ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ (NIACL)ನಲ್ಲಿ ಖಾಲಿ ಇರುವ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯು ಜೆನೆರಲಿಸ್ಟ್ ಅಂಡ್ ಸ್ಪೆಷಲಿಸ್ಟ್ ಸ್ಕೇಲ್-1 ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 170 ಹುದ್ದೆಗಳಿಗೆ ನಿಮಗ ಮಾಡಿಕೊಳ್ಳಲಾಗುತ್ತಿದ್ದು, ಫೇಸ್ 1, ಫೇಸ್ 2 ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಯಾವುದಾದರೂ ಒಂದು ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ (NIACL) ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ www.newindia.co.inಗೆ ಭೇಟಿ ನೀಡಿ, ಸೆಪ್ಟೆಂಬರ್ 29ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.ಈ ಲೇಖನದಲ್ಲಿ NIACL AO Notification 2024 ರ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
Niacl Ao Notification 2024
Shortview of NIACL AO Notification 2024
Organization Name – New India Assurance Company Ltd. Post Name – Administrative Officer Total Vacancy – 170 Application Process: Online Job Location – All Over India(Karnataka)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಸೆಪ್ಟೆಂಬರ್ 10, 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಸೆಪ್ಟೆಂಬರ್ 29, 2024
ಫೇಸ್ 1 ಆನ್‌ಲೈನ್ ಪರೀಕ್ಷೆ ದಿನಾಂಕ: ಅಕ್ಟೋಬರ್ 13, 2024
ಫೇಸ್ 2 ಆನ್‌ಲೈನ್ ಪರೀಕ್ಷೆ ದಿನಾಂಕ: ಅಕ್ಟೋಬರ್ 17, 2024
ಖಾಲಿ ಇರುವ ಹುದ್ದೆಗಳ ವಿವರ:
ಅಕೌಂಟ್ಸ್ – 50
ಜೆನೆರಲಿಸ್ಟ್ – 120
ಒಟ್ಟು – 170
ವಿದ್ಯಾರ್ಹತೆ:
ಅಕೌಂಟ್ಸ್ ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ Chartered Accountant (ICAI)/ Cost and Management Accountant/MBA Finance/PGDM Finance/ M.Com with min 60% (55% for SC/ST/PwBD) ಪದವಿ ಪಡೆದುಕೊಂಡಿರಬೇಕು.
ಜೆನೆರಲಿಸ್ಟ್ ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದುಕೊಂಡಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 21 ರಿಂದ ಗರಿಷ್ಟ 30 ವರ್ಷಗಳ ಒಳಗೆ ಇರಬೇಕು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ (ಫೇಸ್ 1, ಫೇಸ್ 2)
ಸಂದರ್ಶನ.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ – ₹850
SC/ST/PwBD ಅಭ್ಯರ್ಥಿಗಳಿಗೆ – 100
ಪಾವತಿ ವಿಧಾನ – ಆನ್ ಲೈನ್
How to Apply for NIACL AO Recruitment 2024
ಅರ್ಜಿ ಸಲ್ಲಿಸಯವ ವಿಧಾನ…?
ಮೊದಲಿಗೆ NIACL ಅಧಿಕೃತ ವೆಬ್ ಸೈಟ್ ಗೆ www.newindia.co.in ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ “APPLY ONLINE” ಲಿಂಕ್ ಕ್ಲಿಕ್ ಮಾಡಿ.
ನಂತರ “Click here for New Registration” ಆಯ್ಕೆ ಮಾಡಿ
ಕೇಳಲಾಗುವ ಎಲ್ಲಾ ವಿವರಗಳನ್ನು ಒದಗಿಸಿರಿ, ಮತ್ತು ಲಾಗಿನ್ ರಿಜುವತುಗಳಿಂದ ನಿಮ್ಮ ಖಾತೆಯನ್ನು ಲಾಗಿನ್ ಮಾಡಿರಿ. ಇತ್ತೀಚಿನ ಪ್ರಕಟಣೆಗಳಲ್ಲಿ NIACL AO Recruitment 2024 ಹುಡುಕಿ, ಲಿಂಕ್ ಕ್ಲಿಕ್ ಮಾಡಿ.
ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಗೌರಗಳನ್ನು ಒದಗಿಸಿರಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿ.
ಕೊನೆದಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಭವಿಷ್ಯದ ಉದ್ದೇಶಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