ರೈಲು ಕೋಚ್ ಫ್ಯಾಕ್ಟರಿ(RCF)ನಲ್ಲಿ ಕ್ರೀಡಾ ಕೋಟಾದಡಿ ಉದ್ಯೋಗ..

Published on:

ಕಪುರ್ಥಾಲಾ: ಇಲ್ಲಿನ ರೈಲು ಕೋಚ್ ಫ್ಯಾಕ್ಟರಿ(RCF)ಯು 2026-27ನೇ ಸಾಲಿಗೆ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಗೊಳಿಸಿದೆ.

ಕಚೇರಿ/ಸಾಮಾನ್ಯ ಸಹಾಯಕ, ತಂತ್ರಜ್ಞ-III ಹಾಗೂ ಹಿರಿಯ ಗುಮಾಸ್ತ-ಕಮ್-ಟೈಪಿಸ್ಟ್ ಸೇರಿದಂತೆ ಸುಮಾರು 23 ಸ್ಥಾನಗಳಿಗೆ ಕ್ರೀಡಾ ಅಭ್ಯರ್ಥಿಗಳನ್ನು ನೇಮಕ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಆರ್‌ಸಿಎಫ್‌ ಅಧಿಕೃತ ವೆಬ್ಸೈಟ್ https://rcf.indianrailways.gov.in/view_section.jsp?lang=0&id=0,296,490ಗೆ ಭೇಟಿ ನೀಡಿ, ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ, ಜನರಲ್ ಮ್ಯಾನೇಜರ್ (ಸಿಬ್ಬಂದಿ) ನೇಮಕಾತಿ ಕೋಶ, ರೈಲು ಕೋಚ್ ಕಾರ್ಖಾನೆ, ಕಪುರ್ಥಾಲಾ, ಪಂಜಾಬ್ 144602ವಿಳಾಸಕ್ಕೆ ಅಂಚೆ ಮೂಲಕ ಜು.14 ರೊಳಗೆ ತಲುಪಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜೂನ್ 15, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಜುಲೈ 14, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 14, 2026

ಶೈಕ್ಷಣಿಕ ಅರ್ಹತೆ:

✓ ಕಚೇರಿ/ಸಾಮಾನ್ಯ ಸಹಾಯಕ ಹುದ್ದೆಗಳಿಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ತೇರ್ಗಡೆ/ಐಟಿಐ/ಎನ್‌ಸಿವಿಟಿ ಯಿಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರವನ್ನು ಹೊಂದಿರಬೇಕು.

✓ ತಂತ್ರಜ್ಞ-III ಹುದ್ದೆಗಳಿಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣ ಜೊತೆಗೆ ಸಂಬಂಧಿತ ಟ್ರೇಡ್‌ಗಳಲ್ಲಿ ಎನ್‌ಸಿವಿಟಿಯಿಂದ ನೀಡಲಾದ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.

✓ ಹಿರಿಯ ಗುಮಾಸ್ತ-ಕಮ್-ಟೈಪಿಸ್ಟ್; ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಕಂಪ್ಯೂಟರ್‌ನಲ್ಲಿ ಇಂಗ್ಲಿಷ್/ಹಿಂದಿ ಟೈಪಿಂಗ್ ನಲ್ಲಿ ಪ್ರಾವಣ್ಯತೆಯನ್ನು ಹೊಂದಿರಬೇಕು.

