WhatsApp Channel Join Now
Telegram Group Join Now

PM Kusum Yojana: ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಲು ಶೇ.90ರಷ್ಟು ಸಹಾಯಧನ

PM Kusum yojana: ಕುಸುಮ್ ಯೋಜನೆ (ಕಿಸಾನ್ ಉರ್ಜಾ ಸುರಕ್ಷಾ ಅಥವಾ ಅವಕಾಶ ಮಹಾತ್ವ ಕಾರ್ಯಕ್ರಮ) ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದ ಒಂದು ಯೋಜನೆಯಗಿದೆ. ಈ ಯೋಜನೆಯು ರೈತರಿಗೆ ಸೌರ ಶಕ್ತಿಯನ್ನು ಉಪಯೋಗಿಸಲು ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದೆ.

ಕುಸುಮ್ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ನೀಡಿದ್ದೇವೆ. ಸಂಪೂರ್ಣ ಮಾಹಿತಿಗಾಗಿ ಲೇಖನವನ್ನ ಕೊನೆ ವರೆಗೆ ಓದಿ.

PM Kusum Yojana 2024 – Shortview

Article NamePM Kusum Yojana Karnataka
Full form of PM Kusum Pradhan Mantri Kisan Urja Suraksha evam Utthaan Mahabhiyan
DepartmentGovernment of India
Year of launched2019
Article TypeGovt Scheme
PM Kusum Yojana

Components of PM Kusum Yojana

ಯೋಜನೆಯ ಘಟಕಗಳು ಬಗ್ಗೆ ಮಾಹಿತಿ ಈ ಕೆಳಗಿನಂತಿವೆ;

ಘಟಕ-ಎ: ಈ ಘಟಕವು ರೈತರಿಗೆ ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಲು ಶೇಕಡಾ 90ರಷ್ಟು ಸಹಾಯಧನವನ್ನು ಒದಗಿಸುತ್ತದೆ.

ಘಟಕ-ಬಿ: ಈ ಘಟಕವು ರೈತರಿಗೆ ತಮ್ಮ ಖಾಲಿ ಭೂಮಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಶೇಕಡಾ 40ರಷ್ಟು ಸಹಾಯಧನವನ್ನು ನೀಡುತ್ತದೆ.

ಘಟಕ-ಸಿ: ಈ ಘಟಕವು ಸಹಕಾರ ಸಂಘಗಳು ಮತ್ತು ರೈತರ ಉತ್ಪಾದಕ ಸಂಸ್ಥೆಗಳಿಗೆ ಸೌರ ಪಂಪ್‌ಸೆಟ್‌ಗಳು ಅಥವಾ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಶೇಕಡಾ 40ರಷ್ಟು ಸಹಾಯಧನವನ್ನು ನೀಡುತ್ತದೆ.

Objective of PM Kusum Scheme

ಯೋಜನೆಯ ಉದ್ದೇಶಗಳು ಈ ಕೆಳಗಿನಂತಿವೆ;

  • ರೈತರಿಗೆ ವಿದ್ಯುತ್ ಖರ್ಚನ್ನು ಕಡಿಮೆ ಮಾಡಲು ಸಹಾಯ ಮಾಡುವುದು.
  • ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದು.
  • ರೈತರ ಆದಾಯವನ್ನು ಹೆಚ್ಚಿಸುವುದು.
  • ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು.

Benefits of PM Kusum Yojana

ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ;

  1. ರೈತರಿಗೆ ವಿದ್ಯುತ್ ಖರ್ಚಿನಲ್ಲಿ ಭಾರಿ ಉಳಿತಾಯವಾಗುತ್ತದೆ
  2. ನೀರಾವರಿ ವೆಚ್ಚ ಕಡಿಮೆಯಾಗುತ್ತದೆ.
  3. ರೈತರ ಆದಾಯದಲ್ಲಿ ಉಳಿತಾಯ.
  4. ಪರಿಸರ ಸಂರಕ್ಷಣೆಗೆ ಸಹಾಯ ಮಾಡುತ್ತದೆ.

How to Apply for PM Kusum Yojana

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡುವುದಾದರೆ: ರೈತರು ಯೋಜನೆಯ ಅಧಿಕೃತ ವೆಬ್‌ಸೈಟ್‌ https://pmkusum.mnre.gov.in/ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಬಹುದು.

ಅರ್ಜಿ ನಮೂನೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸ್ಥಳೀಯ ಕೃಷಿ ಇಲಾಖೆಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ:

PM-KUSUM ಯೋಜನೆಯ ಅಧಿಕೃತ ವೆಬ್‌ಸೈಟ್ https://pmkusum.mnre.gov.in/ ಗೆ ಭೇಟಿ ನೀಡಬಹುದು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧಿಕೃತ ವೆಬ್ ಸೈಟ್ https://kredl.karnataka.gov.in/ ಗೆ ಭೇಟಿ ನೀಡಬಹುದಾಗಿದೆ.

ಕುಸುಮ್ ಯೋಜನೆಯು ರೈತರಿಗೆ ಸೌರ ಶಕ್ತಿಯನ್ನು ಉಪಯೋಗಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಉತ್ತಮ ಅವಕಾಶವನ್ನು ಒದಗಿಸುವ ಯೋಜನೆಯಗಿದ್ದು, ರೈತರು ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Important Links:

Official Websitepmkusum.mnre.gov.in
More UpdatesKarnatakaHelp.in

Leave a Comment