ಕ್ರೀಡಾ ಅಭ್ಯರ್ಥಿಗಳಿಗೆ ತೆರಿಗೆ ಇಲಾಖೆಯಲ್ಲಿ ನೌಕರಿ

ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಫೆ.21ರವೆರೆಗೆ ಅವಕಾಶ

Published on:

ಗುಜರಾತ್‌ ಆದಾಯ ಮತ್ತು ತೆರಿಗೆ ಇಲಾಖೆ ಕ್ರೀಡಾ ನೇಮಕಾತಿಯಡಿ ತೆರಿಗೆ ಸಹಾಯಕ ಮತ್ತು ಬಹು-ಕಾರ್ಯಕಾರಿ ಸಿಬ್ಬಂದಿ(MTS) ಹುದ್ದೆಗಳ ನೇಮಕಾತಿಗಾಗಿ ಅರ್ಹ ಕ್ರೀಡಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ತೆರಿಗೆ ಸಹಾಯಕ(18) ಹಾಗೂ ಬಹು-ಕಾರ್ಯಕಾರಿ ಸಿಬ್ಬಂದಿ(28) ಸೇರಿ ಒಟ್ಟು 46 ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಿದೆ. ವಿವಿಧ ಕ್ರೀಡೆ/ಆಟಗಳಲ್ಲಿ ಸಾಧನೆಗೈದ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ. ಆಸಕ್ತ ಉದ್ಯೋಗಾಕಾಂಕ್ಷಿಗಳು ಫೆ.21ರೊಳಗೆ ಗುಜರಾತ್‌ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://incometaxgujarat.gov.in/ನ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜನವರಿ 31, 2026
  • ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ – ಫೆಬ್ರವರಿ 21, 2026

ಶೈಕ್ಷಣಿಕ ಅರ್ಹತೆ:

✓ ತೆರಿಗೆ ಸಹಾಯಕ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಅಥವಾ ತತ್ಸಮಾನ ಅರ್ಹತೆಯೊಂದಿಗೆ ಗಂಟೆಗೆ 8,000 ಕೀ ಡಿಪ್ರೆಶನ್‌ಗಳ ಡೇಟಾ ಎಂಟ್ರಿ ವೇಗವನ್ನು ಹೊಂದಿರಬೇಕು.

✓ ಬಹು-ಕಾರ್ಯಕಾರಿ ಸಿಬ್ಬಂದಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ಕೌನ್ಸಿಲ್‌ನಿಂದ ಮೆಟ್ರಿಕ್ಯುಲೇಷನ್ (10ನೇ ತರಗತಿ) ಅಥವಾ ತತ್ಸಮಾನ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

*ಜೊತೆಗೆ ಇಲಾಖೆ ಅಧಿಸೂಚನೆಯಲ್ಲಿ ತಿಳಸಿದ ಸಂಬಂಧಿಸಿದ ಆಟ/ಕ್ರೀಡೆಯಲ್ಲಿ ಸಾಧನೆಗೈದಿರಬೇಕು/ದೇಶವನ್ನು ಪ್ರತಿನಿಧಿಸಿರಬೇಕು.

ವಯೋಮಿತಿ:

✓ ತೆರಿಗೆ ಸಹಾಯಕ ಹುದ್ದೆಗೆ;

ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 27 ವರ್ಷಗಳು

✓ ಬಹು-ಕಾರ್ಯಕಾರಿ ಸಿಬ್ಬಂದಿ ಹುದ್ದೆಗೆ;

ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು

ವಯೋಮಿತಿ ಸಡಿಲಿಕೆ: ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ – 05 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 10 ವರ್ಷಗಳು,

• ಕೇಂದ್ರ ಸರ್ಕಾರದಲ್ಲಿ 03 ವರ್ಷಗಳ ನಿರಂತರ ಸೇವೆಯನ್ನು ಹೊಂದಿರುವ ಇಲಾಖಾ ಅಭ್ಯರ್ಥಿಗಳಿಗೆ – 40 ವರ್ಷ ವಯಸ್ಸಿನವರೆಗೆ, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 45 ವಯಸ್ಸಿನವರೆಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಸಂಬಳ:

ತೆರಿಗೆ ಸಹಾಯಕ ಹುದ್ದೆಗೆ – ₹25,500 ರಿಂದ 81100/-
ಬಹು-ಕಾರ್ಯಕಾರಿ ಸಿಬ್ಬಂದಿ ಹುದ್ದೆಗೆ – ₹18,000 ರಿಂದ 56900/-

ಆಯ್ಕೆ ವಿಧಾನ:

  • ಮಾನದಂಡಗಳು/ಅರ್ಹತೆ/ಸೂಚನೆಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
  • ಲಿಖಿತ ಪರೀಕ್ಷೆ
  • ದಾಖಲಾತಿ ಪರಿಶೀಲನೆ

ಅರ್ಜಿ ಶುಲ್ಕ:

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ₹200

ಅರ್ಜಿ ಸಲ್ಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://incometaxgujarat.gov.in/ಗೆ ಭೇಟಿ ನೀಡಿ.

• ನಂತರ ಹೊಸದೇನಿದೆ ಶೀರ್ಷಿಕೆಯ ಅಡಿಯಲ್ಲಿ ನೀಡಲಾಗಿರುವ “ಕ್ರೀಡಾ ನೇಮಕಾತಿ ಆದಾಯ ತೆರಿಗೆ ಗುಜರಾತ್(Sports recruitment income tax gujarat)” ಪಿಡಿಎಫ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ ಪಿಡಿಎಫ್‌ ತೆರೆದು, ಅರ್ಜಿ ಸಲ್ಲಿಸಲು “Link for Filling up Application form for Recruitment under sports quota (Annexure-C)” ಆಯ್ಕೆ ಮೇಲೆ ಟ್ಯಾಪ್ ಮಾಡಿ.

• ಮುಂದಿನ ಹಂತದಲ್ಲಿ ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.

• ಕೊನೆದಾಗಿ ಅರ್ಜಿಯನ್ನು ಮತ್ತೊಮ್ಮೆ ಪರೀಶೀಲನೆ ಮಾಡಿ ಸಲ್ಲಿಸಿ.

• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ.

Important Direct Links:

Official Notification PDFDownload
Online Application Form LinkApply Now
Official Wesbitehttps://incometaxgujarat.gov.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ಕ್ರೀಡಾ ಅಭ್ಯರ್ಥಿಗಳಿಗೆ ತೆರಿಗೆ ಇಲಾಖೆಯಲ್ಲಿ ನೌಕರಿ”

Leave a Comment