ವಯೋಮಿತಿ:

• 01-07-2026 ರಂತೆ

ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು

ಆಯ್ಕೆ ವಿಧಾನ:

  • ಕ್ರೀಡಾ ಟ್ರಯಲ್‌(ಮಾನದಂಡಗಳ ಪ್ರಕಾರ ಮಾನ್ಯತೆ ಪಡೆದ ಕ್ರೀಡಾ ಸಾಧನೆಗಳ ಮೌಲ್ಯಮಾಪನ, ಆಟದ ಕೌಶಲ್ಯ, ದೈಹಿಕ ಸದೃಢತೆ ಮತ್ತು ಪ್ರಯೋಗಗಳ ಸಮಯದಲ್ಲಿ ತರಬೇತುದಾರರ ವೀಕ್ಷಣೆ)
  • ದಾಖಲೆಗಳ ಪರಶೀಲನೆ

ಸಂಬಳ:

ಕಚೇರಿ/ಸಾಮಾನ್ಯ ಸಹಾಯಕ ಹುದ್ದೆಗಳಿಗೆ ಗ್ರೇಡ್ ಪೇ – 1800
ತಂತ್ರಜ್ಞ-III ಹುದ್ದೆಗಳಿಗೆ ಗ್ರೇಡ್ ಪೇ – 1900
ಹಿರಿಯ ಗುಮಾಸ್ತ-ಕಮ್-ಟೈಪಿಸ್ಟ್ ಹುದ್ದೆಗಳಿಗೆ ಗ್ರೇಡ್ ಪೇ – 2400/2800

ಅರ್ಜಿ ಶುಲ್ಕ:

ಪ.ಜಾತಿ, ಪ.ಪಂಗಡ, ಮಾಜಿ ಸೈನಿಕರು, ಪಿಡಬ್ಲ್ಯೂಡಿ, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.250/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.500/-

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ PFA/RCF/KXH ನ ಆನ್‌ಲೈನ್ ಖಾತೆ ಸಂಖ್ಯೆ: 65035290377, IFSC ಕೋಡ್ SBIN0050540 ಗೆ ಜುಲೈ 14ರ ಮೊದಲು ಠೇವಣಿ ಇಡಲು ಸೂಚಿಸಲಾಗಿದೆ.

ಹೇಗೆ ಅರ್ಜಿ ಸಲ್ಲಿಕೆ..?

• ಮೊದಲಿಗೆ ಅಭ್ಯರ್ಥಿಗಳು RCF ಅಧಿಕೃತ ವೆಬ್ಸೈಟ್ https://rcf.indianrailways.gov.in/view_section.jsp?lang=0&id=0,296,490 ಗೆ ಭೇಟಿ ನೀಡಿ.

• ಬಳಿಕ ನೇಮಕಾತಿಗಳು ಶೀರ್ಷಿಕೆಯ ಕೆಳಗೆ ನೀಡಲಾಗಿರುವ *2026-27ನೇ ಸಾಲಿನ ಮುಕ್ತ ಜಾಹೀರಾತು ಕ್ರೀಡಾ ಕೋಟಾದ ಅಧಿಸೂಚನೆ* ಲಿಂಕ್ ಆಯ್ಕೆ ಮಾಡಿ.

• ನೇಮಕಾತಿಯ ಜಾಹೀರಾತು ವೀಕ್ಷಿಸಿ, ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.

• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಅರ್ಜಿ ಶುಲ್ಕ ಪಾವತಿಸಿದ ರಶೀದಿಯ ಪ್ರತಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• ಲಕೋಟಿಯ ಮೇಲೆ “2026-2027ನೇ ಸಾಲಿನ ಕ್ರೀಡಾ ಕೋಟಾದ ವಿರುದ್ಧ ನೇಮಕಾತಿ ಹಂತ-01, ಹಂತ-02 ಮತ್ತು ಹಂತ- 4/5” ಎಂದು ನಮೂದಿಸಿ.

ಕಚೇರಿ ವಿಳಾಸಕ್ಕೆ: ಜನರಲ್ ಮ್ಯಾನೇಜರ್ (ಸಿಬ್ಬಂದಿ) ನೇಮಕಾತಿ ಕೋಶ, ರೈಲು ಕೋಚ್ ಕಾರ್ಖಾನೆ, ಕಪುರ್ಥಾಲಾ, ಪಂಜಾಬ್ – 144602 ಜುಲೈ 14ರೊಳಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬಹುದು.

Important Direct Links:

Official Notification and Application Form PDFDownload
Official Websitercf.indianrailways.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment