ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರಿಕೀಕರಣ ಯೋಜನೆ (PMFME)ಯ ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.
ಸೂಕ್ಷ್ಮ ಹಾಗೂ ಸಣ್ಣ ಆಹಾರ ಉದ್ದಿಮೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ PMFME ಯೋಜನೆಯನ್ನು ಜಾರಿಗೆ ತರಲಾಗಿದೆ. ಸದರಿ ಯೋಜನೆಯಲ್ಲಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಮತ್ತು ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಸಾಲ ಸೌಲಭ್ಯ ಜೊತೆಗೆ ಗರಿಷ್ಠ 15 ಲಕ್ಷರೂ.ಗಳವರೆಗೆ ಸಹಾಯಧನವನ್ನು ಪಡೆಯುವ ಅವಕಾಶವಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು PMFME ಅಧಿಕೃತ ಜಾಲತಾಣ https://pmfme.mofpi.gov.in/pmfme/#/Home-Pageಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
PMFME ಯೋಜನೆಯಲ್ಲಿ ರೈತರು ಸ್ಥಳೀಯವಾಗಿ ಬೆಳೆಯುವ ಅಥವಾ ತಯಾರಿಸುವ ಉತ್ಪನ್ನಗಳಾದ ರೊಟ್ಟಿ/ಚಪಾತಿ ಮೇಕರ್, ಹಿಟ್ಟಿನ ಗಿರಣಿಗಳು ಮತ್ತು ಪ್ಯಾಕಿಂಗ್ ಮಷಿನ್ ಎಣ್ಣೆ ಗಾಣಗಳು, ಮಿನಿ ದಾಲ್ಮಿಲ್, ಬೇಕರಿ ಉತ್ಪನ್ನಗಳ ತಯಾರಿಕೆ ಅರಿಶಿಣ ಸಂಸ್ಮರಣೆ, ತೆಂಗಿನಕಾಯಿ ಉತ್ಪನ್ನಗಳ ತಯಾರಿಕೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಚಕ್ಲಿ ನಿಪ್ಪಟ್ಟು, ಪಾನಿಪೂರಿ, ಕೋಡಬಳೆ, ಮಿಕ್ಸರ್, ಚಿಪ್ಸ್ ತಯಾರಿಕೆ, ಕಡ್ಲೆಪುರಿ, ಮಂಡಳ ತಯಾರಿಕೆ, ಮಸಾಲಾ ಪದಾರ್ಥಗಳ ಸಂಬಾರು ಉತ್ಪನ್ನಗಳ ತಯಾರಿಕೆ, ಹಾಲಿನ ಉತ್ಪನ್ನಗಳ ತಯಾರಿಕೆ, ಸಿಹಿ ತಿಂಡಿಗಳುಖಾರಾ ತಿಂಡಿಗಳ ತಯಾರಿಕೆ, ಬೆಲ್ಲಾ ತಯರಿಕೆ ಘಟಕ, ಕಡ್ಲೆ ಮಿಠಾಯಿ ತಯಾರಿಕೆ, ಕಾಫಿ ಪುಡಿ, ಟೀ ಪುಡಿ ಸಂಸ್ಕರಣಾ ಘಟಕ, ಚಾಕಲೇಟು ತಯಾರಿಕೆ, ಜೇನು ಸಂಸ್ಕರಣಾ ಘಟಕ, ಸಿರಿಧಾನ್ಯಗಳಿಂದ ಉಪ ಉತ್ಪನ್ನಗಳ ತಯಾರಿಕೆ, ಫ್ರೂಟ್ಸ್ ಪ್ರೋಸೆಸಿಂಗ್, ಐಸ್ಟ್ರೀಮ್ ತಯಾರಿಕೆ, ಶೇವಿಗೆ, ಜೇನು ಸಂಸ್ಕರಣಾ ಘಟಕ, ಹಸಿಮೆಣಸಿನಕಾಯಿ ಮತ್ತು ಟೊಮೆಟೊ ಪೇಸ್ಟ್ ಮತ್ತು ಸಾಸ್ ತಯಾರಿಕೆ, ರವಾ ನೂಡಲ್ಸ್ ತಯಾರಿಕೆ. ಇನ್ನಿತರ ಯಾವುದೇ ಆಹಾರ ಉತ್ಪನ್ನಗಳನ್ನು ಬ್ರ್ಯಾಂಡಿಂಗ್ ಮೂಲಕ ಕೃಷಿ-ಆಹಾರ ಸಂಸ್ಕರಣ ವಲಯವನ್ನು ಬೆಳೆಸುವ ಉದ್ದೇಶದಿಂದ ತಯಾರಿಕೆ ಘಟಕಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ.
