ಕೋಲ್ ಇಂಡಿಯಾ ಲಿಮಿಟೆಡ್ನ ಅಂಗಸಂಸ್ಥೆ ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ನಲ್ಲಿ ಮೇಲ್ವಿಚಾರಣಾ ಸ್ಥಾನಗಳಡಿ ವಿವಿಧ ವಿಭಾಗಗಳಿಗೆ ಸಹಾಯಕ ಫೋರ್ಮನ್(ಗ್ರೇಡ್-ಸಿ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಕ ಫೋರ್ಮನ್ (ಇ & ಟಿ) (ತರಬೇತಿ) 14 ಹುದ್ದೆಗಳು, ಸಹಾಯಕ ಫೋರ್ಮನ್ (ಮೆಕ್ಯಾನಿಕಲ್) (ತರಬೇತಿ) ಗ್ರೇಡ್-ಸಿ 108 ಹುದ್ದೆಗಳು, ಸಹಾಯಕ ಫೋರ್ಮನ್ (ಎಲೆಕ್ಟ್ರಿಕಲ್) (ತರಬೇತಿ) 148 ಹುದ್ದೆಗಳು ಸೇರಿ ಒಟ್ಟು 270 ಸಹಾಯಕ ಫೋರ್ಮನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಮಾ.05ರೊಳಗೆ NCL ಅಧಿಕೃತ ವೆಬ್ಸೈಟ್ https://www.nclcil.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಫೆಬ್ರವರಿ 11, 2026
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 05, 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮಾರ್ಚ್ 05, 2026
ಶೈಕ್ಷಣಿಕ ಅರ್ಹತೆ:
✓ ಸಹಾಯಕ ಫೋರ್ಮನ್ (ಇ & ಟಿ) (ತರಬೇತಿ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ ಉತ್ತೀರ್ಣ ಹಾಗೂ ಡಿಪ್ಲೊಮಾ/ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.
✓ ಸಹಾಯಕ ಫೋರ್ಮನ್ (ಮೆಕ್ಯಾನಿಕಲ್) (ತರಬೇತಿ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ ಉತ್ತೀರ್ಣ ಹಾಗೂ ಡಿಪ್ಲೊಮಾ/ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
✓ ಸಹಾಯಕ ಫೋರ್ಮನ್ (ಎಲೆಕ್ಟ್ರಿಕಲ್) (ತರಬೇತಿ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ ಉತ್ತೀರ್ಣ ಹಾಗೂ ಡಿಪ್ಲೊಮಾ/ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಕನಿಷ್ಠ ಮಿತಿ – 18 ವರ್ಷಗಳು ಗರಿಷ್ಠ ಮಿತಿ – 30 ವರ್ಷಗಳು.
ಸಾಮಾನ್ಯ, ಒಬಿಸಿ ಮತ್ತು ಇ.ಡಬ್ಲ್ಯೂ.ಎಸ್ ಅಭ್ಯರ್ಥಿಗಳಿಗೆ – ₹1180 ಎಸ್ಸಿ/ಎಸ್ಟಿ/ಇ.ಎಸ್.ಎಮ್/ ಪಿಡಬ್ಲ್ಯೂಬಿಡಿ/ಇಲಾಖಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು NCL ಅಧಿಕೃತ ವೆಬ್ಸೈಟ್ https://www.nclcil.in/ ಗೆ ಭೇಟಿ ನೀಡಿ.
• ನಂತರ ಮೆನು ಬಾರ್ ನಲ್ಲಿ ವೃತ್ತಿಜೀವನ ವಿಭಾಗವನ್ನು ಆಯ್ಕೆ ಮಾಡಿ.
• ನಂತರ ನೇಮಕಾತಿ ವಿಭಾಗದ “Employment Notification for Direct Recruitment for various posts of Supervisory Positions in NCL. ಶೀರ್ಷಿಕೆಯ ಕೆಳಗೆ ನೀಡಲಾಗಿರುವ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ನೋಂದಾಯಿಸಿ.
Ncl Assistant Foreman Online Form 2026
• ಅರ್ಜಿಯಲ್ಲಿ ಕೇಳಲಾಗುವ ವೈಯಕ್ತಿಕ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.
• ಕೊನೆದಾಗಿ ಅರ್ಜಿಯನ್ನು ಪರೀಶೀಲನೆ ಮಾಡಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.