ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಜಿಇಟಿ-2025ನೇ ಸಾಲಿನ ಪಿಜಿ ದಂತವೈದ್ಯಕೀಯ ಕೋರ್ಸುಗಳ (MDS) ಎರಡನೇ ಸುತ್ತಿನ ಸೀಟು ಹಂಚಿಕೆ ವಿವರವಾದ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ನೀಟ್ ಎಂಡಿಎಸ್ 2025 ರಲ್ಲಿ ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳಿಂದ 2025-26ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ ಸ್ನಾತಕೋತ್ತರ ಪದವಿ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಪ್ರಸ್ತುತ ಪ್ರಾಧಿಕಾರವು ಸದರಿ ಪ್ರವೇಶಾತಿ ಸಂಬಂಧ MDS ಎರಡನೇ ಸುತ್ತಿನ ಸೀಟು ಹಂಚಿಕೆ ವಿವರವಾದ ಮಾಹಿತಿಯನ್ನು ಕೆಇಎ ಅಧಿಕೃತ ವೆಬ್ ಸೈಟ್ https://cetonline.karnataka.gov.in/kea/ ನಲ್ಲಿ ಬಿಡುಗಡೆ ಮಾಡಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಪಿಜಿ ದಂತವೈದ್ಯಕೀಯ ಕೋರ್ಸುಗಳ (MDS) – 2025 ಪ್ರವೇಶಾತಿ
ಮೊದಲನೇ ಸುತ್ತಿನಲ್ಲಿ Choice-3 ಆಯ್ಕೆ ಮಾಡಿರುವ ಅಭ್ಯರ್ಥಿಗಳು ಮತ್ತು ಮೊದಲನೇ ಸುತ್ತಿಗೆ ಇಚ್ಛೆ / ಆಯ್ಕೆ ದಾಖಲಿಸಿ ಆದರೆ ಯಾವುದೇ ಸೀಟು ಹಂಚಿಕೆಯಾಗಿಲ್ಲದಿರುವ ಅಭ್ಯರ್ಥಿಗಳು ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲು ಜುಲೈ 22 ರಿಂದ 24ರ ವರೆಗೆ 1 ಲಕ್ಷ ರೂ. (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 50,000ರೂ.) CAUTION DEPOSIT ಅನ್ನು ಪಾವತಿಸಬೇಕು.
ಮೊದಲನೆ ಸುತ್ತಿನಲ್ಲಿ Choice-2 ಆಯ್ಕೆ ಮಾಡಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು, CAUTION DEPOSIT ಪಾವತಿಸುವಂತಿಲ್ಲ.
CAUTION DEPOSIT ಅನ್ನು ಪಾವತಿಸಲು ವಿಫಲರಾದ ಅಭ್ಯರ್ಥಿಗಳು ಎರಡನೇ ಸುತ್ತಿಗೆ ಇಚ್ಚೆ / ಆಯ್ಕೆಗಳನ್ನು ದಾಖಲಿಸಲು ಅನುಮತಿಸುವುದಿಲ್ಲ.
ಎರಡನೇ ಸುತ್ತಿನಲ್ಲಿ ಎಂಡಿಎಸ್ ಸೀಟು ಹಂಚಿಕೆಯಾದಲ್ಲಿ ಅಭ್ಯರ್ಥಿಯು ಪಾವತಿಸಿರುವ CAUTION DEPOSIT ಅನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುವುದು.
ವಿಶೇಷ ಸೂಚನೆ: ಎರಡನೇ ಸುತ್ತಿನಲ್ಲಿ ಎಂಡಿಎಸ್ ಸೀಟು ಹಂಚಿಕೆಯಾಗಿ ಅಭ್ಯರ್ಥಿಯು ಉಳಿದ ಶುಲ್ಕವನ್ನು ಪಾವತಿಸಲು ಅಥವಾ ಕಾಲೇಜಿಗೆ ಪ್ರವೇಶ ಪಡೆಯಲು ವಿಫಲನಾದಲ್ಲಿ, ಅಭ್ಯರ್ಥಿಯು ಪಾವತಿಸಿದ್ದ CAUTION DEPOSIT ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ನಿಯಮಾನುಸಾರ ದಂಡ ಶುಲ್ಕವನ್ನು ಪಾವತಿಸಬೇಕು.
PGET 2025 2nd Round Counselling Schedule Details
ಪಿಜಿಸಿಇಟಿ MDS-2025 ಎರಡನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ;
ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ಬದಲಾಯಿಸಲು, ಅಳಿಸಲು ಅಥವಾ ಮಾರ್ಪಡಿಸಲು ಜು.22 ರಿಂದ 25 ರವರೆಗೆ ಕಾಲಾವಕಾಶ ನೀಡಲಾಗಿದೆ. (CAUTION DEPOSIT ಪಾವತಿಸಿರುವವರಿಗೆ ಮಾತ್ರ)
ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪಟ್ಟಿಯನ್ನು ಜು.26ರಂದು ಪ್ರಕಟಿಸಲಾಗುತ್ತದೆ.
ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಜು.27ರಂದು ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಚಲನ್ ಡೌನ್ಲೋಡ್ ಮಾಡಿಕೊಳ್ಳಲು ಜು.28 ರಿಂದ 30
ರವರೆಗೆ ಕಾಲಾವಕಾಶ ನೀಡಲಾಗಿರುತ್ತದೆ.
ಅಭ್ಯರ್ಥಿಗಳು ಜು.29 ರಿಂದ 31ರವರೆಗೆ ಚಲನ್ ಡೌನ್ಲೋಡ್ ಮಾಡಿಕೊಂಡು ಬ್ಯಾಂಕ್ ಮೂಲಕ ಶುಲ್ಕ ಪಾವತಿಸುವುದು ಹಾಗೂ ಮೂಲ ದಾಖಲೆಗಳನ್ನು ಕೆಇಎ, ಬೆಂಗಳೂರು ಇಲ್ಲಿ ಸಲ್ಲಿಸಬೇಕು.
ಮೇಲಿನ ಎಲ್ಲ ಪ್ರಕ್ರಿಯೆ ಶುಲ್ಕ ಪಾವತಿ ಹಾಗೂ ಮೂಲ ದಾಖಲೆಗಳನ್ನು ಸಲ್ಲಿಸಿದ ನಂತರ ಅಭ್ಯರ್ಥಿಗಳು ಜು.29 ರಿಂದ ಪ್ರವೇಶ ಆದೇಶವನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಹಾಗೂ ಸಂಬಂಧಿಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯುವುದು.
ವಿದ್ಯಾರ್ಥಿಗಳು ಆ.2ರೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು.
Important Direct Links:
PGET 2025 2nd Round Counselling Schedule Notice PDF | Downlaod |
Official Website | KEA Home |
More Updates | KarnatakaHelp.in |