ನೃಪತುಂಗ ವಿಶ್ವವಿದ್ಯಾಲ, ಬೆಂಗಳೂರು ಅಧಿಕೃತ ಅಧಿಸೂಚನೆಯ ಮೂಲಕ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಬೆಂಗಳೂರಿನಲ್ಲಿ ಪ್ರಾಧ್ಯಾಪಕ ಹುದ್ದೆಯ ಮೂಲಕ ವೃತ್ತಿಜೀವನವನ್ನು ಕಂಡುಕೊಳ್ಳಲು ಬಯಸಿದ್ದರೆ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10, 2025 ರಂದು ಬೆಳಿಗ್ಗೆ 11:00 ಗಂಟೆಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ವಾಕ್-ಇನ್ ದಿನಾಂಕ – ಅಕ್ಟೋಬರ್ 10, 2025 ರ ಬೆಳಿಗ್ಗೆ 11:00 ಗಂಟೆಗೆ
ಒಟ್ಟು ಹುದ್ದೆಗಳು:
ಸಹಾಯಕ ಪ್ರಾಧ್ಯಾಪಕರು (ಶೈಕ್ಷಣಿಕ ಅಧ್ಯಯನ) – 1
ಸಹಾಯಕ ಪ್ರಾಧ್ಯಾಪಕರು (ಬಿಬಿಎ) – 1
ಶೈಕ್ಷಣಿಕ ಅರ್ಹತೆ:
ಸಹಾಯಕ ಪ್ರಾಧ್ಯಾಪಕರು (ಶೈಕ್ಷಣಿಕ ಅಧ್ಯಯನ) – ಸ್ನಾತಕೋತ್ತರ ಪದವಿ, ಎಂ.ಎಡ್.
ಸಹಾಯಕ ಪ್ರಾಧ್ಯಾಪಕರು (ಬಿಬಿಎ) ಸ್ನಾತಕೋತ್ತರ ಪದವಿ, ಎಂಬಿಎ, ಎಂ.ಕಾಂ.
ವಯೋಮಿತಿ:
ಅಧಿಸೂಚನೆಯಲ್ಲಿ ವಯೋಮಿತಿಯ ಕುರಿತಾದ ಯಾವುದೇ ಮಾಹಿತಿ ನೀಡಿರುವುದಿಲ್ಲ. ನೃಪತುಂಗ ವಿಶ್ವವಿದ್ಯಾಲಯದ ಮಾನದಂಡಗಳ ಪ್ರಕಾರ ವಯೋಮಿತಿ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ವೇತನ:
ಆಯ್ಕೆಯಾದ ಅರ್ಹ ಅಭ್ಯರ್ಥಿಗೆ ಮಾಸಿಕ 35,000/- ವೇತನ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
ನೃಪತುಂಗ ವಿಶ್ವವಿದ್ಯಾಲಯ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಲಿಂಕನ್ನು ಕೆಳಗೆ ನೀಡಲಾಗಿದೆ. ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಶೈಕ್ಷಣಿಕ ಅರ್ಹತೆಯನ್ನು ಪೂರ್ಣ ಗೊಳಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ಅರ್ಜಿ ನಮೂನೆಯ ಲಿಂಕನ್ನು ನೀಡಲಾಗಿದೆ . ಡೌನ್ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಪೂರೈಸಿ.
ನಿಮ್ಮ ಐಡಿ ಮೂಲ ದಾಖಲೆಗಳು, ವಿದ್ಯಾರ್ಹತೆಯ ದಾಖಲೆಗಳು, ಅನುಭವದ ದಾಖಲೆಗಳಿದ್ದರೆ ಅವುಗಳ ಮೂಲ ಮತ್ತು ಛಾಯಾ ಪ್ರತಿಯನ್ನು ಹಾಗೂ ಎರಡು ಭಾವಚಿತ್ರಗಳನ್ನು ಅರ್ಜಿ ನಮೂನೆಗೆ ಲಗತ್ತಿಸಿ ಇಟ್ಟುಕೊಳ್ಳಿ.
ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ ಮೇಲಿನ ಎಲ್ಲ ದಾಖಲೆಗಳೊಂದಿಗೆ ವಾಕ್-ಇನ್ ಸಂದರ್ಶನ್ ನಡೆಯುವ ಕೆಳಗಿನ ಸ್ಥಳಕ್ಕೆ ಅಕ್ಟೋಬರ್ 10, 2025 ರಂದು ಬೆಳಿಗ್ಗೆ 11:00 ಗಂಟೆಗೆ ಹಾಜರಾಗಬಹುದು.
ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿ, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು, ಕರ್ನಾಟಕ
ರಾಮಕೃಷ್ಣ ಬಿ ಹೆಚ್ ಅವರು 2020ರಿಂದ ಉದ್ಯೋಗ ಸುದ್ದಿಯ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.