RRB ಟೆಕ್ನಿಷಿಯನ್ ಭರ್ತಿ 2024ಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಒಂದು ಪ್ರಮುಖ ಸುದ್ದಿ!ರೈಲ್ವೆ ನೇಮಕಾತಿ ಮಂಡಳಿಯು(RRB) ಟೆಕ್ನಿಷಿಯನ್ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಮಾರ್ಚ್ 9 ರಂದು ಪ್ರಾರಂಭಿಸಿದೆ. ಈ ನೇಮಕಾತಿಯಲ್ಲಿ ವಿವಿಧ ವರ್ಗಗಳಲ್ಲಿ ಒಟ್ಟು 9144 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ನೋಂದಣಿ ಪ್ರಕ್ರಿಯೆಯು ಏಪ್ರಿಲ್ 8 ರಂದು ಕೊನೆಯ ದಿನಾಂಕವನ್ನು ನೀಡಲಾಗಿತ್ತು, ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡುವ (RRB Technician Photo And Signature Update)ವಿಂಡೋವನ್ನು ಜೂನ್ 3 ರಿಂದ ಜೂನ್ 7 ರವರೆಗೆ ತೆರೆದಿರುತ್ತದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು 07.06.2024 (23:59 ಗಂಟೆಗಳು) ಒಳಗೆ ಸರಿಯಾದ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಲು ವಿಫಲವಾದ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಎಂದು ರೈಲ್ವೆ ಮಂಡಳಿಯು ಅಧಿಕೃತ ಪ್ರಕಟಣೆಯ ಮೂಲಕ ತಿಳಿಸಲಾಗಿದೆ. ಈ ಲೇಖನದಲ್ಲಿ ಫೋಟೋ ಮತ್ತು ಸಿಗ್ನೇಚರ್ ಅಪ್ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿಯನ್ನು ನೀಡಲಾಗಿದೆ.