ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ಕಚೇರಿಯಲ್ಲಿ ಸಮಾಲೋಚಕರು ಹಾಗೂ ಡಾಟಾ ವಿಶ್ಲೇಷಕರು ಸೇರಿದಂತೆ ಒಟ್ಟು 05 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಆಯುಕ್ತಾಲಯದ ಅಧಿಕೃತ ಇ-ಮೇಲ್ rgsa.consultant@gmail.com ವಿಳಾಸಕ್ಕೆ ತಮ್ಮ ರೆಸ್ಯೂಮ್ ಅನ್ನು ನ.07ರೊಳಗೆ ಕಳುಹಿಸಲು ಸೂಚಿಸಲಾಗಿದೆ.
✓ ಸಮಾಲೋಚಕರು (ದಾಖಲೀಕರಣ) (01)ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ/ಗ್ರಾಮೀಣಾಭಿವೃದ್ಧಿ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ವರದಿ ಬರವಣಿಗೆ ಮತ್ತು ವಿಶ್ಲೇಷಣೆಯಲ್ಲಿ ಕನಿಷ್ಟ 05 ವರ್ಷಗಳ ಅನುಭವವನ್ನು ಹೊಂದಿರಬೇಕು.
✓ ಸಮಾಲೋಚಕರು (ಘನ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ) (01) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಥವಾ ಸಿವಿಲ್/ ಪರಿಸರ (ಎನ್ವಿರಾನ್ಮೆಂಟಲ್) ವಿಭಾಗದಲ್ಲಿ ಬಿ.ಇ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ವಿಷಯಾಧಾರಿತ ಜ್ಞಾನ ಹಾಗೂ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
✓ ಸಮಾಲೋಚಕರು (ಯೋಜನೆ ಮತ್ತು ಕಾರ್ಯಕ್ರಮಗಳು) (01) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಆರ್‌ಡಿ ಯೋಜನೆಗಳಲ್ಲಿ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
✓ ಡಾಟಾ ವಿಶ್ಲೇಷಕರು (02) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ಟಾಟಿಸ್ಟಿಕ್ಸ್/ಗಣಿತ ವಿಭಾಗದಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಸಂಬಂಧಿತ ಸಾಫ್ಟ್‌ವೇರ್ ಜ್ಞಾನ ಮತ್ತು ಪ್ರಸ್ತುತಿ ಕೌಶಲ್ಯಗಳು ಹಾಗೂ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 55 ವರ್ಷಗಳು
ಅಭ್ಯರ್ಥಿಗಳ ಗಮನಕ್ಕೆ:
• ಅಭ್ಯರ್ಥಿಗಳು ಉತ್ತಮ ಚಾರಿತ್ರ ಹೊಂದಿರಬೇಕು. ಕಡ್ಡಾಯವಾಗಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತಿ ಹೊಂದಿರಬೇಕು ಹಾಗೂ ತಂಡವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು.
• ಆಯುಕ್ತಾಲಯದಲ್ಲಿ ನಿರ್ವಹಣೆಯಾಗುವ ಯೋಜನೆ-ಕಾರ್ಯಕ್ರಮಗಳನ್ನು ಅರ್ಥೈಸಿಕೊಂಡು ಅದಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಬೇಕು, ಆಯುಕ್ತಾಲಯದಲ್ಲಿ ಮೇಲಾಧಿಕಾರಿಗಳು ಸೂಚಿಸುವ ಕರ್ತವ್ಯಗಳನ್ನು ನಿಭಾಯಿಸಬೇಕು, ಬೇರೆ ಬೇರೆ ಜಿಲ್ಲೆಗಳಿಗೆ ಕರ್ತವ್ಯ ನಿರ್ವಹಣೆ ಸಂಬಂಧ ಪ್ರಯಾಣಿಸಬೇಕು, ಸಭೆಗಳಿಗೆ ಮಾಹಿತಿ ಒದಗಿಸಬೇಕು ಹಾಗೂ ತಂಡಗಳಲ್ಲಿ ಕೆಲಸ ನಿರ್ವಹಿಸಬೇಕು.
ಸಂಬಳ:
ಸಮಾಲೋಚಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 66,000ರೂ. ಹಾಗೂ ಡಾಟಾ ವಿಶ್ಲೇಷಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 50,000ರೂ. ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ, ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ, ಮೌಖಿಕ ಸಂದರ್ಶನ, ವಿದ್ಯಾರ್ಹತೆ ಹಾಗೂ ಪ್ರಸ್ತುತ ಪಡಿಸುವ ವಿಧಾನ ಮತ್ತು ಅನುಭವಗಳ ಮಾನದಂಡಗಳನ್ನಾಧರಿಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಹುದ್ದೆಯ ಅರ್ಹತೆಗಳನ್ನು ಪೂರೈಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ರೆಸ್ಯೂಮ್/ಸಿ.ವಿ ಅನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ನವೆಂಬರ್ 07 ರ ಸಂಜೆ 5.30 ರೊಳಗೆ ಅಥವಾ ಅದಕ್ಕೂ ಮೊದಲು ಕಳುಹಿಸಬಹುದು.
✓ ಇ-ಮೇಲ್ ವಿಳಾಸ – rgsa.consultant@gmail.com
ಹೆಚ್ಚಿನ ಮಾಹಿತಿಗಾಗಿ: ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ – 7406388515, 8310055060 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.