ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಅಕ್ಟೋಬರ್ 13 ನಡೆಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆ 2ರ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ.
CEN05/2024ರಡಿ ಅಧಿಸೂಚಿಸಲಾಗಿತ್ತು. ಒಟ್ಟು 8113 ಅಭ್ಯರ್ಥಿಗಳ ಭರ್ತಿಗಾಗಿ ಪರೀಕ್ಷೆ ನಡೆದಿದೆ. ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಿಬಿಟಿ ಪರೀಕ್ಷೆ-2 ಅನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಮೂಲಕ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಟೈಪಿಂಗ್ ಕೌಶಲ್ಯ ಪರೀಕ್ಷೆಗೆ ಅರ್ಹತೆ ಹೊಂದಿದ ಅಭ್ಯರ್ಥಿಗಳ ಪಟ್ಟಿ ಇರುವ ಫಲಿತಾಂಶ ಹಾಗೂ ಕಟ್ ಆಫ್ ಮಾಹಿತಿಯನ್ನು ಆಯಾ ಪ್ರಾದೇಶಿಕ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ಗಳಲ್ಲಿ ಬಿಡುಗಡೆ ಮಾಡಿದೆ, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹುದು.
ಗಮನಿಸಿ: ಕೆಲವು ಪ್ರಾದೇಶಿಕ ಜಾಲತಾಣದಲ್ಲಿ ಮಾತ್ರ ಫಲಿತಾಂಶ ಲಭ್ಯವಿದೆ. ಇನ್ನುಳಿದ ಪ್ರಾದೇಶಿಕ ಜಾಲತಾಣದಲ್ಲಿ ಶೀಘ್ರದಲ್ಲೆ ಬಿಡುಗಡೆಯಾಗಲಿದೆ.. ಪರಿಶೀಲಿಸುತ್ತಿರಿ..
RRB NPTC GRADUATE CBT-2 ಫಲಿತಾಂಶ ಹಾಗೂ ಕಟ್ ಆಫ್ ಪರಿಶೀಲಿಸುವ ವಿಧಾನ
• ಆರ್.ಆರ್.ಬಿ ಅಧಿಕೃತ ವೆಬ್ಸೈಟ್ https://indianrailways.gov.in/railwayboard/view_section.jsp?lang=0&id=0,7,1281ಗೆ ಭೇಟಿ ನೀಡಿ.
• ನೀವು ಅರ್ಜಿ ಸಲ್ಲಿಸಿದ ರಾಜ್ಯ (ನಿಮ್ಮ ಸಂಬಂಧಿತ ಪ್ರಾದೇಶಿಕ ಜಾಲತಾಣ) RRB ಅಧಿಕೃತ ವೆಬ್ಸೈಟ್ ಅನ್ನು ಆಯ್ಕೆ ಮಾಡಿ.
• ನಂತರ ಇತ್ತೀಚಿನ ಅಪ್ಡೇಟ್ಸ್ ಅಥವಾ ಫಲಿತಾಂಶ ವಿಭಾಗದಲ್ಲಿ ನೀಡಲಾಗಿರುವ “RESULT of NTPC GRADUATE CEN 05/2024” ಹಾಗೂ “CUTOFF of NTPC GRADUATE CEN 05/2024” ಶಿರ್ಷೀಕೆ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
• ಪಿಡಿಎಫ್ ತೆರೆದು ಅಭ್ಯರ್ಥಿಗಳು ತಮ್ಮ ಹೆಸರು ಪರಿಶೀಲನೆ ಮಾಡಬಹುದು.
ಫಲಿತಾಂಶದ ನಂತರ ಮುಂದಿನ ಹಂತಗಳು
ಸದರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ ಹಾಗೂ ಟೈಪಿಂಗ್ ಕೌಶಲ್ಯ ಪರೀಕ್ಷೆಗೆ ಹಾಜರಾಗಬಹುದು. ಈ ಹಂತದ ಪರೀಕ್ಷೆಗಳಲ್ಲೂ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ದಾಖಲೆ ಪರಿಶೀಲನೆ (DV) ಮತ್ತು ವೈದ್ಯಕೀಯ ಪರೀಕ್ಷೆಗೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.
Not able