ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (RIMS) ಮತ್ತು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(RGSSH)ನಲ್ಲಿ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಒಟ್ಟು 41 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅ.27 ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ಸೆಪ್ಟೆಂಬರ್ 30, 2025
- ಅರ್ಜಿ ಸಲ್ಲಿಸಲು ಮತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಅಕ್ಟೋಬರ್ 27, 2025
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
✓ (RGSSH) ಪ್ರಾಧ್ಯಾಪಕರ (04 ಹುದ್ದೆಗಳು) – ಅಭ್ಯರ್ಥಿಗಳು TEQ ನಿಯಮಗಳ ಪ್ರಕಾರ ಸಂಬಂಧಿತ ವಿಷಯದಲ್ಲಿ DM/M.chನಲ್ಲಿ ಸೂಪರ್ ಸ್ಪೆಷಾಲಿಟಿ ಸ್ನಾತಕೋತ್ತರ ಪದವಿ ಅರ್ಹತೆ ಹಾಗೂ ಇತರೆ ಬೋಧನೆ ಮತ್ತು ಸಂಶೋಧನಾ ಅನುಭವ ಹೊಂದಿರಬೇಕು.
✓ (RGSSH) ಸಹ ಪ್ರಾಧ್ಯಾಪಕರ (01 ಹುದ್ದೆಗಳು) – ಅಭ್ಯರ್ಥಿಗಳು CTVSನಲ್ಲಿ M.ch ಸ್ನಾತಕೋತ್ತರ ಅರ್ಹತೆ ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956 ರ ಯಾವುದೇ ವೇಳಾಪಟ್ಟಿಯಲ್ಲಿ ಸೇರಿಸಲಾದ TEQ ನಿಯಂತ್ರಣದ ಪ್ರಕಾರ ರಾಜ್ಯ ವೈದ್ಯಕೀಯ ನೋಂದಣಿ ಅಥವಾ ಭಾರತೀಯ ವೈದ್ಯಕೀಯ ನೋಂದಣಿಯಲ್ಲಿ ನೋಂದಾಯಿಸಿರಬೇಕು ಹಾಗೂ ಇತರೆ ಬೋಧನೆ ಮತ್ತು ಸಂಶೋಧನಾ ಅನುಭವ ಹೊಂದಿರಬೇಕು.
✓ (RGSSH) ಸಹಾಯಕ ಪ್ರಾಧ್ಯಾಪಕರ (36 ಹುದ್ದೆಗಳಿಗೆ) – ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ DM/M.ch/DNB ನಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಸಂಶೋಧನಾ ಅನುಭವ ಹೊಂದಿರಬೇಕು.
✓ (RIMS) ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ – ಸಂಬಂಧಪಟ್ಟ ವಿಷಯದಲ್ಲಿ ಎಂಡಿ/ಎಂಎಸ್/ಡಿಎನ್ಬಿ ಪೂರ್ಣಗೊಳಿಸಿರಬೇಕು. ರಾಷ್ಟ್ರೀಯ ವೈದ್ಯಕೀಯ ಆಯೋಗ ಹೊರಡಿಸಿದ ಅಧಿಸೂಚನೆಗಳ ಪ್ರಕಾರ, ಬೋಧನಾ ಅನುಭವದ ಸಮಾನತೆಗೆ ಸಂಬಂಧಿಸಿದಂತೆ DNB ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅನ್ವಯವಾಗುತ್ತಾರೆ ಹಾಗೂ ಅಭ್ಯರ್ಥಿಗಳು ನಿಗದಿತ ಬೋಧನೆ ಮತ್ತು ಸಂಶೋಧನಾ ಅನುಭವ ಹೊಂದಿರಬೇಕು.
✓ (RIMS) ಸಹಾಯಕ ಪ್ರಾಧ್ಯಾಪಕರ (ಅರವಳಿಕೆ) ಹುದ್ದೆಗಳಿಗೆ – ಅರಿವಳಿಕೆಶಾಸ್ತ್ರದಲ್ಲಿ ಎಂಡಿ/ಡಿಎಂ ಪೂರ್ಣಗೊಳಿಸಿರಬೇಕು ಹಾಗೂ ಕಾರ್ಡಿಯಾಕ್ ಸರ್ಜರಿಯಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.
