ಕೋಲಾರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ಸ್ ಸೊಸೈಟಿ ಅಧೀನದ ಜಿಲ್ಲೆಯ ಏಡ್ಸ್ ನಿಯಂತ್ರಣ ಘಟಕಕ್ಕೆ ಡಾಟಾ ಮ್ಯಾನೇಜರ್ ಹುದ್ದೆಯ ಭರ್ತಿ ಸಂಬಂಧ ಫೆ.06ರಂದು ಬೆಳಗ್ಗೆ 11ಗಂಟೆಗೆ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ನೇರ ಸಂದರ್ಶನ ಜರುಗಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಯಾವುದೇ ವಿಷಯದಲ್ಲಿ ಪದವಿ ಹಾಗೂ ಸಂಬಂಧಿಸಿದ ವಿಷಯದಲ್ಲಿ ಅನುಭವ ಹೊಂದಿರುವ, 60 ವರ್ಷದೊಳಗಿನ ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ತಿಳಿಸಲಾದ ದಿನದಂದು ತಮ್ಮ ಮೂಲ ಶೈಕ್ಷಣಿಕ, ಇತರೆ ದಾಖಲೆಗಳ ಜೊತೆಗೆ ಒಂದು ಸೆಟ್ ಝರಾಕ್ಸ್ ಪ್ರತಿಗಳೊಂದಿಗೆ ಹಾಜರಿರಬೇಕು. 10ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ನೇಮಕಾತಿಯ ಪ್ರಮುಖ ದಿನಾಂಕಗಳು:
- ನೇಮಕಾತಿಯ ಪ್ರಕಟಣೆಯ ದಿನಾಂಕ – ಜನವರಿ 28, 2026
- ನೇರ ಸಂದರ್ಶನ ನಡೆಯುವ ದಿನಾಂಕ – ಫೆಬ್ರವರಿ 06, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಡಿಪ್ಲೊಮಾ/ಪ್ರಮಾಣ ಪತ್ರವನ್ನು ಹೊಂದಿರಬೇಕು ಹಾಗೂ ಡೇಟಾ ನಿರ್ವಹಣೆಯಲ್ಲಿ ಕೆಲಸದ ಅನುಭವ ಮತ್ತು ಆರೋಗ್ಯ ಸಂಬಂಧಿತ ಸಾಫ್ಟ್‌ವೇರ್‌ಗಳ ಕೆಲಸದ ಜ್ಞಾನವನ್ನು ಹೊಂದಿರಬೇಕು.
ಸಂಖ್ಯಾಶಾಸ್ತ್ರ/ಗಣಿತದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ ಮತ್ತು ಕ್ಷೇತ್ರ ಸೆಟ್ಟಿಂಗ್‌ಗಳಲ್ಲಿ HIV/AIDS ಕಾರ್ಯಕ್ರಮದಲ್ಲಿ ಕೆಲಸದ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 60 ವರ್ಷಗಳು
ಸಂಬಳ:
ಅಭ್ಯರ್ಥಿಗೆ ಪ್ರತಿ ತಿಂಗಳು ₹21,000ವರೆಗೆ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
- ನೇರ ಸಂದರ್ಶನ
- ಲಿಖಿತ ಪರೀಕ್ಷೆ
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ನೇರ ಸಂದರ್ಶನದ ನಡೆಯುವ ದಿನಾಂಕ ಹಾಗೂ ವಿವರ:
ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 06ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯೊಳಗಾಗಿ ನೇರ ಸಂದರ್ಶನದ ಸ್ಥಳದಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ನಂತರ ಮದ್ಯಾಹ್ನ 01 ಗಂಟೆಯೊಳಗಾಗಿ ಅರ್ಜಿಯನ್ನು ಪಡೆದು ಅದರಂತೆ ಅಂಕ ಪಟ್ಟಿಗಳು, ಕಂಪ್ಯೂಟರ್ ಲಿಟ್ರಿಸಿ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ ಇತರೆ ಎಲ್ಲಾ ದಾಖಲಾತಿಗಳ 01 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ನೇರ ಸಂದರ್ಶನ ನಡೆಯುವ ಸ್ಥಳ: ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯ ಸಭಾಂಗಣ, ಕೋಲಾರ
Important Direct Links:
| Official Notification PDF | Download |
| Official Website | ksaps.karnataka.gov.in |
| More Updates | KarnatakaHelp.in |
I am vinutha
Kolar