ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಅಧಿಕಾರಿ ಮಟ್ಟದ ಏಳು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 1 ರಿಂದ ಆರಂಭವಾಗಿದ್ದು, ಅಕ್ಟೋಬರ್ 21, 2025 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಅಕ್ಟೋಬರ್ 01, 2025
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಅಕ್ಟೋಬರ್ 21, 2025
ಒಟ್ಟು ಹುದ್ದೆಗಳು:
- ಜನರಲ್ ಮ್ಯಾನೇಜರ್ (ಕ್ರೆಡಿಟ್ ಮಾನಿಟರಿಂಗ್)- 1
- ಡೆಪ್ಯೂಟಿ ಮ್ಯಾನೇಜರ್ (ಮಾನವ ಸಂಪನ್ಮೂಲ) – 1
- ಡೆಪ್ಯೂಟಿ ಮ್ಯಾನೇಜರ್ (ಆಡಿಟ್)- 1
- ಡೆಪ್ಯೂಟಿ ಮ್ಯಾನೇಜರ್ (ಕಲಿಕೆ ಮತ್ತು ಅಭಿವೃದ್ಧಿ)- 1
- ಜನರಲ್ ಮ್ಯಾನೇಜರ್ (ಮಾನವ ಸಂಪನ್ಮೂಲ)- 1
- ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕಂಪನಿ ಕಾರ್ಯದರ್ಶಿ) – 1
- ಚೀಪ್ ಎಕನಾಮಿಸ್ಟ್ – 1
ಶೈಕ್ಷಣಿಕ ಅರ್ಹತೆ:
ನೇಷನಲ್ ಹೌಸಿಂಗ್ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯಂತೆ ಭರ್ತಿ ಮಾಡಿಕೊಳ್ಳಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನಂತೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ –
- ಜನರಲ್ ಮ್ಯಾನೇಜರ್ (ಕ್ರೆಡಿಟ್ ಮಾನಿಟರಿಂಗ್)- ಸಿಎ, ಎಂಬಿಎ, ಸ್ನಾತಕೋತ್ತರ ಪದವಿ
- ಡೆಪ್ಯೂಟಿ ಮ್ಯಾನೇಜರ್ (ಮಾನವ ಸಂಪನ್ಮೂಲ) – ಸಿಎ, ಎಂಬಿಎ, ಸ್ನಾತಕೋತ್ತರ ಪದವಿ
- ಡೆಪ್ಯೂಟಿ ಮ್ಯಾನೇಜರ್ (ಆಡಿಟ್)- ಸಿಎ
- ಡೆಪ್ಯೂಟಿ ಮ್ಯಾನೇಜರ್ (ಕಲಿಕೆ ಮತ್ತು ಅಭಿವೃದ್ಧಿ)-ಎಂಬಿಎ, ಪಿಜಿಡಿಎಂ
- ಜನರಲ್ ಮ್ಯಾನೇಜರ್ (ಮಾನವ ಸಂಪನ್ಮೂಲ)- ಪದವಿ
- ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕಂಪನಿ ಕಾರ್ಯದರ್ಶಿ) – ಪದವಿ
- ಚೀಪ್ ಎಕನಾಮಿಸ್ಟ್ – ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ವಯೋಮಿತಿ:
- ಜನರಲ್ ಮ್ಯಾನೇಜರ್ (ಕ್ರೆಡಿಟ್ ಮಾನಿಟರಿಂಗ್)- ಕನಿಷ್ಠ 40 ರಿಂದ 55 ವರ್ಷಗಳು
- ಡೆಪ್ಯೂಟಿ ಮ್ಯಾನೇಜರ್ (ಮಾನವ ಸಂಪನ್ಮೂಲ) – ಕನಿಷ್ಠ 23 ರಿಂದ 32 ವರ್ಷಗಳು
- ಡೆಪ್ಯೂಟಿ ಮ್ಯಾನೇಜರ್ (ಆಡಿಟ್)- ಕನಿಷ್ಠ 23 ರಿಂದ 32 ವರ್ಷಗಳು
- ಡೆಪ್ಯೂಟಿ ಮ್ಯಾನೇಜರ್ (ಕಲಿಕೆ ಮತ್ತು ಅಭಿವೃದ್ಧಿ)- ಕನಿಷ್ಠ 23 ರಿಂದ 32 ವರ್ಷಗಳು
- ಜನರಲ್ ಮ್ಯಾನೇಜರ್ (ಮಾನವ ಸಂಪನ್ಮೂಲ)- ಕನಿಷ್ಠ 40 ರಿಂದ 62 ವರ್ಷಗಳು
- ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕಂಪನಿ ಕಾರ್ಯದರ್ಶಿ) – ಕನಿಷ್ಠ 36 ರಿಂದ 55 ವರ್ಷಗಳು
- ಚೀಪ್ ಎಕನಾಮಿಸ್ಟ್ – ಗರಿಷ್ಟ 56 ವರ್ಷಗಳು
ಆಯ್ಕೆ ವಿಧಾನ:
- ಕಿರುಪಟ್ಟಿ
- ಗುಂಪು ಚರ್ಚೆ
- ಸಂದರ್ಶನ
ವೇತನ:
ಅಧಿಸೂಚನೆಯಲ್ಲಿ ತಿಳಿಸಿರುವಂತೆ ಜನರಲ್ ಮ್ಯಾನೇಜರ್ (ಸ್ಕೇಲ್– VII) ಹುದ್ದೆಗೆ ವೇತನ ಶ್ರೇಣಿ 156500/ -4340/4- 173860/ರೂ., ಡೆಪ್ಯೂಟಿ ಮ್ಯಾನೇಜರ್ (ಸ್ಕೇಲ್– II) ಹುದ್ದೆಗೆ ವೇತನ ಶ್ರೇಣಿ 64820/– 2340/1 – 67160 – 2680/10– 93960/ರೂ. ಸಿಗಲಿದೆ.
