ದಕ್ಷಿಣ ಪೂರ್ವ ರೈಲ್ವೆ, ಕೋಲ್ಕತ್ತಾ 2025-26ನೇ ಸಾಲಿನ ಕ್ರೀಡಾಕೋಟಾದಡಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಕೋಶವು ಅರ್ಜಿ ಆಹ್ವಾನಿಸಿದೆ.
ಗ್ರೂಪ್ ಸಿ (21) ಹಾಗೂ ಗ್ರೂಪ್ ಡಿ(33) ಸೇರಿದಂತೆ ಒಟ್ಟು 54 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇಲಾಖೆ ಅಧಿಸೂಚನೆಯಲ್ಲಿ ಗೊತ್ತುಪಡಿಸಿದ ಕ್ರೀಡೆಯಲ್ಲಿ ಸಾಧನೆಗೈದ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಕೆಗೆ ಅರ್ಹರು. ಫೆ.09 ರೊಳಗೆ ದಕ್ಷಿಣ ಪೂರ್ವ ರೈಲ್ವೆಯ ಅಧಿಕೃತ ಜಾಲತಾಣ https://iroams.com/rrc_ser_sports2025/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
✓ ಲೆವೆಲ್ 4/ಲೆವೆಲ್ 5 (ಗ್ರೂಪ್ ಸಿ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ/ಅದಕ್ಕೆ ಸಮಾನವಾದ ಅರ್ಹತೆಯನ್ನು ಹೊಂದಿರಬೇಕು.
✓ ಲೆವೆಲ್ 2/ಲೆವೆಲ್ 3 (ಗ್ರೂಪ್ ಸಿ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ 12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.
✓ ಲೆವೆಲ್ 1 (ಗ್ರೂಪ್ ಡಿ) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣ/ITI ಉತ್ತೀರ್ಣ/ತತ್ಸಮಾನ ಅರ್ಹತೆ/NCVT ಯಿಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ ಹೊಂದಿರಬೇಕು.
**ಜೊತೆಗೆ ನಿಗದಿತ ಕ್ರೀಡೆಯಲ್ಲಿ ಸಾಧನೆ ಮಾಡಿರಬೇಕು.
ವಯೋಮಿತಿ:
01-01-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
02-01-2001 ಮತ್ತು 01-01-2008 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಯಾವುದೇ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುವುದಿಲ್ಲ.
ಆಯ್ಕೆ ವಿಧಾನ:
ಕ್ರೀಡಾ ಸಾಧನೆ
ಕ್ರೀಡಾ ಪ್ರಯೋಗ/ಫಿಟ್ನೆಸ್ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಸಂಬಳ:
7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್ ನಿಯಮಗಳ ಅನುಸಾರ ಮಾಹೆಯಾನ ವೇತನ ನಿಗದಿಯಾಗಿರುತ್ತದೆ.
ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ – 250ರೂ. ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 500ರೂ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
• ದಕ್ಷಿಣ ಪೂರ್ವ ರೈಲ್ವೆಯ ಅಧಿಕೃತ ಜಾಲತಾಣ https://iroams.com/rrc_ser_sports2025/ಕ್ಕೆ ಭೇಟಿ ನೀಡಿ.
• ಬಳಕೆದಾರರ ಹೆಸರು ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.