗಳು ಸೇರಿ)ಒಳಗೆ ಜನಿಸಿರಬೇಕು. ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಸಹಿತ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೂ ಅನ್ವಸುತ್ತದೆ.
11ನೇ ತರಗತಿಗೆ ನೋಂದಣಿ ಮಾಡಲು ಇರಬೇಕಾದ ಅರ್ಹತೆ;
ಅಭ್ಯರ್ಥಿಯು ಜವಹಾರ್ ನವೊಂದಯ ವಿದ್ಯಾಲಯವು ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯಲ್ಲಿ 2025-26ರ ಶೈಕ್ಷಣಿಕ ವರ್ಷದಲ್ಲಿ (ಏಪ್ರಿಲ್ 2025 ರಿಂದ ಮಾರ್ಚ್ 2026ರ ಅವಧಿ) / 2025 (ಜನವರಿಯಿಂದ ಡಿಸೆಂಬರ್ 2026ರ ಅವಧೀಯವರೆಗೆ ) ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 10ನೇ ತರಗತಿಯನ್ನು ಓದಿರಬೇಕು.
ಅಭ್ಯರ್ಥಿಯ ಜನ್ಮ ದಿನಾಂಕವು 01-06-2009 ರಿಂದ 31-07-2011 (ಎರಡು ದಿನಾಂಕಗಳು ಸೇರಿ) ಒಳಗೆ ಜನಿಸಿರಬೇಕು.
ಆಯ್ಕೆ ಪರೀಕ್ಷೆ:
9ನೇ ತರಗತಿ ವಿದ್ಯಾರ್ಥಿಗಳಿಗೆ;
ಹಿಂದಿ, ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ
OMR ಆಧಾರಿತ ವಸ್ತುನಿಷ್ಠ ಪ್ರಕಾರ
ದ್ವಿಭಾಷೆಯಲ್ಲಿ ಪ್ರಶ್ನೆಪತ್ರಿಕೆಯನ್ನು ನೀಡಲಾಗುತ್ತದೆ. (ಇಂಗ್ಲಿಷ್ ಮತ್ತು ಹಿಂದಿ)
11ನೇ ತರಗತಿ ವಿದ್ಯಾರ್ಥಿಗಳಿಗೆ;
ಮಾನಸಿಕ ಸಾಮರ್ಥ್ಯ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ
OMR ಆಧಾರಿತ ವಸ್ತುನಿಷ್ಠ ಪ್ರಕಾರ
ದ್ವಿಭಾಷೆಯಲ್ಲಿ ಪ್ರಶ್ನೆಪತ್ರಿಕೆಯನ್ನು ನೀಡಲಾಗುತ್ತದೆ. (ಇಂಗ್ಲಿಷ್ ಮತ್ತು ಹಿಂದಿ) ಅರ್ಜಿ ಶುಲ್ಕ
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ
9ನೇ ತರಗತಿಗೆ ನೋಂದಣಿ ಮಾಡಲು CBSCಯ ಅಧಿಕೃತ ಜಾಲತಾಣ https://cbseitms.nic.in/2025/nvsix_9ಗೆ ಭೇಟಿ ನೀಡಿ.
11ನೇ ತರಗತಿಗೆ ನೋಂದಣಿ ಮಾಡಲು CBSCಯ ಅಧಿಕೃತ ಜಾಲತಾಣ https://cbseitms.nic.in/2025/nvsxi_11ಗೆ ಭೇಟಿ ನೀಡಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ. ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಅರ್ಜಿಯನ್ನು ಪರಿಶೀಲಿಸಿ ಮತ್ತೊಮ್ಮೆ ಸಲ್ಲಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
Navodaya 9th Class Admission 2025 Notification PDF
Kavadimatti