ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 2026-27ನೇ ಸಾಲಿಗೆ 1961ರ ಅಪ್ರೆಂಟಿಸ್ ಕಾಯ್ದೆಯಡಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ(276 ಸೀಟು) ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ತನ್ನ ಬ್ಯಾಂಕಿನ ಶಾಖೆಗಳಿಗೆ ಒಟ್ಟು 7150 ಸೀಟುಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ತರಬೇತಿ ಒದಗಿಸಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಅರ್ಜಿದಾರರು ಎಸ್‌ಬಿಐ ಅಧಿಕೃತ ಜಾಲತಾಣ https://sbi.bank.in/web/careers/current-openings ಅಥವಾ https://ibpsreg.ibps.in/sbiaapr26/ಕ್ಕೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯಾ ರಾಜ್ಯದ ಜಿಲ್ಲಾವಾರು ತರಬೇತಿ ಸೀಟುಗಳ ಮಾಹಿತಿಯನ್ನು ಅಧಿಕೃತ ಅಧಿಸೂಚನೆ ನೀಡಲಾಗಿದೆ ಮಾಹಿತಿಗಾಗಿ ಪರಿಶೀಲಿಸಿಕೊಳ್ಳಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮೇ 19, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 08, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜೂನ್ 08, 2026
- ಆನ್ ಲೈನ್ ಪರೀಕ್ಷೆಯ ದಿನಾಂಕ – ಜುಲೈ 2026
ಅಪ್ರೆಂಟಿಸ್ ತರಬೇತಿ ಸ್ಥಾನಗಳ ವಿವರ:
ಗುಜರಾತ್ 217
ಆಂಧ್ರ ಪ್ರದೇಶ 709
ಕರ್ನಾಟಕ 276
ಛತ್ತಿಸ್ಗಡ್ 93
ಮಧ್ಯ ಪ್ರದೇಶ 285
ಒಡಿಶಾ 229
ಯುಟಿ ಲಡಾಕ್ 15
ಹಿಮಾಚಲ ಪ್ರದೇಶ 180
ಯುಟಿ ಚಂಡೀಗಢ 15
ಪಂಜಾಬ್ 345
ಯುಟಿ ಜಮ್ಮು ಕಾಶ್ಮೀರ 300
ಹರಿಯಾಣ 320
ಯುಟಿ ಪಾಂಡಿಚೇರಿ 18
ತಮಿಳುನಾಡು 396
ಅರುಣಾಚಲ ಪ್ರದೇಶ 26
ನಾಗಾಲ್ಯಾಂಡ್ 20
ಮೇಘಾಲಯ 08
ತ್ರಿಪುರಾ 88
ಅಸ್ಸಾಂ 368
ಮಿಜೋರಾಮ್ 54
ಮಣಿಪುರ 06
ತೆಲಂಗಾಣ 491
ರಾಜಸ್ಥಾನ 350
ಪಶ್ಚಿಮ ಬಂಗಾಳ 460
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೇಂದ್ರಾಡಳಿತ ಪ್ರದೇಶ 42
ಸಿಕ್ಕಿಂ 50
ಉತ್ತರ ಪ್ರದೇಶ 561
ಮಹಾರಾಷ್ಟ್ರ 504
ಗೋವಾ 16
ಉತ್ತರಾಖಂಡ 115
ದೆಹಲಿ 105
ಬಿಹಾರ 58
ಜಾರ್ಖಂಡ್ 27
ಕೇರಳ 403
ಶೈಕ್ಷಣಿಕ ಅರ್ಹತೆ:
SBI ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
01-04-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ 20 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 28 ವರ್ಷಗಳು.
ಸರ್ಕಾರಿ ನಿಯಮಗಳ ಪ್ರಕಾರ ಒಬಿಸಿ ಪ.ಜಾತಿ, ಪ. ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಸ್ಟೈಫಂಡ್:
ಅಭ್ಯರ್ಥಿಗಳಿಗೆ ಮಾಹೆಯಾನ ₹15,000/- ವರೆಗೆ ಶಿಷ್ಯವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
- ಆನ್ಲೈನ್ ಲಿಖಿತ ಪರೀಕ್ಷೆ
- ಸ್ಥಳೀಯ ಭಾಷಾ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ಅಂತಿಮ ಆಯ್ಕೆ
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ₹300
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ
• ಅಭ್ಯರ್ಥಿಗಳು SBI Career ವಿಭಾಗದಲ್ಲಿ ಲಭ್ಯವಿರುವ ಲಿಂಕ್ https://ibpsreg.ibps.in/sbiaapr26/ಕ್ಕೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ.
• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
Important Direct Links:
| Official Notification PDF | Download |
| Online Application Form Link | Apply Now |
| Official Website | https://sbi.bank.in/ |
| More Updates | KarnatakaHelp.in |