ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕಂದಾಯ ಇಲಾಖೆಯು ಕಿರು ಅಧಿಸೂಚನೆ ಹೊರಡಿಸಿದೆ.
ಬೆಂಗಳೂರಿನ ವಿಭಾಗ ಮತ್ತು ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ (ಐಎಂಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳು) ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ (ಕಾನೂನು ಅಧಿಕಾರಿ-01, ಸ್ಟೆನೋಗ್ರಾಫರ್-01 ಹಾಗೂ ಕಾನೂನು ಟೈಪಿಸ್ಟ್-01) ಸೇರಿದಂತೆ ಒಟ್ಟು 03 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಆ.28ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕಂದಾಯ ಇಲಾಖೆಯ ವಿಶೇಷಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿಗಳು(ಐ.ಎಂ.ಎ. ಮತ್ತು ಇತರ ವಂಚನೆ ಪ್ರಕರಣಗಳು) ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
✓ ಕಾನೂನು ಅಧಿಕಾರಿ ಹುದ್ದೆಗೆ:- ಅಭ್ಯರ್ಥಿಗಳು ಎಲ್ಎಲ್ಬಿ, ಎಲ್ಎಲ್ಎಂ ಪದವಿ ಪೂರ್ಣಗೊಳಿಸಿ ಕರ್ನಾಟಕ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿರಬೇಕು. ಮುಖ್ಯವಾಗಿ ಎಲ್ಎಲ್ಎಂ ಪದವೀಧರರಿಗೆ ಆದ್ಯತೆ ನೀಡಲಾಗುವುದು.
ಹೈಕೋರ್ಟ್ನಲ್ಲಿ ಕನಿಷ್ಠ 5 ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು. ಪ್ರಮುಖವಾಗಿ ಹೈಕೋರ್ಟ್ ಮತ್ತು ಇತರ ನ್ಯಾಯಾಲಯಗಳಲ್ಲಿ 10 ವರ್ಷಗಳ ವೃತ್ತಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
✓ ಸ್ಟೆನೋಗ್ರಾಫರ್ ಹುದ್ದೆಗೆ:- ಅಭ್ಯರ್ಥಿಗಳು ಇಂಗ್ಲಿಷ್ ಮತ್ತು ಕನ್ನಡ ಸ್ಟೆನೋ, ಟೈಪಿಂಗ್ ಮತ್ತು ಶಾರ್ಟ್ಹ್ಯಾಂಡ್ನಲ್ಲಿ ಪ್ರಮಾಣಪತ್ರದೊಂದಿಗೆ ಪದವಿ ಪೂರ್ಣಗೊಳಿಸಿರಬೇಕು ಹಾಗೂ ಕಾನೂನು ಸಂಸ್ಥೆ/ನ್ಯಾಯಾಲಯದಲ್ಲಿ ಕನಿಷ್ಠ ಒಂದು ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು.
ಪ್ರಮುಖವಾಗಿ ಎಲ್ಎಲ್ಬಿ ಪದವಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಮಾಣಪತ್ರ, ಸ್ಟೆನೋ, ಟೈಪಿಂಗ್ ಮತ್ತು ಶಾರ್ಟ್ಹ್ಯಾಂಡ್ ಪದವಿಯೊಂದಿಗೆ ಕಾನೂನು ಸಂಸ್ಥೆ / ನ್ಯಾಯಾಲಯದಲ್ಲಿ 3 ವರ್ಷಗಳ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
✓ ಕಾನೂನು ಟೈಪಿಸ್ಟ್ ಹುದ್ದೆಗೆ:- ಅಭ್ಯರ್ಥಿಗಳು ಎಲ್ಎಲ್ಬಿ ಪದವಿ ಪೂರ್ಣಗೊಳಿಸಿ ಕರ್ನಾಟಕ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿರಬೇಕು ಹಾಗೂ ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ (ನಿಮಿಷಕ್ಕೆ 40 ಪದಗಳ) ಟೈಪಿಂಗ್ ವೇಗದ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲೂ ಸಂವಹನ ನಡೆಸುವ ಸಾಮರ್ಥ್ಯ ಹೊಂದಿರಬೇಕು.
ವಯೋಮಿತಿ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಶುಲ್ಕ:
ಉಲ್ಲೇಖಿಸಲಗಿರುವುದಿಲ್ಲ
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ವೃತ್ತಿ ಅನುಭವ ಹಾಗೂ ಶೈಕ್ಷಣಿಕ ಅರ್ಹತೆಯನ್ನು ಅವಲಂಬಿಸಿ – ಕಾನೂನು ಅಧಿಕಾರಿ ಹುದ್ದೆಗೆ 75,000-85,000ರೂ., ಸ್ಟೆನೋಗ್ರಾಫರ್ ಹುದ್ದೆಗೆ 30,000ರೂ. ಹಾಗೂ ಕಾನೂನು ಟೈಪಿಸ್ಟ್ ಹುದ್ದೆಗೆ 22,000-24,000ರೂ. ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
How to Apply for Revenue Department SPLOCA Recruitment 2025
ಅರ್ಜಿ ಸಲ್ಲಿಸುವ ವಿಧಾನ;
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಯನ್ನು ಪೂರೈಸುತ್ತೇವೆ ಎಂದು ಖಚಿತಪಡಿಸಿಕೊಂಡು ತಮ್ಮ ಶೈಕ್ಷಣಿಕ ಹಾಗೂ ವೃತ್ತಿ ಅನುಭವದ ಅರ್ಹತೆಗಳನ್ನು ಒಳಗೊಂಡ ರೆಸ್ಯೂಮ್ ಅನ್ನು ಈ ಕೆಳಗೆ ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ಆ.28ರ ಸಂಜೆ 5 ಗಂಟೆಯೊಳಗೆ ಕಳುಹಿಸಬಹುದು.
ಪ್ರಸ್ತುತ ಹುದ್ದೆಯನ್ನು ಕರ್ನಾಟಕ ಕಂದಾಯ ಇಲಾಖೆಯು ವಿವಿಧ ಸರ್ಕಾರಿ ಆದೇಶಗಳ ಮೂಲಕ ರಚಿಸಿದ್ದು, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ. ಇದು ಒಪ್ಪಂದದ ಹುದ್ದೆಯಾಗಿದ್ದು, ವೇತನ ಶ್ರೇಣಿಗಳಲ್ಲಿ ಆವರ್ತಕ ಹೆಚ್ಚಳದೊಂದಿಗೆ ತೃಪ್ತಿದಾಯಕ ಕಾರ್ಯಕ್ಷಮತೆಯ ಮೇಲೆ ನವೀಕರಿಸಬಹುದಾಗಿದೆ, ಶಾಶ್ವತ ಸರ್ಕಾರಿ ಸೇವೆಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.