ರೈಲ್ವೆ ನೇಮಕಾತಿ ಮಂಡಳಿಯು(RRB) ಪ್ಯಾರಾಮೆಡಿಕಲ್ ಸಿಬ್ಬಂದಿಯ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ರೈಲ್ವೆ ಇಲಾಖೆಯಲ್ಲಿ ಪ್ಯಾರಾಮೆಡಿಕಲ್ ನ ವಿವಿಧ ವಿಭಾಗಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಒಟ್ಟು 1376 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ರೇಡಿಯೋಗ್ರಾಫರ್, ಆಪ್ಟೋಮೆಟ್ರಿಸ್ಟ್ ಮತ್ತು ಫಾರ್ಮಸಿಸ್ಟ್ ನಂತಹ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು RRB ಅಧಿಕೃತ https://indianrailways.gov.in/ ವೆಬ್‌ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆಗೆ ಒಳಪಡಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬಿಎಸ್ಸಿ ನರ್ಸಿಂಗ್, ನರ್ಸಿಂಗ್ ಇನ್ ಡಿಪ್ಲೋಮೋ, ಪ್ಯಾರಮೆಡಿಕಲ್ ನಂತಹ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16ರಂದು ಕೊನೆಯ ದಿನಾಂಕವಾಗಿದೆ. ಈ ಲೇಖನದಲ್ಲಿ RRB Paramedical Recruitment 2024 ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of RRB Paramedical Recruitment 2024
Organization Name – Railway Recruitment Board (RRB)
Post Name – Paramedical
Total Vacancy – 1376
Application Process: Online
Job Location – All Over India(Karnataka)
ಪ್ರಮುಖ ದಿನಾಂಕಗಳು:
- ನೇಮಕಾತಿ ಅಧಿಸೂಚನೆಯ ಪ್ರಕಟಣೆ ದಿನಾಂಕ – ಆಗಸ್ಟ್ 11, 2024
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 17, 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 16, 2024
ಖಾಲಿ ಇರುವ ಹುದ್ದೆಗಳ ವಿವರ:
- ಆಹಾರ ತಜ್ಞ ಅಧಿಕಾರಿಗಳು – 5 ಹುದ್ದೆಗಳು
- ನರ್ಸಿಂಗ್ ಸೂಪರಿಂಟೆಂಡೆಂಟ್ ಅಧಿಕಾರಿಗಳು -713 ಹುದ್ದೆಗಳು
- ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ – 4 ಹುದ್ದೆಗಳು
- ಕ್ಲಿನಿಕಲ್ ಸೈಕಾಲಜಿಸ್ಟ್ – 7 ಹುದ್ದೆಗಳು
- ಡೆಂಟಲ್ ಹೈಜೀನಿಸ್ಟ್ – 3 ಹುದ್ದೆಗಳು
- ಡಯಾಲಿಸಿಸ್ ತಂತ್ರಜ್ಞ – 20 ಹುದ್ದೆಗಳು
- ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ Gr III – 126 ಹುದ್ದೆಗಳು
- ಲ್ಯಾಬ್ ಸೂಪರಿಂಟೆಂಡೆಂಟ್ ಗ್ರೇಡ್ III – 27 ಹುದ್ದೆಗಳು
- ಪರ್ಫ್ಯೂಸಿಸ್ಟ್ – 2 ಹುದ್ದೆಗಳು
- ಫಿಸಿಯೋಥೆರಪಿಸ್ಟ್ ಗ್ರೇಡ್ II – 20 ಹುದ್ದೆಗಳು
- ಆಕ್ಯುಪೇಷನಲ್ ಥೆರಪಿಸ್ಟ್ – 2 ಹುದ್ದೆಗಳು
- ಕ್ಯಾಥ್ ಲ್ಯಾಬೊರೇಟರಿ ತಂತ್ರಜ್ಞ – 2 ಹುದ್ದೆಗಳು
- ಫಾರ್ಮಾಸಿಸ್ಟ್ (ಎಂಟ್ರಿ ಗ್ರೇಡ್)- 246 ಹುದ್ದೆಗಳು
- ಎಕ್ಸ್-ರೇ ತಂತ್ರಜ್ಞ – 64 ಹುದ್ದೆಗಳು
- ಸ್ಪೀಚ್ ಥೆರಪಿಸ್ಟ್- 1 ಹುದ್ದೆ
- ಕಾರ್ಡಿಯಾಕ್ ಟೆಕ್ನಿಷಿಯನ್ – 4 ಹುದ್ದೆಗಳು
- ಆಪ್ಟೋಮೆಟ್ರಿಸ್ಟ್ – 4 ಹುದ್ದೆಗಳು
- ECG ತಂತ್ರಜ್ಞರು – 13 ಹುದ್ದೆಗಳು
- ಪ್ರಯೋಗಾಲಯ ಸಹಾಯಕ ಗ್ರೇಡ್ II – 94 ಹುದ್ದೆಗಳು
- ಫೀಲ್ಡ್ ವರ್ಕರ್ – 19 ಹುದ್ದೆಗಳು
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು B.Sc ನರ್ಸಿಂಗ್ , D. ಫಾರ್ಮಸಿ, B. ಫಾರ್ಮಸಿ ಅರ್ಹತೆ ಪಡೆದುಕೊಂಡಿರಬೇಕು.
(ನಿಗದಿತ ಹುದ್ದೆಗಳಿಗೆ ಕೆಲಸ ನಿರ್ವಹಿಸಿದ ಅನುಭವದ ಅವಶ್ಯಕತೆ ಇದ್ದು, ಶೈಕ್ಷಣಿಕ ಅರ್ಹತೆ ಕುರಿದಾದ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಒಮ್ಮೆ ಓದಿ ನೋಡಿ)
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18ರಿಂದ ಗರಿಷ್ಠ 33 ವರ್ಷಗಳನ್ನು ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಎರಡು ಹಂತದ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರಥಮ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದ್ವಿತೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ, ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ ಅಭ್ಯರ್ಥಿಗಳಿಗೆ – ₹500
- SC/ST/EWS ಅಭ್ಯರ್ಥಿಗಳಿಗೆ – ₹250
- ಮಹಿಳಾ ಅಭ್ಯರ್ಥಿಗಳಗೆ – ₹250
ಪಾವತಿ ವಿಧಾನ – ಆನ್ ಲೈನ್ ಮೂಲಕ
How to Apply for RRB Paramedical Recruitment 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ
- ರೈಲ್ವೇ ನೇಮಕಾತಿ ಮಂಡಳಯ ಅಧಿಕೃತ ವೆಬ್‌ಸೈಟ್ https://indianrailways.gov.in or https://www.rrbapply.gov.in/ ಗೆ ಭೇಟಿ ನೀಡಿ.
- ಮುಖಪುಟದ ನೇಮಕಾತಿ ವಿಭಾಗದಲ್ಲಿ ಕಾಣುವ “RRB Paramedical Recruitment 2024” ಕ್ಲಿಕ್ ಮಾಡಿ.
- “ಆನ್‌ಲೈನ್ ಅರ್ಜಿ” ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ಕೇಳಲಾಗುವ ಅರ್ಜಿ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯವಿರುವ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
- ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಬಳಸಿಕೊಂಡು ಅಗತ್ಯವಿರುವ ಮೊತ್ತವನ್ನು ಪಾವತಿಸಿ.
- ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
Important Direct Links:
Official Full Notification PDF | Download |
Official Short Notification PDF | Download |
Online Application Form Link | New Apply | Login |
Official Website | indianrailways.gov.in |
More Updates | KarnatakaHelp.in |