ಆರ್‌ಬಿಐ ಆಫೀಸ್‌ ಅಟೆಂಡೆಂಟ್‌ OT ಫಲಿತಾಂಶ ಪ್ರಕಟ

Published on:

ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಜ.15ರಂದು ಅಧಿಸೂಚಿತ ಆಫೀಸ್‌ ಅಟೆಂಡೆಂಟ್‌ ಹುದ್ದೆಗಳ ನೇಮಕಾತಿ ಸಂಬಂಧ ಮಾ.01ರಂದು ನಡೆಸಿದ್ದ ಆನ್‌ಲೈನ್‌ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ(ಜೂ.22) ಪ್ರಕಟಿಸಿದೆ.

ಮುಂದಿನ ಹಂತದ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ(LPT)ಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಫಲಿತಾಂಶವಿರುವ ಪಟ್ಟಿಯನ್ನು ಬ್ಯಾಂಕಿನ ಅಧಿಕೃತ ಜಾಲತಾಣ https://opportunities.rbi.org.in/Scripts/bs_viewcontent.aspx?Id=5086ದಲ್ಲಿ ವಿಕ್ಷೀಸಬಹುದು.

RBI Office Attendant OT Result 2026 Shortlisted Candidates PDF Linkಡೌನ್ಲೋಡ್‌ ಮಾಡಿ

ಸದರಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಎಲ್ಲಾ ಅಭ್ಯರ್ಥಿಗಳು ಜಾಲತಾಣದ ಮೂಲಕ ಅಟ್ಟೆಸ್ಟೇಷನ್‌ ನಮೂನೆ(6 ಪ್ರತಿ) ಹಾಗೂ ಬಯೋ-ಡೇಟಾ ನಮೂನೆ(02 ಪ್ರತಿ) ಡೌನ್ಲೋಡ್‌ ಮಾಡಿ, ಭರ್ತಿ ಮಾಡಿ ಜೊತೆಗೆ ತಮಗೆ ಅನ್ವಯಯಿಸುವ ದಾಖಲೆಗಳನ್ನು ಲಗತ್ತಿಸಿ, ಲಕೋಟೆಯ ಮೇಲೆ “ಆಫೀಸ್ ಅಟೆಂಡೆಂಟ್ ಹುದ್ದೆಗೆ ನೇಮಕಾತಿ – PY 2025” ಎಂದು ನಮೂದಿಸಿ. ತಾವು ಅರ್ಜಿ ಸಲ್ಲಿಸಿರುವ ಪ್ರಾದೇಶಿಕ ನಿರ್ದೇಶಕರು, ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆಗೆ ಕೊರಿಯರ್/ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲು ಕೋರಲಾಗಿದೆ. ತಾತ್ಕಾಲಿಕ ಫಲಿತಾಂಶದ ಪ್ರಕಟಣೆ/ಘೋಷಣೆ ದಿನಾಂಕದ ಹತ್ತು ದಿನಗಳಲ್ಲಿ ತಲುಪುವಂತೆ ಕಳುಹಿಸಬೇಕು.

ಆರ್‌ಬಿಐ ಬೆಂಗಳೂರು ಕಚೇರಿಯ ವಿಳಾಸ;

ಭಾರತೀಯ ರಿಸರ್ವ್ ಬ್ಯಾಂಕ್
ಪೋಸ್ಟ್ ಬಾಕ್ಸ್ ಸಂಖ್ಯೆ. 5467, 10/3/8,
ನೃಪತುಂಗ ರಸ್ತೆ,
ಬೆಂಗಳೂರು – 560001
rdbengaluru@rbi.org.in

Important Direct Links:

RBI Office Attendant OT Result 2026 Check LinkVisit, View, Download
Official Websitewww.rbi.org.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಆರ್‌ಬಿಐ ಆಫೀಸ್‌ ಅಟೆಂಡೆಂಟ್‌ OT ಫಲಿತಾಂಶ ಪ್ರಕಟ”

Leave a Comment