ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸ್ಥಳೀಯ ಬ್ಯಾಂಕ್ ಅಧಿಕಾರಿ(LBO) ಹುದ್ದೆಗಳ ಭರ್ತಿಗಾಗಿ ಜ.4ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS) ಶುಕ್ರವಾರ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
ನ.03 ಅಧಿಸೂಚಿತ 750 ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) ಹುದ್ದೆಗಳ ನೇಮಕಕ್ಕಾಗಿ ಮೊದಲ ಹಂತದಲ್ಲಿ ನಡೆಸಲಾಗುವ ಆನ್‌ಲೈನ್ ಲಿಖಿತ ಪರೀಕ್ಷೆ 2026ರ ಜನವರಿ 04 (ಭಾನುವಾರ)ರಂದು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು IBPS ಅಧಿಕೃತ ಜಾಲತಾಣದ ಲಿಂಕ್ https://ibpsreg.ibps.in/pnboct25/oecla_dec25/login.php?appid=d895fc056a5b47a5444ca97a9d50fd51ನಲ್ಲಿ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
• ಮೊದಲಿಗೆ ಅಭ್ಯರ್ಥಿಗಳು IBPS ಅಧಿಕೃತ ಜಾಲತಾಣದ ಲಿಂಕ್ https://ibpsreg.ibps.in/pnboct25/oecla_dec25/login.php?appid=d895fc056a5b47a5444ca97a9d50fd51ಗೆ ಭೇಟಿ ನೀಡಿ.
Pnb Lbo 2025 Online Written Exam Admit Card Link
• ನಂತರ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಅಭ್ಯರ್ಥಿಗಳು ಲಾಗಿನ್ ಆದ ಬಳಿಕ ಪ್ರವೇಶ ಪತ್ರ ವಿಭಾಗಕ್ಕೆ ಹೋಗಿ PNB LBO 2025 ಪ್ರವೇಶ ಪತ್ರವನ್ನು ವೀಕ್ಷಿಸಿ.
• ನಂತರ ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಹೆಸರು, ಪರೀಕ್ಷಾ ದಿನಾಂಕ, ಪರೀಕ್ಷೆಗೆ ವರದಿ ಮಾಡಬೇಕಾದ ಸಮಯ, ಸ್ಥಳ ಹಾಗೂ ಇನ್ನಿತರ ಮಾಹಿತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿಕೊಳ್ಳಿ.
• ಕೊನೆಯಲ್ಲಿ ಭವಿಷ್ಯದ ಬಳಕೆಗಾಗಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.