ಪ್ರಮುಖ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಯಾದ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್(NIACL)ನಲ್ಲಿ ಆಡಳಿತ ಅಧಿಕಾರಿಗಳ (ಸಾಮಾನ್ಯವಾದಿಗಳು ಮತ್ತು ತಜ್ಞರು) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ಪ್ರಸ್ತುತ ವಿವಿಧ ಕೇಡರ್ನಲ್ಲಿ ಖಾಲಿ ಇರುವ (ರಿಸ್ಕ್ ಇಂಜಿನಿಯರ್ಸ್, ಆಟೋಮೊಬೈಲ್ ಇಂಜಿನಿಯರ್ಸ್, ಐಟಿ ತಜ್ಞರು, ಕಾನೂನು ತಜ್ಞರು, ಖಾತೆ ತಜ್ಞರು, ಕಂಪನಿ ಕಾರ್ಯದರ್ಶಿ) ಸೇರಿದಂತೆ ಇತರೆ ಒಟ್ಟು 550 ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್ಸೈಟ್ https://www.newindia.co.in/recruitment/listಗೆ ಭೇಟಿ ನೀಡುವ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಆಗಸ್ಟ್ 07, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 30, 2025
ಶೈಕ್ಷಣಿಕ ಅರ್ಹತೆ:
ರಿಸ್ಕ್ ಇಂಜಿನಿಯರ್ ಹುದ್ದೆಗೆ – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್ (ಪದವಿ/ಸ್ನಾತಕೋತ್ತರ ಪದವಿ) ಪೂರ್ಣಗೊಳಿಸಿರಬೇಕು.
ಆಟೋಮೊಬೈಲ್ ಇಂಜಿನಿಯರ್ಸ್ ಹುದ್ದೆಗೆ – ಯಾವುದೇ ಎಂಜಿನಿಯರಿಂಗ್ ವಿಭಾಗದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿ ಪಡೆದಿರಬೇಕು ಮತ್ತು ಆಟೋಮೊಬೈಲ್ ಎಂಜಿನಿಯರಿಂಗ್ನಲ್ಲಿ ಕನಿಷ್ಠ ಒಂದು ವರ್ಷದ ಡಿಪ್ಲೊಮಾ ಪಡೆದಿರಬೇಕು.
ಕಾನೂನು ತಜ್ಞರು ಹುದ್ದೆಗೆ – ಕನಿಷ್ಠ 60% ಅಂಕಗಳೊಂದಿಗೆ ಕಾನೂನು ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಖಾತೆ ತಜ್ಞರು ಹುದ್ದೆಗೆ – ಕನಿಷ್ಠ 60% ರೊಂದಿಗೆ MBA ಹಣಕಾಸು/PGDM ಹಣಕಾಸು/M.Com ಪೂರ್ಣಗೊಳಿಸಿರಬೇಕು.
AO (ಆರೋಗ್ಯ) ಹುದ್ದೆಗೆ – ಎಂಬಿಬಿಎಸ್/ಎಂ.ಡಿ. / ಎಂ.ಎಸ್/ ಬಿ.ಡಿ.ಎಸ್/ಎಂ.ಡಿ.ಎಸ್ / BAMS/BHMS ಪದವಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಐಟಿ ತಜ್ಞರು ಹುದ್ದೆಗೆ – ಐಟಿ ಅಥವಾ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಬಿ.ಎ./ಬಿ.ಟೆಕ್/ಎಂ.ಇ/ಎಂ.ಟೆಕ್/ಎಂ.ಸಿ.ಎಪದವಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಬಿಜಿನೆಸ್ ಅನಾಲಿಸಿಸ್ಟ್ ಹುದ್ದೆಗೆ – ಸಂಖ್ಯಾಶಾಸ್ತ್ರ/ಗಣಿತ/ಆಕ್ಚುರಿಯಲ್ ಸೈನ್ಸ್/ಡೇಟಾ ಸೈನ್ಸ್/ವ್ಯವಹಾರ ವಿಶ್ಲೇಷಕರಲ್ಲಿ ಪದವಿ/ಸ್ನಾತಕೋತ್ತರ ಪದವಿ, ಎರಡೂ ಪದವಿಗಳಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಕಂಪನಿ ಸೆಕ್ರೆಟರಿ ಹುದ್ದೆಗೆ – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಾಸ್ತವಿಕ ತಜ್ಞರು ಹುದ್ದೆಗೆ – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ:
01-08-2025 ರಂತೆ;
- ಕನಿಷ್ಠ ಮಿತಿ – 21 ವರ್ಷಗಳು
- ಗರಿಷ್ಠ ಮಿತಿ – 30 ವರ್ಷಗಳು
ವಯೋಮಿತಿ ಸಡಿಲಿಕೆ:
• ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷಗಳು
• ಓಬಿಸಿ ಅಭ್ಯರ್ಥಿಗಳಿಗೆ – 3 ವರ್ಷಗಳು
• ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷಗಳು
ಆಯ್ಕೆ ವಿಧಾನ:
ಹಂತ-I: ಪೂರ್ವಭಾವಿ ಪರೀಕ್ಷೆ
ಹಂತ-II: ಮುಖ್ಯ ಪರೀಕ್ಷೆ
ಹಂತ-III: ಸಂದರ್ಶನ
ದಾಖಲೆ ಪರಿಶೀಲನೆ
ಸಂಬಳ:
ಮೂಲ ವೇತನ ರೂ. 50,925/- ರೂ. [ವೇತನ ಶ್ರೇಣಿ:50925-2500(14)-85925-2710(4)-96765] ಮತ್ತು ಅನ್ವಯವಾಗುವ ಇತರ ಸ್ವೀಕಾರಾರ್ಹ ಭತ್ಯೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
- ಪ.ಜಾತಿ, ಪ.ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ – 100ರೂ.
- ಸಾಮಾನ್ಯ ಓಬಿಸಿ ಹಾಗೂ ಅಭ್ಯರ್ಥಿಗಳಿಗೆ 850ರೂ.
How to Apply for NIACL Administrative Officer Recruitment 2025
- IBPS ಅಧಿಕೃತ ವೆಬ್ಸೈಟ್ https://ibpsonline.ibps.in/niacljul25/ ಗೆ ಭೇಟಿ ನೀಡಿ.
- ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
- ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
- ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
- ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
- ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
Official Notification PDF | Download |
Online Application Form Link | Apply Now |
Official Website | www.newindia.co.in |
More Updates | KarnatakaHelp.in |