2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೀಡಿ/ಸುಣ್ಣದ ಕಲ್ಲು/ ಡೊಲೊಮೈಟ್/ಗಣಿ/ಕಬ್ಬಿಣ, ಕ್ರೋಮ್ ಮತ್ತು ಮ್ಯಾಂಗನೀಸ್ ಅದಿರು ಗಣಿ/ಸಿನಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ(NSP Labour Scholarship 2025) ಪೋರ್ಟಲ್ ಮೂಲಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಚಿವಾಲಯದ ಬೀಡಿ, ಸಿನಿ ಮತ್ತು ಕಲ್ಲಿದ್ದಲು ರಹಿತ ಕಾರ್ಮಿಕರ ಯೋಜನೆಯ ಹಣಕಾಸು ಸಹಾಯ ವಾರ್ಡ್ ಗಳಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬೀಡಿ/ಸುಣ್ಣದ ಕಲ್ಲು/ ಡೊಲೊಮೈಟ್/ಗಣಿ/ಕಬ್ಬಿಣ, ಕ್ರೋಮ್ ಮತ್ತು ಮ್ಯಾಂಗನೀಸ್ ಅದಿರು ಗಣಿ/ಸಿನಿ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಆರ್ಥಿಕವಾಗಿ ಉತ್ತೇಜಿಸಲು ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ scholarships.gov.in ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – 11-06-2025
ಮೆಟ್ರಿಕ್ ಪೂರ್ವ(Pre Matric) ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31-08-2025
ಮೆಟ್ರಿಕ್ ನಂತರದ(Post Matric) ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31-10-2025
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:
ಪ್ರತಿಯೊಬ್ಬ ವಿದ್ಯಾರ್ಥಿಯು ಕೋರ್ ಬ್ಯಾಂಕಿoಗ್ ವ್ಯವಸ್ಥೆ ಮತ್ತು ರಾಷ್ಟ್ರೀಯ ಎಲೆಕ್ಟಾನಿಕ್ ನಿಧಿ ವರ್ಗಾವಣೆ (NEFT) ಸೌಲಭ್ಯಗಳನ್ನು ಹೊಂದಿರುವ ರಾಷ್ಟ್ರೀಯ ಕೃತ/ಪರಿಶಿಷ್ಟ/ಸಹಕಾರಿ/ಗ್ರಾಮೀಣ/ಖಾಸಗಿ ಬ್ಯಾಂಕ್‌ನಲ್ಲಿ ಆಧಾರ್-ಸಂಯೋಜಿತ ವೈಯಕ್ತಿಕ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಅರ್ಜಿಗಳನ್ನು ಸಲ್ಲಿಸಲು ಒಂದು ಬಾರಿ ನೋಂದಣಿ (OTR) ಪ್ರಕ್ರಿಯೆಯು ಕಡ್ಡಾಯವಾಗಿದೆ. OTR ಪೂರ್ಣಗೊಳಿಸಲು ಆಧಾರ್ ಕಡ್ಡಾಯ ಮತ್ತು ಪಾವತಿಗಳನ್ನು ಆಧಾರ್ ಪೇ ಬ್ರಿಡ್ಜ್ (APB) ವ್ಯವಸ್ಥೆಯ ಮೂಲಕ ಮಾತ್ರ ವಿತರಿಸಲಾಗುತ್ತದೆ.
ಸಾಂಪ್ರದಾಯಿಕ ಬ್ಯಾಂಕ್ ಖಾತೆ ಪಾವತಿಗಳ ಮೂಲಕ ವಿತರಿಸಲಾಗುವುದಿಲ್ಲ.
ಸಹಾಯಧನ/ವಿದ್ಯಾರ್ಥಿವೇತನದ ವಿವರ:
1 ರಿಂದ 4 ತರಗತಿಯ ವಿದ್ಯಾರ್ಥಿಗಳಿಗೆ (ಉಡುಪುಗಳು/ಪುಸ್ತಕಗಳು ಇತ್ಯಾದಿಗಳ ಖರೀದಿಗೆ) 1000 ರೂ.
5 ರಿಂದ 8 ತರಗತಿಯ ವಿದ್ಯಾರ್ಥಿಗಳಿಗೆ 1,500ರೂ.
9 ರಿಂದ 10 ತರಗತಿಯ ವಿದ್ಯಾರ್ಥಿಗಳಿಗೆ 2000ರೂ. • 11 ರಿಂದ 12 ತರಗತಿಯ ವಿದ್ಯಾರ್ಥಿಗಳಿಗೆ 3000ರೂ.
ITI, ಪಾಲಿಟೆಕ್ನಿಕ್ ಮತ್ತು /ಪದವಿ (ಬಿಎಸ್‌ಸಿ ಕೃಷಿ ಸೇರಿದಂತೆ) ಕೋರ್ಸ್ ಗಳಿಗೆ 6000ರೂ.
ವೃತ್ತಿಪರ ಕೋರ್ಸ್ ಗಳಿಗೆ 25,000 ರೂ.
ಅರ್ಜಿ ಸಲ್ಲಿಸುವ ವಿಧಾನ:
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ scholarships.gov.in ಗೆ ಭೇಟಿ ನೀಡಿ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿ ಲಾಗಿನ್ ಆಗಿ.
ಅರ್ಜಿಯಲ್ಲಿ ಕೇಳಲಾಗುವ ಸ್ವಭಾವವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.