ಭಾರತ ಸರ್ಕಾರದ ಉದ್ಯಮ ಹಾಗೂ ರೈಲ್ವೇ ಸಚಿವಾಲಯದಡಿ ಬರುವ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಲಿಮಿಟೆಡ್ನ ವಿವಿಧ ವೃಂದಗಳಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲ್ ಮತ್ತು ಟೆಲಿ ಕಮ್ಯುನಿಕೇಷನ್, ಮೆಕ್ಯಾನಿಕಲ್, ಲೋಹಶಾಸ್ತ್ರ ಸೇರಿ ವಿವಿಧ ವಿಭಾಗದಲ್ಲಿ ಒಟ್ಟು 400 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿ.25 ಕೊನೆ ದಿನವಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು RITES ಲಿಮಿಟೆಡ್ ಅಧಿಕೃತ ವೆಬ್ ಸೈಟ್ https://recruit.rites.com/frmRegistration.aspxಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಡಿಸೆಂಬರ್ 25, 2025
ಲಿಖಿತ ಪರೀಕ್ಷೆಯ ದಿನಾಂಕ – ಜನವರಿ 11, 2025
ವಿಭಾಗವಾರು ಖಾಲಿ ಇರುವ ಹುದ್ದೆಗಳ ವಿವರ:
ಸಹಾಯಕ ವ್ಯವಸ್ಥಾಪಕ (ಸಿವಿಲ್) – 120 ಹುದ್ದೆಗಳು ಸಹಾಯಕ ವ್ಯವಸ್ಥಾಪಕ (ಎಲೆಕ್ಟ್ರಿಕಲ್) – 55 ಹುದ್ದೆಗಳು ಸಹಾಯಕ ವ್ಯವಸ್ಥಾಪಕ (ಸಿಗ್ನಲ್ ಮತ್ತು ಟೆಲಿ ಕಮ್ಯುನಿಕೇಷನ್) – 10 ಹುದ್ದೆಗಳು ಸಹಾಯಕ ವ್ಯವಸ್ಥಾಪಕ (ಮೆಕ್ಯಾನಿಕಲ್) – 150 ಹುದ್ದೆಗಳು ಸಹಾಯಕ ವ್ಯವಸ್ಥಾಪಕ (ಲೋಹಶಾಸ್ತ್ರ) – 26 ಹುದ್ದೆಗಳ ಸಹಾಯಕ ವ್ಯವಸ್ಥಾಪಕ (ಕೆಮಿಕಲ್) – 11 ಹುದ್ದೆಗಳು ಸಹಾಯಕ ವ್ಯವಸ್ಥಾಪಕ (ಇನ್ಫಾರ್ಮೇಶನ್ ಟೆಕ್ನಾಲಜಿ) – 14 ಹುದ್ದೆಗಳು ಸಹಾಯಕ ವ್ಯವಸ್ಥಾಪಕ (ಫುಡ್ ಟೆಕ್ನಾಲಜಿ) – 12 ಹುದ್ದೆಗಳು ಸಹಾಯಕ ವ್ಯವಸ್ಥಾಪಕ (ಫಾರ್ಮ) – 02 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
RITES ಲಿಮಿಟೆಡ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು ಜೊತೆಗೆ ಸಂಬಂಧಿತ ವಿಭಾಗದಲ್ಲಿ ವೃತ್ತಿ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
25-12-2025 ರಂತೆ;
ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
ಸರ್ಕಾರಿ ನೇಮಕಾತಿ ನಿಯಮಗಳ ಪ್ರಕಾರ ವರ್ಗವಾರು ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಸಂದರ್ಶನ
ಸಂಬಳ:
RITES ಲಿಮಿಟೆಡ್ ಅಧಿಕೃತ ಅಧಿಸೂಚನೆಯ ಪ್ರಕಾರ ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 23,340ರೂ. ಗಳಿಂದ 42,478ರೂ. ವರೆಗೆ ಮಾಹೆಯಾನ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 600ರೂ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಇಡಬ್ಲ್ಯೂಎಸ್ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 300ರೂ.
ಅರ್ಜಿ ಸಲ್ಲಿಸುವ ವಿಧಾನ:
• RITES ಲಿಮಿಟೆಡ್ ಅಧಿಕೃತ ವೆಬ್ ಸೈಟ್ನ “Careers” ವಿಭಾಗದಲ್ಲಿ ನೀಡಲಾದ https://recruit.rites.com/frmRegistration.aspx ಲಿಂಕ್ಗೆ ಭೇಟಿ ನೀಡಿ.
• ಬಳಿಕ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ. ನೋಂದಣಿ ನಮೂನೆಯ ವಿವರಗಳನ್ನು ನೀಡಿ ನೋಂದಾಯಿಸಿ.
• ಅರ್ಜಿ ನಮೂನೆಯಲ್ಲಿ ಕೇಳಲಾಗುವ ತಮ್ಮ ಮೂಲ ಮಾಹಿತಿ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಎಚ್ಚರಿಕೆಯಿಂದ ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.