PMFME ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಅರ್ಜಿದಾರರು ಇತರೆ ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ವೈಯಕ್ತಿಕ ಉದ್ದಿಮೆಗಳು, ಮಾಲೀಕತ್ವದ ಸಂಸ್ಥೆ, ಪಾಲುದಾರಿಕೆ ಸಂಸ್ಥೆ, ಖಾಸಗಿ ಸಂಸ್ಥೆ, ರೈತ ಉತ್ಪಾದಕರ ಸಂಸ್ಥೆ, ಸರ್ಕಾರೇತರ ಸಂಸ್ಥೆ ಮತ್ತು ಸ್ವ-ಸಹಾಯ ಸಂಘಗಳ ಅಭ್ಯರ್ಥಿಗಳು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ನಿಗದಿಪಡಿಸಿರುವುದಿಲ್ಲ.
ವಯೋಮಿತಿ:
ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
PMFME ಯೋಜನೆಯ ಅಡಿಯಲ್ಲಿ ನೀಡಲಾಗುವ ಸಾಲ ಹಾಗೂ ಸಬ್ಸಿಡಿ ಮೊತ್ತ:
ಯೋಜನೆಯಡಿಯಲ್ಲಿ ಸಾಲ ಜೊತಗೆ ಶೇ.35ರಷ್ಟು ಸಹಾಯಧನ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ.15 ಸಹಾಯಧನ ನೀಡಲಾಗುತ್ತದೆ. ಗರಿಷ್ಠ 15 ಲಕ್ಷರೂ. ಅಥವಾ ಶೇ.50 ರಷ್ಟು ಸಹಾಯಧನ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿದಾರನ ತಾಯಿಯ ಹೆಸರು
ಅರ್ಜಿದಾರನ ಮೊಬೈಲ್ ಸಂಖ್ಯೆ
ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
ಪ್ಯಾನ್ ಕಾರ್ಡ್
ಆಧಾರ್ ಕಾರ್ಡ್
ರೇಷನ್ ಕಾರ್ಡ್
ವಿದ್ಯುತ್ ಬಿಲ್
ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ
ಗ್ರಾಮ ಪಂಚಾಯತ್ (ಪರವಾನಿಗೆ ಪತ್ರ)
ಉದ್ಯಮ ಪರವಾನಗಿ ಪತ್ರ/ಉದ್ಯಮ ನಡೆಸುವ ಸ್ವಂತ ಸ್ಥಳ ಅಥವಾ ಬಾಡಿಗೆ ಒಪ್ಪಂದ ಪತ್ರ
ಆಹಾರ ಸಂಸ್ಕರಣ ಘಟಕಕ್ಕೆ ಬೇಕಾಗುವ ಮಷೀನರಿ ಕೋಟೇಷನ್
ಸ್ಥಳದ (ಘಟಕ) ಜಿಯೋ ಟ್ಯಾಗ್ ಫೋಟೋ
ಹಾಗೂ ಇತರೆ ದಾಖಲಾತಿಗಳನ್ನು ಹೊಂದಿರಬೇಕು
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ;
• ಪ್ರಧಾನ ಮಂತ್ರಿ ಔಪಚಾರಿಕೀಕರಣ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಯೋಜನೆಯ ಅಧಿಕೃತ ವೆಬ್ಸೈಟ್https://pmfme.mofpi.gov.in/pmfme/#/Home-Page ಗೆ ಭೇಟಿ ನೀಡಿ.
• ಲಾಗಿನ್ ಮೇಲೆ ಕ್ಲಿಕ್ ಮಾಡಿ, ನಂತರ *ಅರ್ಜಿದಾರರ ಲಾಗಿನ್* ಮೇಲೆ ಕ್ಲಿಕ್ ಮಾಡಿ.
Pmfme Online Application Form 2025-26
• ಬಳಿಕ PMFME ಯೋಜನೆಯ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
• ಭವಿಷ್ಯದ ಬಳಕೆಗಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
• ನಂತರ ಅರ್ಜಿ ಅನುಮೋದನೆಗಾಗಿ ಕಾಯಿರಿ.
ಹೆಚ್ಚಿನ ಮಾಹಿತಿಗಾಗಿ: ಬೀದರ್-ಕಲಬುರಗಿ-ಯಾದಗಿರಿ-ರಾಯಚೂರು ಕೃಷಿ ಇಲಾಖೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎಂ.ಜಿ ಪ್ರಶಾಂತ್ ವಲ್ಕಿಂಡಿ ಅವರ ಮೊಬೈಲ್ ಸಂಖ್ಯೆ – 9844221449, 9742142744 ಅನ್ನು ಸಂಪರ್ಕಿಸಬಹುದು.
Automobiles automobiles store opening for amount