Rajiv Gandhi Entrepreneurship Program 2024: ರಾಜೀವ್ ಗಾಂಧಿ ಉದ್ಯಮಶೀಲತೆಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಭಾವಂತ ಪದವೀಧರಲ್ಲಿ ನ್ಯೂಯತೆಯನ್ನು ಬೆಳೆಸಲು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನವೋದ್ಯಮಗಳನ್ನು ಪ್ರೋತ್ಸಾಹಿಸುವ ಪರಿಕಲ್ಪನೆಯಲ್ಲಿ ಕರ್ನಾಟಕದಲ್ಲಿ 4 ವರ್ಷ ಅಥವಾ 4 ವರ್ಷಗಳ ಪದವಿ ( ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗ) ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನವೋದ್ಯಮ( (ಎಂಟರ್ಪ್ರೈನರ್) ಗಳಿಗೆ ಆರಂಭಿಕ ಹಂತದ ಧನಸಹಾಯ ಕಾರ್ಯಕ್ರಮಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ (RGEP) ಆಯ್ಕೆಯಾದ 30 ನವೋದ್ಯಮಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದ್ದು,12 ತಿಂಗಳ ಅವಧಿಗೆ ಮಾಸಿಕ ರೂ. 25,000 ರ ಸ್ಟೈಫಂಡ್ / ಜೀವನಾಧಾರ ಅನುದಾನ ನೀಡಲಾಗುತ್ತದೆ. ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
Important Dates
ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ: ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿಸಲ್ಲಿಸಲು ಅಂತಿಮ ದಿನಾಂಕ: 13 ಆಗಸ್ಟ್ 2024 (ಸಂಜೆ 5:00)
Eligibility Criteria for Rajiv Gandhi Entrepreneurship Program 2024
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಭಾರತದ ಪ್ರಜೆಯಾಗಿರಬೇಕು ಕರ್ನಾಟಕದ ನಿವಾಸಿ ಆಗಿರಬೇಕು.
3 ಅಥವಾ 4 ವರ್ಷಗಳ ಪದವಿಯನ್ನು (ವಿಜ್ಞಾನ/ ಇಂಜಿನಿಯರಿಂಗ್) ಪೂರ್ಣಗೊಳಿಸಿದ್ದಾರೆ ಮತ್ತು 2 ವರ್ಷಗಳ ಪೂರ್ಣ ಸಮಯದ ಕೆಲಸದ ಅನುಭವವನ್ನು ಪೋಸ್ಟ್ ಪದವಿಯನ್ನು ಹೊಂದಿರಬೇಕು.
ಯಾವುದೇ ಖಾಸಗಿ ಅಥವಾ ಸರ್ಕಾರಿ ಕಂಪನಿಯಲ್ಲಿ ಉದ್ಯೋಗಿಯಾಗಿ (ಗುತ್ತಿಗೆ/ ಹೊರಗುತ್ತಿಗೆ/ಖಾಯಂ) ಕೆಲಸ ಮಾಡಬಾರದು.
ಬೇರೆ ಯಾವುದೇ ಸ್ಟಾರ್ಟ್‌ಅಪ್‌ನಲ್ಲಿ ಯಾವುದೇ ಶೇರ್ ಹೂಡಿಕೆ ಮಾಡಿರಬಾರದು.
ಅರ್ಜಿ ಸಲ್ಲಿಸಿದ ದಿನಾಂಕದಂದು 28 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.