ರೈಲ್ವೆ ನೇಮಕಾತಿ ಮಂಡಳಿಯು (RRB) CEN ಸಂಖ್ಯೆ 03/2025ರಡಿ ಅಧಿಸೂಚಿಸಲಾದ ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸಲ್ಲಿಸಲಾದ ಅರ್ಜಿ ಸ್ಥಿತಿಯನ್ನು ಡಿ.09ರಿಂದ ಪರಿಶೀಲಸಲು ಅವಕಾಶ ಕಲ್ಪಿಸಿದೆ.
ಒಟ್ಟು 434 ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚಿಸಿ, ಅರ್ಜಿ ಸ್ವೀಕರಿಸಿತ್ತು. ಇದೀಗ ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಅರ್ಜಿ ಸ್ಥಿತಿಯನ್ನು RRB ಅಧಿಕೃತ ಜಾಲತಾಣ https://www.rrbapply.gov.in/#/auth/homeದಲ್ಲಿ ಬಿಡುಗಡೆ ಮಾಡಲಾಗಿದೆ. ಪ್ಯಾರಾಮೆಡಿಕಲ್ ವರ್ಗಗಳ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ಪರಿಶೀಲಿಸಬಹುದು.
RRB ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ:
• ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ https://www.rrbapply.gov.in/#/auth/homeಗೆ ಭೇಟಿ ನೀಡಿ.
• ಬಳಿಕ ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಮುಂದೆ “Application History” ಲಿಂಕ್ ಮೇಲೆ ಕ್ಲಿಕ್ ಮಾಡಿ.
• “CEN NO. 03/2025 for Recruitment of Various posts of Paramedical Categories.” ಮುಂದೆ “Application Status” ಶಿರ್ಷೀಕೆಯಡಿ “Provisionally Accepted” ಅಥವಾ “Conditionally Accepted” ಅಥವಾ “Conditionally Rejected” ನೀಡಲಾಗಿರುತ್ತದೆ.
• ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.
ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ – 9592-001-188, 0172-565-3333 ಅಥವಾ RRB ಇ-ಮೇಲ್ ಐಡಿ rrb.help@csc.gov.in ಅನ್ನು ಸಂಪರ್ಕಿಸಬಹುದು.
Ok sir
RRB job