ರೈಲ್ವೆ ಇಲಾಖೆಯಲ್ಲಿನ ವಿವಿಧ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಸಂಬಂಧ ಮೊದಲನೇ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ತಾತ್ಕಾಲಿಕ ವೇಳಾಪಟ್ಟಿಯನ್ನು ರೈಲ್ವೆ ನೇಮಕಾತಿ ಮಂಡಳಿಯು ಸೋಮವಾರ (ಸೆ.08)ರಂದು ಬಿಡುಗಡೆ ಮಾಡಿದೆ.
CEN NO: 08/2024ರ ಅಡಿಯಲ್ಲಿ ಒಟ್ಟು 32,438 ಗ್ರೂಪ್ ಡಿ (7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್‌ನ ಹಂತ 1ರ) ಅಧಿಸೂಚಿಸಲಾಗಿತ್ತು. CBTಯನ್ನು ನವೆಂಬರ್ 17ರಿಂದ ಡಿಸೆಂಬರ್‌ವರೆಗೆ ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದೆ. ಅಭ್ಯರ್ಥಿಗಳು ಪರೀಕ್ಷಾ ದಿನದ ನಾಲ್ಕು ದಿನಗಳ ಮುಂಚೆ ಅಧಿಕೃತ ಜಾಲತಾಣ https://rrbapply.gov.in/ದ ಮೂಲಕ ತಮ್ಮ ನೊಂದಣಿ ಸಂಖ್ಯೆ ಹಾಗೂ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಇ-ಕರೆ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಮಂಡಳಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.