ಆಗ್ನೇಯ ಕೇಂದ್ರ ರೈಲ್ವೆಯಲ್ಲಿ ಅಪ್ರೆಂಟಿಸ್‌ಶಿಪ್‌; ಐಟಿಐ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Published on:

ಬಿಲಾಸ್ಪುರ್ ಆಗ್ನೇಯ ಕೇಂದ್ರ ರೈಲ್ವೆಯಲ್ಲಿ 2026-27ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 1191 ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ ತರಬೇತಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು 1 ವರ್ಷಗಳವರೆಗೆ ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಜೂ.11ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು NAPS ಅಧಿಕೃತ ಜಾಲತಾಣ https://www.apprenticeshipindia.gov.in/ಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಮೇ 12, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 11, 2025

ಟ್ರೇಡ್ ಗಳ ಅನುಸಾರ ಖಾಲಿ ಇರುವ ಅಪ್ರೆಂಟಿಸ್‌ ಹುದ್ದೆಗಳ ವಿವರ

ಕಾರ್ಪೆಂಟರ್ 38
COPA 350
ಡ್ರಾಫ್ಟ್ಸ್‌ಮ್ಯಾನ್ 12
ಎಲೆಕ್ಟ್ರಿಷಿಯನ್ 206
ELECT 04
ಫಿಟ್ಟರ್ 223
ಮಶಿನಿಸ್ಟ್ 04
ಪೇಂಟರ್ 41
ಪ್ಲಂಬರ್ 30
MECH 40
SMW 04
ಸ್ಟೆನೋ(ಇಂಗ್ಲಿಷ್) 36
ಸ್ಟೆನೋ(ಹಿಂದಿ) 25
ಡೀಸೆಲ್ ಮೆಕ್ಯಾನಿಕ್ 08
ಟರ್ನರ್ 04
ವೆಲ್ಡರ್ 20
ವೈರ್‌ಮ್ಯಾನ್ 125
ಕೆಮಿಕಲ್ ಲ್ಯಾಬೋರೇಟರಿ ಅಸಿಸ್ಟೆಂಟ್ 04
ಟ್ರ್ಯಾಕ್ ಮೆಷಿನ್ 17

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ 10ನೇ ತರಗತಿ/ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.

ವಯೋಮಿತಿ:

11-06-2026 ರಂತೆ;

ಕನಿಷ್ಠ ವಯಸ್ಸಿನ ಮಿತಿ 15 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ 24 ವರ್ಷಗಳು

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸ್ಟೈಫಂಡ್:

ಅಭ್ಯರ್ಥಿಗಳಿಗೆ ಛತ್ತೀಸ್‌ಗಢ ರಾಜ್ಯ ಸರ್ಕಾರದ ನಿಯಮಗಳ ಅನುಸಾರ ಸ್ಟೈಫಂಡ್ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸುವ ಬಗೆ…

• ಮೊದಲಿಗೆ ಅಭ್ಯರ್ಥಿಗಳು NAPS ಅಧಿಕೃತ ಜಾಲತಾಣ https://www.apprenticeshipindia.gov.in/ ಕ್ಕೆ ಭೇಟಿ ನೀಡಿ.

• ನೋಂದಾಯಿತ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

• ನಂತರ “ಶಿಷ್ಯವೃತ್ತಿಯ ಅವಕಾಶಗಳು” ಅಡಿಯಲ್ಲಿ ನೀಡಲಾಗಿರುವ “SECR ಬಿಲಾಸ್ಪುರ್ ವಿಭಾಗದಲ್ಲಿ -1962ರ ಅಡಿಯಲ್ಲಿ ಆಕ್ಟ್ ಅಪ್ರೆಂಟಿಸ್‌ಶಿಪ್‌ಗೆ ನೇಮಕಾತಿ” ಜಾಹೀರಾತು ಅನ್ನು ಹುಡುಕಿ.

• ಬಳಿಕ ನೀವು ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯ ಮೇಲೆ ಅನ್ವಯಿಸು ಆಯ್ಕೆಯನ್ನು ಕ್ಲಿಕ್ ಮಾಡಿ.

• ಈಗ ನೀವು ಖಾಲಿ ಹುದ್ದೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುತ್ತೀರಿ.

Important Direct Links:

Official Notification PDFDownload
Online Application Form LinkApply Now
Official Websitesecr.indianrailways.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment