WhatsApp Channel Join Now
Telegram Group Join Now

ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ 2024 | Raita Vidya Nidhi scholarship 2024 Apply Online, Status Check, Last Date

Raita Vidya Nidhi scholarship 2024 : ಸರ್ಕಾರ ಹೊರಡಿಸಿದ “ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ” ಯಾವ ವರ್ಗದ ವಿದ್ಯಾರ್ಥಿಗಳಿಗೆ ಏಷ್ಟು ವಿದ್ಯಾರ್ಥಿವೇತನ ದೊರಕಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಸಂಪೂರ್ಣವಾಗಿ ಗಮನವಿಟ್ಟು ಓದಿ..  

Raita Vidya Nidhi scholarship 2024
Raita Vidya Nidhi scholarship 2024

Contents

Raita Vidya Nidhi scholarship 2024

ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ 2023 : 28-07-2021 ರಂದು ಸಚಿವ ಸಂಪುಟದ ಸಭೆಯಲ್ಲಿ ರೈತರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಯಿತು, ಅದರಂತೆ ರೈತರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಒತ್ತುಕೊಡಲು ಮತ್ತು ಪ್ರೋತ್ಸಾಹಿಸಲು 1,000 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಆನ್ ಲೈನ್‌ ನಲ್ಲಿ ಅರ್ಜಿಸಲ್ಲಿಸುವ ಎಲ್ಲಾ ಮಾಹಿತಿಯ ಬಗ್ಗೆ ಈ ಕೆಳಗಿನಂತಿವೆ.

ದಿನಾಂಕ: 15-08-2022ರ ಸ್ವಾತಂತ್ರ ದಿನಾಚರಣೆಯಂದು, ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಕಾರ್ಯಕ್ರಮವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಸಹ ವಿಸ್ತರಣೆ ಮಾಡಲು ಘೋಷಣೆ ಮಾಡಿರುತ್ತಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಲೇಬರ್‌ ಕಾರ್ಡ್‌ ವಿದ್ಯಾರ್ಥಿವೇತನ 2024 | labour card scholarship 2023 Apply

Raita Vidya Nidhi Scholarship Amount

ಕೋರ್ಸ್‌ ಹೆಸರು ಮತ್ತು ವಿಧಗಳುಹುಡುಗರು(ಪುರುಷರು)ಹುಡುಗಿಯರು ಹಾಗು ಅನ್ಯ ಲಿಂಗದವರು
ಪದವಿಯ ಮುಂದೆ ಪಿಯುಸಿ, ಐಟಿಐ, ಡಿಪ್ಲೊಮರೂ.2500ರೂ.3000
ಎಲ್ಲ ಬಿಎ, ಬಿಎಸ್‌ಸಿ, ಬಿ.ಕಾಂ, ಇತ್ಯಾದಿ. ಆದರೆ ಎಂಬಿಬಿಎಸ್, ಬಿಇ, ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸ್‌ ಗಳನ್ನು ಹೊರತುಪಡಿಸಿ.ರೂ.5000ರೂ.5500.
ಎಲ್‌ಎಲ್‌ಬಿ, ಪ್ಯಾರ ಮೆಡಿಕಲ್, ಬಿ.ಫಾರ್ಮ್‌, ನರ್ಸಿಂಗ್, ಇತ್ಯಾದಿ ವೃತ್ತಿಪರ ಕೋರ್ಸ್‌ಗಳುರೂ.7500ರೂ.8000
ಎಂಬಿಬಿಎಸ್, ಬಿಇ, ಬಿ.ಟೆಕ್‌ ಮತ್ತು ಎಲ್ಲ ಸ್ನಾತಕೋತ್ತರ ಕೋರ್ಸ್‌ಗಳುರೂ.10,000ರೂ.11,000

ಯಾರು ರೈತ ವಿದ್ಯಾನಿಧಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರು ?

  • ರೈತರ ಮಕ್ಕಳಿಗೆ ಅಂದರೇ ವಿದ್ಯಾರ್ಥಿಯು ರೈತರ ಮಕ್ಕಳಾಗಿರಬೇಕು. ವಿದ್ಯಾರ್ಥಿಯ ತಂದೆ ಅಥವಾ ತಾಯಿಯು ರೈತರ ಗುರುತಿನ ಸಂಖ್ಯೆ (FID) ಹೊಂದಿರಬೇಕು. 
  • 2023 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಹೊಂದಿರಬೇಕು.
  • ವಿಶೇಷ ಸೂಚನೆ: ಪೂನರಾವರ್ತಿತ ವಿದ್ಯಾರ್ಥಿಗಳು (Repeaters) ಅರ್ಹರಿರುವುದಿಲ್ಲ

ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ  ದಾಖಲಾತಿಗಳು

  • ರೈತರ ಗುರುತಿನ ಸಂಖ್ಯೆ (FID)
  • ಮೊಬೈಲ್ ನಂಬರ್ 
  • ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮತ್ತು ಪೋಷಕರ ಆಧಾರ್ ಕಾರ್ಡ್
  • ಕಾಲೇಜು ಶುಲ್ಕ ರಶೀದಿ
  • Sats ID / Students ID / ಸ್ಯಾಟ್ಸ್ ಐಡಿ / ವಿದ್ಯಾರ್ಥಿಗಳ ಐಡಿ
  • ಹಾಸ್ಟೆಲ್ I’d (ಸರ್ಕಾರಿ ಅಥವಾ ಖಾಸಗಿ ಹಾಸ್ಟೆಲ್‌ಗಳಲ್ಲಿ ಇರುವವರಿಗೆ ಮಾತ್ರ ಅಗತ್ಯವಿದೆ)
  • ಕಾಲೇಜು ನೋಂದಣಿ ಸಂಖ್ಯೆ
  • ಪಡಿತರ ಚೀಟಿ
  • ಹಿಂದಿನ ಸೆಮ್ ಅಥವಾ ಕ್ಲಾಸ್ ಮಾರ್ಕ್ಸ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ಅಂಗವಿಕಲರ ಕಾರ್ಡ್ ಸಂಖ್ಯೆ (ಅನ್ವಯಿಸಿದರೆ)

How to Apply Raita Vidya Nidhi scholarship 2024

ಅರ್ಜಿ ಸಲ್ಲಿಸುವುದು ಹೇಗೆ ?

ಮೊದಲನೇದಾಗಿ ನೀವು  ರಾಜ್ಯ ವಿದ್ಯಾರ್ಥಿ ವೇತನ (SSP ) ಪೋರ್ಟಲ್ ನಲ್ಲಿ ನಿಮ್ಮ ಖಾತೆಯನ್ನು ಸೃಜಿಸಿಕೊಳ್ಳಿ ಅಥವಾ  ನೊಂದಾಯಿಸಿಕೊಳ್ಳಬೇಕು ನಿಮ್ಮ ಪೋಷಕರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿರಿ . 

ಇಲ್ಲಿ ಗಮನಿಸಿ ಸ್ನೇಹಿತರೇ ಈಗಾಗಲೇ ನೀವು SSP Scholarship 2024 ಅರ್ಜಿ ಸಲ್ಲಿಸಿದ್ದರೆ ಮತ್ತೇ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲಾ Raita Vidya nidhi Scholarship ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ  ಆಗುತ್ತದೆ.

ಪ್ರಮುಖ ಲಿಂಕ್ ಗಳು 

ಅಂತಿಮ ನುಡಿ : ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು.

Leave a Comment