ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT)ಯು ವಿವಿಧ ಶೈಕ್ಷಣಿಕ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ (ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಪ್ರೊಫೆಸರ್, ಡೆಪ್ಯೂಟಿ ಲೈಬ್ರೆರಿಯನ್ ಹಾಗೂ ಅಸಿಸ್ಟೆಂಟ್ ಲೈಬ್ರೆರಿಯನ್) ಸೇರಿದಂತೆ ಒಟ್ಟು 117 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಫೆ.20 ರೊಳಗೆ ಅರ್ಜಿ ಸಲ್ಲಿಸಲು NCERT ಅಧಿಕೃತ ಜಾಲತಾಣ https://ncertrec.samarth.edu.in/ಕ್ಕೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಫೆಬ್ರವರಿ 20, 2026
ಶೈಕ್ಷಣಿಕ ಅರ್ಹತೆ:
✓ ಪ್ರೊಫೆಸರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ ಪಿಎಚ್ಡಿ ಪದವಿ ಪಡೆದಿರಬೇಕು ಹಾಗೂ ಸಹಾಯಕ ಪ್ರಾಧ್ಯಾಪಕ/ಸಹ ಪ್ರಾಧ್ಯಾಪಕ/ಪ್ರಾಧ್ಯಾಪಕರಾಗಿ ಕನಿಷ್ಠ ಹತ್ತು ವರ್ಷಗಳ ಬೋಧನಾ ಅನುಭವ ಅಥವಾ ವಿಶ್ವವಿದ್ಯಾಲಯ/ರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಸಮಾನ ಮಟ್ಟದಲ್ಲಿ ಸಂಶೋಧನಾ ಅನುಭವವನ್ನು ಹೊಂದಿರಬೇಕು.
✓ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗಗಳಲ್ಲಿ ಪಿಎಚ್ಡಿ ಪದವಿಯೊಂದಿಗೆ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಹಾಗೂ ಕನಿಷ್ಠ ವರ್ಷಗಳ ಬೋಧನೆ/ಸಂಶೋಧನೆಯ ಅನುಭವವನ್ನು ಹೊಂದಿರಬೇಕು.
✓ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯೊಂದಿಗೆ UGC/CSIR ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಅಥವಾ UGC ಯಿಂದ ಮಾನ್ಯತೆ ಪಡೆದ SLET/SET ನಂತಹ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
✓ ಡೆಪ್ಯೂಟಿ ಲೈಬ್ರೆರಿಯನ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ವಿಜ್ಞಾನ/ಮಾಹಿತಿ ವಿಜ್ಞಾನ/ದಾಖಲೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ವಿಶ್ವವಿದ್ಯಾಲಯದ ಸಹಾಯಕ ಗ್ರಂಥಪಾಲಕ/ಕಾಲೇಜು ಗ್ರಂಥಪಾಲಕರಾಗಿ 08 ವರ್ಷಗಳ ಅನುಭವವನ್ನು ಹೊಂದಿರಬೇಕು.
✓ ಅಸಿಸ್ಟೆಂಟ್ ಲೈಬ್ರೆರಿಯನ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ವಿಜ್ಞಾನ/ಮಾಹಿತಿ ವಿಜ್ಞಾನ/ದಾಖಲೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ / ತತ್ಸಮಾನ ವೃತ್ತಿಪರ ಪದವಿಯೊಂದಿಗೆ ಗ್ರಂಥಾಲಯದ ಗಣಕೀಕರಣದ ಜ್ಞಾನದೊಂದಿಗೆ ಸ್ಥಿರವಾಗಿ ಉತ್ತಮ ಶೈಕ್ಷಣಿಕ ದಾಖಲೆ ಹೊಂದಿರಬೇಕು.
• ಹೆಚ್ಚಿನ ವಿದ್ಯಾರ್ಹತೆ ವಿವರಗಳಿಗಾಗಿ ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿಯಮಗಳ ಅನುಸಾರ
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
ಸಂದರ್ಶನ
ಸಂಬಳ:
ಪ್ರೊಫೆಸರ್ ಹುದ್ದೆಗೆ – ₹37,400-67,000 ಅಸೋಸಿಯೇಟ್ ಪ್ರೊಫೆಸರ್ ಹಾಗೂ ಡೆಪ್ಯೂಟಿ ಲೈಬ್ರಟಿಯನ್ ಹುದ್ದೆಗೆ – ₹37,400-67,000 ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಅಸಿಸ್ಟೆಂಟ್ ಲೈಬ್ರೆರಿಯನ್ ಹುದ್ದೆಗೆ -₹15,600-39,100
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 1000ರೂ. ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
• NCERT ಅಧಿಕೃತ ಜಾಲತಾಣ https://ncertrec.samarth.edu.in/ಕ್ಕೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ತಮ್ಮ ಮೂಲ ಮಾಹಿತಿಗಳನ್ನು ನಮೂದಿಸಿ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಎಚ್ಚರಿಕೆಯಿಂದ ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.