ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಲಿಮಿಟೆಡ್, ಕೇರಳದ ಯೋಜನಾ ಸ್ಥಳಗಳಿಗೆ ವಿವಿಧ ಎಂಜಿನಿಯರ್ ವೃತ್ತಿಪರರ ಅಗತ್ಯವಿದ್ದು, ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು ಫೆ.26 ಕೊನೆದಿನವಾಗಿದೆ.
ವಿವಿಧ ವಿಭಾಗಗಳಿಗೆ ಟೀಮ್ ಲೀಡರ್(09), ಪ್ರಾಜೆಕ್ಟ್ ಎಂಜಿನಿಯರ್(08) ಹಾಗೂ ಜೂನಿಯರ್ ಎಂಜಿನಿಯರ್(31) ಸೇರಿ ಒಟ್ಟು 48 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು RITES ಲಿಮಿಟೆಡ್ ಅಧಿಕೃತ ಜಾಲತಾಣ https://recruit.rites.com/frmRegistration.aspxಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹದು.
ಟೀಮ್ ಲೀಡರ್ ಹಾಗೂ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 24, 2026
ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 26, 2026
ನೇರ ಸಂದರ್ಶನದ ಪ್ರಮುಖ ದಿನಾಂಕಗಳು – ಫೆಬ್ರವರಿ 24-27, 2026
ಶೈಕ್ಷಣಿಕ ಅರ್ಹತೆ:
✓ ಟೀಮ್ ಲೀಡರ್ ಹಾಗೂ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ (ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್) ಎಂಜಿನಿಯರಿಂಗ್ನಲ್ಲಿ ಬಿ.ಇ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.
✓ ಜೂನಿಯರ್ ಎಂಜಿನಿಯರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿ.ಇ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು. ಅಥವಾ ಸಿವಿಲ್/ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.