ಭಾರತೀಯ ರಿಸರ್ವ್ ಬ್ಯಾಂಕ್ (RBI)ನಲ್ಲಿ ಗ್ರೇಡ್ ‘ಬಿ’ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ವಿವಿಧ ವೃಂದಗಳಲ್ಲಿ ಖಾಲಿ ಇರುವ ಗ್ರೇಡ್ ಬಿ ಅಧಿಕಾರಿಗಳು (ಡಿಆರ್) ಸಾಮಾನ್ಯ, ಗ್ರೇಡ್ ಬಿ ಅಧಿಕಾರಿಗಳು (ಡಿಆರ್)-ಡಿಇಪಿಆರ್ ಹಾಗೂ ಗ್ರೇಡ್ ಬಿ ಅಧಿಕಾರಿಗಳು (ಡಿಆರ್) – ಡಿಎಸ್ಐಎಂ ಸೇರಿದಂತೆ ಒಟ್ಟು 120 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್ಸೈಟ್ https://opportunities.rbi.org.in/Scripts/Vacancies.aspxಗೆ ಭೇಟಿ ನೀಡಿ. ಸೆ.30ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 10, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2025
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
✓ ಗ್ರೇಡ್ ಬಿ ಅಧಿಕಾರಿಗಳು (ಡಿಆರ್) ಸಾಮಾನ್ಯ (83 ಹುದ್ದೆಗಳಿಗೆ) – ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ.
✓ ಗ್ರೇಡ್ ಬಿ ಅಧಿಕಾರಿಗಳು (ಡಿಆರ್)-ಡಿಇಪಿಆರ್(17) ಹುದ್ದೆಗಳಿಗೆ – ಸಂಬಂಧಿತ ವಿಷಯದಲ್ಲಿ ಎಂಎ/ ಎಂಎಸ್ಸಿ ಪದವಿ.
✓ ಗ್ರೇಡ್ ಬಿ ಅಧಿಕಾರಿಗಳು (ಡಿಆರ್) – ಡಿಎಸ್ಐಎಂ (20) ಹುದ್ದೆಗಳಿಗೆ – ಸ್ನಾತಕೋತ್ತರ ಪದವಿ ಅಥವಾ ಅಂಕಿಅಂಶಗಳು/ಗಣಿತ/ಗಣಿತ ಅಂಕಿಅಂಶಗಳು/ಅನ್ವಯಿಕ ಅಂಕಿಅಂಶಗಳು/ಪರಿಮಾಣಾತ್ಮಕ ಅರ್ಥಶಾಸ್ತ್ರ/ಆರ್ಥಿಕ ಮಾಪನ/ಇನ್ಫರ್ಮ್ಯಾಟಿಕ್ಸ್ ಅಥವಾ ಈ ಕ್ಷೇತ್ರಗಳ ಯಾವುದೇ ಇತರ ಸಂಬಂಧಿತ ಶಾಖೆಗಳಲ್ಲಿ ಸಮಾನ ದರ್ಜೆ/ಸಿಜಿಪಿಎ ಹೊಂದಿರಬೇಕು.
ವಯೋಮಿತಿ:
01-09-2025 ರಂತೆ;
ಕನಿಷ್ಠ ಮಿತಿ – 21 ವರ್ಷಗಳು
ಗರಿಷ್ಠ ಮಿತಿ – 30 ವರ್ಷಗಳು
ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಆನ್ಲೈನ್ ಪರೀಕ್ಷೆ ಹಂತ – I
ಆನ್ಲೈನ್ ಪರೀಕ್ಷೆ ಹಂತ – II/ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ
ದಾಖಲೆ ಪರಿಶೀಲನೆ
ಸಂಬಳ:
ಆರಂಭಿಕ ವೇತನ 78,450 ರೂ.ವರೆಗೆ ಪಡೆಯುತ್ತಾರೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 850ರೂ.
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 100ರೂ.
How to Apply for RBI Grade B Officer Recruitment 2025?
ಅರ್ಜಿ ಸಲ್ಲಿಸುವ ವಿಧಾನ;
Rbi Grade B Officer Online Form 2025
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್ಸೈಟ್ ನೇಮಕಾತಿ ವಿಭಾಗದಲ್ಲಿ ಲಭ್ಯವಿರುವ https://ibpsreg.ibps.in/rbioaug25/ ಲಿಂಕ್ಗೆ ಭೇಟಿ ನೀಡಿ.
ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೊಂದಣಿ ಸಂಖ್ಯೆ, ಪಾಸ್ವರ್ಡ್ ಹಾಗೂ ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.
ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.