ವಯೋಮಿತಿ:
✓ ಪ್ರಾಧ್ಯಾಪಕರ(Professor) ಹುದ್ದೆಗಳಿಗೆ;
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 48 ವರ್ಷಗಳು
- ಒಬಿಸಿ ಅಭ್ಯರ್ಥಿಗಳಿಗೆ – 51 ವರ್ಷಗಳು
- ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ – 53 ವರ್ಷಗಳು.
✓ ಸಹ ಪ್ರಾಧ್ಯಾಪಕರ(Associate Professor) ಹುದ್ದೆಗಳಿಗೆ;
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 43 ವರ್ಷಗಳು
- ಒಬಿಸಿ ಅಭ್ಯರ್ಥಿಗಳಿಗೆ – 46 ವರ್ಷಗಳು
- ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ – 48 ವರ್ಷಗಳು
✓ ಸಹಾಯಕ ಪ್ರಾಧ್ಯಾಪಕರ(Assistant Professor) ಹುದ್ದೆಗಳಿಗೆ;
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷಗಳು
- ಒಬಿಸಿ ಅಭ್ಯರ್ಥಿಗಳಿಗೆ – 41 ವರ್ಷಗಳು
- ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ – 43 ವರ್ಷಗಳು
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದ ಸರ್ಕಾರಿ ಅನುದಾನಿತ ಸ್ವಾಯತ್ತ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರವು ನಿಗದಿಪಡಿಸಿದ ವೇತನ ಶ್ರೇಣಿಯ ಪ್ರಕಾರ ನಿಗದಿತ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:
- ಸಂದರ್ಶನ
- ದಾಖಲಾತಿ ಪರಿಶೀಲನೆ
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – 3,000ರೂ.
- ಪ.ಜಾತಿ, ಪ.ಪಂಗಡ ಮತ್ತು ವರ್ಗ-1 ಅಭ್ಯರ್ಥಿಗಳಿಗೆ – 2,000ರೂ.
ಅರ್ಜಿ ಶುಲ್ಕವನ್ನು “ನಿರ್ದೇಶಕರು, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಯಚೂರು, ರಾಯಚೂರು” ಹೆಸರಿನಲ್ಲಿ ಡಿಡಿಯ ಮೂಲಕ ಪವತಿಸಬೇಕು.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;
- RIMS ಅಧಿಕೃತ ಜಾಲತಾಣ https://rimsraichur.karnataka.gov.in/en ಕ್ಕೆ ಭೇಟಿ ನೀಡಿ.
- ಇತ್ತೀಚಿನ ಸುದ್ದಿಗಳು ವಿಭಾಗದಲ್ಲಿ – “RIMS ಮತ್ತು RGSSH ನ ಸಂದರ್ಶನ ಅಧಿಸೂಚನೆ” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ನಮೂನೆಯ ಪಿಡಿಫ್ ಅನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆಯುಕೊಳ್ಳಿ.
- ಅರ್ಜಿ ನಮೂನೆಯ ಪಿಡಿಫ್ ಡೌನ್ಲೋಡ್ ನೇರ ಲಿಂಕ್ https://karnatakahelp.in/wp-content/uploads/2025/10/RIMS-Raichur-Professor-Application-Form-2025-26.pdf
- ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಆಗತ್ಯ ಮಾಹಿತಿಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಅಕ್ಟೋಬರ್ 27ರೊಳಗೆ ತಲುಪುವಂತೆ ಕಳುಹಿಸಬೇಕು.
✓ ವಿಳಾಸ: ನಿರ್ದೇಶಕರ ಕಚೇರಿ, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಹೈದರಾಬಾದ್ ರಸ್ತೆ, ರಾಯಚೂರು 584102