ಆಯಿಲ್ ಇಂಡಿಯಾ ಲಿಮಿಟೆಡ್ (OIL)ನ ಫೀಲ್ಡ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಖಾಲಿ ಇರುವ ಒಟ್ಟು 262 ಕೆಲಸಗಾರರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಫೀಲ್ಡ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಗ್ರೇಡ್ III, V ಮತ್ತು VII(ಕೆಲಸಗಾರರ) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://www.oil-india.com/advertisement-listಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 18, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 18, 2025
ಶೈಕ್ಷಣಿಕ ಅರ್ಹತೆ:
ಗ್ರೇಡ್ III ಹುದ್ದೆಗಳಿಗೆ – ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ 10ನೇ(SSLC), 12ನೇ(PUC) ತರಗತಿ ಉತ್ತೀರ್ಣ/ಅಗ್ನಿಶಾಮಕ ಮತ್ತು ಸುರಕ್ಷತೆಯಲ್ಲಿ 1 ವರ್ಷದ ಡಿಪ್ಲೊಮಾ/ ಪ್ರಮಾಣಪತ್ರ ಅಥವಾ NFSC, ನಾಗುರದಿಂದ ಉಪ ಅಧಿಕಾರಿಗಳ ಕೋರ್ಸ್ ಪೂರ್ಣಗೊಳಿಸಬೇಕು.
ಗ್ರೇಡ್ V ಹುದ್ದೆಗಳಿಗೆ – ಭಾರತೀಯ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಎಸ್ಸಿ. ನರ್ಸಿಂಗ್ ಅಥವಾ ಪೋಸ್ಟ್ ಬೇಸಿಕ್ ಬಿ.ಎಸ್ಸಿ. ನರ್ಸಿಂಗ್ (ಪಿಬಿ-ಬಿ.ಎಸ್ಸಿ.) ಉತ್ತೀರ್ಣ. ಹಿಂದಿಯಲ್ಲಿ ಮೇಜರ್/ಆನರ್ಸ್ ಪದವಿಯಲ್ಲಿ ಉತ್ತೀರ್ಣ. ಪದವಿಯಲ್ಲಿ ಇಂಗ್ಲಿಷ್ ಒಂದು ವಿಷಯವಾಗಿರಬೇಕು.
ಗ್ರೇಡ್ VII ಹುದ್ದೆಗಳಿಗೆ – ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ.
ಸೂಚನೆ: ಇಲ್ಲಿ ಹುದ್ದೆಗಳ ಗುಂಪು ಆಧಾರಿತವಾಗಿ ವಿದ್ಯಾರ್ಹತೆ ನೀಡಲಾಗಿದ್ದು, ಹುದ್ದೆಗಳ ಆಧಾರಿತ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.
ವಯೋಮಿತಿ:
18-08-2025 ರಂತೆ;
ಕನಿಷ್ಠ ಮಿತಿ – 18 ವರ್ಷಗಳು
ಗರಿಷ್ಠ ಮಿತಿ – 38 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ(PEME)
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 200 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇಡಬ್ಲ್ಯೂ ಎಸ್, ಪಿಡಬ್ಲ್ಯೂಬಿಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
How to Apply for OIL India Workperson Recruitment 2025
ಅರ್ಜಿ ಸಲ್ಲಿಸುವ ವಿಧಾನ;
ಆಯಿಲ್ ಇಂಡಿಯಾ ಅಧಿಕೃತ ವೆಬ್ಸೈಟ್ https://cdn.digialm.com/EForms/configuredHtml/1258/94484/Index.html ಗೆ ಭೇಟಿ ನೀಡಿ.
ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Sir,
I sent you my application for store manager position please consider the same