ರೈಲ್ವೆ ನೇಮಕಾತಿ ಮಂಡಳಿ (RRB) ಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡಾ ಮುಗಿಸಿತ್ತು. ಇದೀಗ ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಇಲಾಖೆಯು ಸ್ವೀಕರಿಸಿದೋ ಅಥವಾ ಇಲ್ಲವೋ ತಿಳಿದುಕೊಳ್ಳಲು ಇಲಾಖೆಯು ಅಪ್ಲಿಕೇಶನ್ ಸ್ಥಿತಿ(RRB Technician Application Status) ಪರಿಶೀಲನೆ ಮಾಡಲು ತಿಳಿಸಿದೆ.
ಅಭ್ಯರ್ಥಿಗಳು ನೋಂದಣಿ ಮಾಡಿರುವ ಮೊಬೈಲ್ ನಂಬರ್ ಮತ್ತು ಜಿಮೇಲ್ ಗೆ ನೀವು ಸಲ್ಲಿಸಿದ ಟೆಕ್ನಿಷಿಯನ್ ಗ್ರೇಡ್-3 ಅಪ್ಲಿಕೇಶನ್ ಸ್ಥಿತಿ ಬಗ್ಗೆ ಸಂದೇಶ ಕಳುಹಿಸಲಾಗಿದೆ ಎಂದು ಇಲಾಖೆಯು ತಿಳಿಸಿದೆ. ಒಂದು ವೇಳೆ ಅರ್ಜಿ ತಿರಸ್ಕರಿಸಿದ್ದಲ್ಲಿ ಮುಂಬರುವ ಪರೀಕ್ಷೆಗೆ ಹಾಜರಾಗಲು ಅನರ್ಹರಾಗಿರುತ್ತಾರೆ.