ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿ ವಿಶೇಷ ವರ್ಗದ ಮೀಸಲಾತಿಯಡಿ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶಿವಸ್ವಾಮಿ ಬಿ ಅವರು ತಿಳಿಸಿದ್ದಾರೆ.
ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರವು ಶೇ.50ರಷ್ಟು ಸೀಟುಗಳನ್ನು ಮೀಸಲಿರಿಸಿದ್ದು, ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯಿಲ್ಲದೇ ಸೀಟುಗಳ ಲಭ್ಯತೆಯ ಆಧಾರದ ಮೇಲೆ ನೇರವಾಗಿ ಪ್ರವೇಶ ನೀಡಲಾಗುತ್ತದೆ. ಸೀಟು ಹಂಚಿಕೆ ಪ್ರಕ್ರಿಯೆಯು ಆನ್‌ಲೈನ್ ಮೂಲಕ ಇರಲಿದೆ. ಪ್ರಸ್ತುತ 5ನೇ ತರಗತಿಯಿಂದ ತೇರ್ಗಡೆಯಾಗಿರುವ ಆಸಕ್ತ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kreis26spl/forms/onlinedirಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
• ಅಭ್ಯರ್ಥಿಯ SATS ಸಂಖ್ಯೆ
• ಮಾನ್ಯವಾದ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ
• ಆಧಾರ್ ಕಾರ್ಡ್
• ಇತ್ತೀಚಿನ ಭಾವಚಿತ್ರ
• ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
• ವ್ಯಾಸಂಗ ಪ್ರಮಾಣ ಪತ್ರ
• ಇತ್ಯಾದಿ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಕೆ ಹೇಗೆ.?
ಹಂತ-1 ಕೆಇಎ ಅಧಿಕೃತ ಜಾಲತಾಣದಲ್ಲಿ “ಪ್ರವೇಶ” ವಿಭಾಗದ “ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)/ ಏಕಲವ್ಯ ಮಾದರಿ ವಸತಿ ಶಾಲೆ (EMRS)) ಪ್ರವೇಶ-2026“ದಡಿ ಲಭ್ಯವಿರುವ “KREIS – 2026 ವಿಶೇಷ ವರ್ಗದ ನೇರ ಪ್ರವೇಶ ಲಿಂಕ್. 20/06/2026” ಲಿಂಕ್(https://cetonline.karnataka.gov.in/kea/kreis2026)ಗೆ ಭೇಟಿ ನೀಡಿ.
ಹಂತ-2 ಹೊಸಪುಟ ತೆರೆಯುತ್ತದೆ, ಅಲ್ಲಿ ಕೇಳಲಾದ SATS ಸಂಖ್ಯೆ/ Number* ಹಾಕಿ. ಮುಂದೆ ಕೇಳಲಾಗುವ ಸಂಪೂರ್ಣ ಮಾಹಿತಿ ತುಂಬಿ ಅರ್ಜಿ ನಮೂನೆಯನ್ನು ಸಲ್ಲಿಸುವವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
Important Direct Links:
| KREIS 2026 Special Category Direct Admission Application form Link | Apply Now |
| Official Website | kea.kar.nic.in |
| More Updates | KarnatakaHelp.in |
Manoj
edit option please