ರಕ್ಷಣಾ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜಂಟಿ ಉದ್ಯಮ ಸಂಸ್ಥೆಯಾಗಿರುವ ಬಿಜಾಪುರದ ಸೈನಿಕ ಶಾಲೆಯು ವಿವಿಧ ವೃಂದದ ಸಿಬ್ಬಂದಿಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ಪಿಜಿಟಿ(02), ಟಿಜಿಟಿ(07), ಸಂಗೀತ ಶಿಕ್ಷಕ(01), ಕೌನ್ಸಿಲರ್(01), ಕ್ರಾಫ್ಟ್ ಇನ್ಸ್ಟ್ರಕ್ಟರ್(01) ಹಾಗೂ ವಾರ್ಡ್ ಬಾಯ್ಸ್(04), ಪಿಇಎಂ/ಪಿಟಿಐ ಕಮ್-ಮ್ಯಾಟ್ರಾನ್ (ಮಹಿಳೆ 01), ನರ್ಸಿಂಗ್ ಸಿಸ್ಟರ್(01) ಸೇರಿ ಒಟ್ಟು 18 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್ಸೈಟ್ https://ssbj.in/ನಲ್ಲಿ ನಿಗದಿತ ನಮೂನೆ ಪಡದು ಅರ್ಜಿ ಭರ್ತಿ ಮಾಡಿ, ಪ್ರಾಂಶುಪಾಲರು, ಸೈನಿಕ್ ಶಾಲೆ, ಬಿಜಾಪುರ – 586108 ವಿಳಾಸಕ್ಕೆ ಜ.16ರ ಮೊದಲು ತಲುಪುವಂತೆ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ದ್ವಿತೀಯ ಪಿಯುಸಿ, ಸಂಬಂಧಿತ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಬಿ.ಎಡ್/ಬಿಎಸ್ಸಿ ಎಡ್, ಎಂ.ಎಡ್/ಎಂ.ಎಸ್ಸಿ ಎಡ್ / (ಬಿ.ಪಿ.ಇ.ಡಿ) ಪೂರ್ಣಗೊಳಿಸಿರಬೇಕು.
ಪಿಜಿಟಿ ಹುದ್ದೆಗೆ – ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಟಿಜಿಟಿ ಹುದ್ದೆಗೆ- ಸಂಬಂಧಿಸಿದ ವಿಷಯದಲ್ಲಿ ಪದವಿ ಸಂಗೀತ ಶಿಕ್ಷಕ ಹುದ್ದೆಗೆ – ಸಂಗೀತದಲ್ಲಿ ಪದವಿ ಕೌನ್ಸಿಲರ್ ಹುದ್ದೆಗೆ- ಸೈಕೋಲಾಜಿಯಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ ಕ್ರಾಫ್ಟ್ ಇನ್ಸ್ಟ್ರಕ್ಟರ್ ಹುದ್ದೆಗೆ- ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ ವಾರ್ಡ್ ಬಾಯ್ಸ್, ಪಿಇಎಂ/ಪಿಟಿಐ ಕಮ್-ಮ್ಯಾಟ್ರಾನ್ (ಮಹಿಳೆ) ಹುದ್ದೆಗೆ – ಎಸ್ಸೆಸ್ಸೆಲ್ಸಿ ಪಾಸ್ ನರ್ಸಿಂಗ್ ಸಿಸ್ಟರ್ ಹುದ್ದೆಗೆ – ಬಿ.ಎಸ್ಸಿ
ವಯೋಮಿತಿ:
01-04-2026 ರಂತೆ;
✓ ಪಿಜಿಟಿ ಹುದ್ದೆಗಳಿಗೆ; ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು.
✓ ಟಿಜಿಟಿ, ಸಂಗೀತ ಶಿಕ್ಷಕ, ಕೌನ್ಸಿಲರ್ಹಾಗೂ ಕ್ರಾಫ್ಟ್ ಇನ್ಸ್ಟ್ರಕ್ಟರ್ ಹುದ್ದೆಗಳಿಗೆ; ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು.
✓ ವಾರ್ಡ್ ಬಾಯ್ಸ್, PEM/PTI ಕಮ್-ಮ್ಯಾಟ್ರಾನ್ ಹಾಗೂ ನರ್ಸಿಂಗ್ ಸಿಸ್ಟರ್ ಹುದ್ದೆಗಳಿಗೆ; ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಪ್ರಾಯೋಗಿಕ ಪರೀಕ್ಷೆ
ಸಂದರ್ಶನ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನವನ್ನು ಬಿಜಾಪುರ ಸೈನಿಕ ಶಾಲೆಯ ನಿಯಮಗಳ ಅನುಸಾರ ಪಾವತಿಸಲಾಗುತ್ತದೆ.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ – 500ರೂ.
ಅರ್ಜಿ ಶುಲ್ಕದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೈನಿಕ್ ಸ್ಕೂಲ್ ಕ್ಯಾಂಪಸ್ ಬಿಜಾಪುರ ಶಾಖೆಯಲ್ಲಿ (ಕೋಡ್ 3163) – “ಸೈನಿಕ್ ಶಾಲೆ ಬಿಜಾಪುರದ ಹೆಸರಿನಲ್ಲಿ” ಪಾವತಿಸಬೇಕು.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲಿಗೆ ಅಭ್ಯರ್ಥಿಗಳು ಬಿಜಾಪುರ ಸೈನಿಕ ಶಾಲೆಯ ಅಧಿಕೃತ ಜಾಲತಾಣ https://ssbj.in/ಕ್ಕೆ ಭೇಟಿ ನೀಡಿ.
• ನಂತರ ಇತ್ತೀಚಿನದು ವಿಭಾಗದಲ್ಲಿ ನೀಡಲಾಗಿರುವ “ಒಪ್ಪಂದದ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಹುದ್ದೆಯ ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ-ವಿವರ, ಸಹಿ, ಭಾವಚಿತ್ರ, ಡಿಮ್ಯಾಂಡ್ ಡ್ರಾಫ್ಟ್, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• 55ರೂ. ಮೌಲ್ಯದ ಅಂಚೆ ಚೀಟಿಗಳನ್ನು ಹೊಂದಿರುವ ಸ್ವಯಂ ವಿಳಾಸವಿರುವ ಲಕೋಟೆಯನ್ನು ಈ ಕೆಳಗಿನ ವಿಳಾಸಕ್ಕೆ ಜನವರಿ 16 ರೊಳಗೆ ತಲುಪುವಂತೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.
ವಿಳಾಸ: “ಪ್ರಾಂಶುಪಾಲರು, ಸೈನಿಕ್ ಶಾಲೆ, ಬಿಜಾಪುರ – 586108 (ಕರ್ನಾಟಕ)”
Mam work en hirutte only 12th pass adavarige
10th pass