ಅರ್ಜಿ ಶುಲ್ಕ:
ಪ.ಜಾತಿ/ಪ.ಪಂಗಡ ಮತ್ತು ವಿಕಲ ಚೇತನ ಅಭ್ಯರ್ಥಿಗಳು ರೂ.175/- ಪಾವತಿಸಬೇಕು ಮತ್ತು ಇತರ ಎಲ್ಲಾ ಅಭ್ಯರ್ಥಿಗಳು ರೂ.850/-ನ್ನು ಆನ್ಲೈನ್ ವಿಧಾನದ ಮೂಲಕ ಪಾವತಿ ಮಾಡುವಂತೆ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
- ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
- ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ನೇರವಾಗಿ ನೇಷನಲ್ ಹೌಸಿಂಗ್ ಬ್ಯಾಂಕ್ ಅಧಿಕೃತ ವೆಬ್ ಸೈಟ್ ಅಥವಾ ಕೆಳಗೆ ನೀಡಿರುವ Online Application Link ಮೇಲೆ ಕ್ಲಿಕ್ ಮಾಡಿ.
- ನೇರವಾಗಿ ನೇಷನಲ್ ಹೌಸಿಂಗ್ ಬ್ಯಾಂಕಿನ ಹುದ್ದೆಗೆ ಅರ್ಜಿ ಸಲ್ಲಿಸುವ ವಿಭಾಗಕ್ಕೆ ತಲುಪುತ್ತೀರಿ. ಅಲ್ಲಿ ನಿಮಗೆ ಕಾಣುವ New Registration ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಪೂರ್ಣ ಹೆಸರು, ಇಮೇಲ್ ಮತ್ತು ದೂರವಾಣಿ ಸಂಖ್ಯೆ ನೀಡಿ, ರಿಜಿಸ್ಟರ್ ಆಗಿರಿ. ರಿಜಿಸ್ಟ್ರೇಷನ್ ನಂಬರ್ ಹಾಗೂ ಪಾಸ್ವರ್ಡ್ ಕಲಿಸಲಾಗುತ್ತದೆ.

- ಆ ನಂತರ ಲಾಗಿನ್ ಆಗಿ ಅಲ್ಲಿ ಕೇಳಿರುವ ನಿಮ್ಮ ಅಗತ್ಯ ದಾಖಲೆಗಳು, ಶೈಕ್ಷಣಿಕ ಮಾಹಿತಿ, ಉದ್ಯೋಗ ಅನುಭವ ಮಾಹಿತಿ, ಬಾವಚಿತ್ರ, ಸಹಿ, ಎಡಗೈ ಬೆರಳಚ್ಚು, ನಿಮ್ಮ ಹಸ್ತಾಕ್ಷರದಲ್ಲಿ ಬರೆದ ಡಿಕ್ಲರೇಷನ್ ಫಾರ್ಮ್ ಗಳ ಸ್ಕ್ಯಾನ್ ಮಾಡಿದ ಕಾಪಿಯನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಕೊನೆಯಲ್ಲಿ ನೀವು ನೀಡಿರುವ ಎಲ್ಲ ಮಾಹಿತಿಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿಕೊಂಡು ಪ್ರಿಂಟ್ ತೆಗೆದುಕೊಳ್ಳಿ. ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ Submit ಬಟನ್ ಕ್ಲಿಕ್ ಮಾಡಿ ಅರ್ಜಿ ಸಂಖ್ಯೆ ಸೆರೆಹಿಡಿದಿಟ್ಟುಕೊಳ್ಳಿ.