2025-26ನೇ ಸಾಲಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಣಿ ಪ್ರಾರಂಭವಾಗಿದೆ
ಮಳೆ ಅಭಾವದಿಂದ ಬಿತ್ತನೆ ವಿಫಲಗೊಳ್ಳುವುದು, ತೇವಾಂಶ ಕೊರತೆ, ಬರಗಾಲದಿಂದ ಬೆಳೆಗಳ ನಾಶ, ಅತಿಯಾದ ಮಳೆಯಿಂದ ಬೆಳೆ ಮುಳುಗಡೆಯಾಗಿರುವುದು, ಕಟಾವಾದ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ 14 ದಿನಗಳೊಳಗಾಗಿ ಅಕಾಲಿಕ ಚಂಡಮಾರುತ, ಮಳೆಯಿಂದ ನಷ್ಟವಾದರೆ(ಬೆಳೆಯು ಬಿತ್ತನೆಯಾಗಿ ಒಂದು ತಿಂಗಳಾಗಿರಬೇಕು ಮತ್ತು ಕಟಾವಿಗಿಂತ 15 ದಿನಕ್ಕಿಂತ ಮುಂಚಿತವಾಗಿರಬೇಕು) ಮುಂತಾದ ಇಂತಹ ಸಮಸ್ಯೆಗಳಿಗೆ ವಿಮೆ ಸಿಗಲಿದೆ.
ಅಲಸಂದೆ, ಉದ್ದು, ಎಳ್ಳು, ಜೋಳ, ಟೊಮೆಟೊ, ತೊಗರಿ, ರಾಗಿ, ಹುರುಳಿ, ಹೆಸರು, ಹತ್ತಿ, ಎಲೆಕೋಸು, ನೆಲಗಡಲೆ ಮತ್ತು ಭತ್ತ.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು:
ಜಮೀನಿನ ಪಹಣಿ
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ನೋಂದಣಿಗೆ ಕೊನೆ ದಿನ ಏನು?
ಬೆಳೆ ಹೆಸರು
ಕೊನೆ ದಿನಾಂಕ
ಎಲೆಕೋಸು, ಜೋಳ, ನೆಲಗಡಲೆ, ಟೊಮೆಟೊ,
ಜುಲೈ 15
ಹತ್ತಿ, ಮುಸುಕಿನಜೋಳ ತೊಗರಿ, ರಾಗಿ, ರಾಗಿ(ನೀರಾವರಿ)
ಜುಲೈ 31
ಹುರುಳಿ, ಭತ್ತ(ನೀರಾವರಿ)
ಆಗಸ್ಟ್ 16
ನಿಮಗೆ ಸಮೀಪದ ಬ್ಯಾಂಕ್ ಅಥವಾ ನಾಗರಿಕ ಸೇವಾ ಕೇಂದ್ರ(CSC) ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು ಹೀಗಾಗಿ ರೈತಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಪ್ರಯೋಜನ ಪಡೆದುಕೊಳ್ಳಿ ಎಂದು ಮೈಸೂರು ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಬಿ .ಡಿ.ಜಯರಾಮ ಪ್ರಕಟಣೆಯಲ್ಲಿ ಕೋರಿದ್ದಾರೆ.
ಬಂಧುಗಳೇ ಗಮನಿಸಿ, ಸ್ವಯಂ ನೋಂದಣಿಗೆ ಅವಕಾಶವಿರುವುದಿಲ್ಲ, ನಿಮಗೆ ಹತ್ತಿರವಿರುವ ಬ್ಯಾಂಕ್/CSC ಕೇಂದ್ರ/ಕರ್ನಾಟಕ ಒನ್/ಗ್ರಾಮ ಒನ್ ಕೇಂದ್ರಕ್ಕೆ ನಿಗದಿತ ದಾಖಲೆಗಳ ಸಮೇತ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.