ರಕ್ಷಣಾ ಸಚಿವಾಲಯದ ಸೈನಿಕ ಶಾಲೆಗಳ ಸೊಸೈಟಿಯಡಿ ಸಂಯೋಜಿತವಾಗಿರುವ ಬೆಳಗಾವಿ ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
ಪುರುಷ ನರ್ಸ್(01), ಮಹಿಳಾ ವಾರ್ಡನ್(01) ಮತ್ತು ಗುಮಾಸ್ತ(02) ಸೇರಿದಂತೆ ಒಟ್ಟು 04 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿ.26ರೊಳಗೆ ಶಾಲೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದುಕೊಂಡು ಭರ್ತಿ ಮಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಂಗೊಳ್ಳಿ ಗ್ರಾಮ, ಬೈಲಹೊಂಗಲ ತಾಲೂಕು, ಬೆಳಗಾವಿ ಜಿಲ್ಲೆ, ಕರ್ನಾಟಕ, ಪಿನ್ ಕೋಡ್-591115ಗೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 12, 2025
ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 26, 2025
ಹುದ್ದೆಗಳ ವಿವರ:
ಪುರುಷ ನರ್ಸ್ – 01 ಹುದ್ದೆ
ಮಹಿಳಾ ವಾರ್ಡನ್ – 01 ಹುದ್ದೆ
ಗುಮಾಸ್ತ – 02 ಹುದ್ದೆಗಳು
ಒಟ್ಟು – 04 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
✓ ಪುರುಷ ನರ್ಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 55% ಒಟ್ಟು ಅಂಕಗಳೊಂದಿಗೆ ನರ್ಸಿಂಗ್ನಲ್ಲಿ ಡಿಪ್ಲೊಮಾ/ಜಿಎನ್ಎಂ/ಬಿ.ಎಸ್ಸಿ. ನರ್ಸಿಂಗ್ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಮತ್ತು ರಾಜ್ಯ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಹೊಂದಿರಬೇಕು.
✓ ಮಹಿಳಾ ವಾರ್ಡನ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
✓ ಗುಮಾಸ್ತ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
✓ ಪುರುಷ ನರ್ಸ್ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
✓ ಮಹಿಳಾ ವಾರ್ಡನ್ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
✓ ಗುಮಾಸ್ತ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಪರೀಕ್ಷೆ/ಕೌಶಲ್ಯ/ಪ್ರಾಯೋಗಿಕ ಪರೀಕ್ಷೆ ಸಂದರ್ಶನ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಪುರುಷ ನರ್ಸ್ ಹುದ್ದೆಗೆ 30,000ರೂ., ಮಹಿಳಾ ವಾರ್ಡನ್ ಹುದ್ದೆಗೆ 18,000ರೂ., ಹಾಗೂ ಗುಮಾಸ್ತ ಹುದ್ದೆಗೆ 25,500ರೂ. ವರೆಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಒಬಿಸಿ ವರ್ಗದ ಅಭ್ಯರ್ಥಿಗಳಿಗೆ – 500ರೂ. ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 350ರೂ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• ಮೇಲಿನ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು KSRSS ಅಧಿಕೃತ ಜಾಲತಾಣ https://www.ksrss.com/ಕ್ಕೆ ಭೇಟಿ ನೀಡಿ.
• ಮುಖಪುಟದಲ್ಲಿ ಪ್ರಕಟಣೆಗಳು ವಿಭಾಗದಲ್ಲಿ ನೀಡಲಾಗಿರುವ “ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ನಮೂನೆ” ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ.
• ನಂತರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರಗಳನ್ನು ನಮೂದಿಸಿ. “ಕಮಿಷನರ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ” ಹೆಸರಿನಲ್ಲಿ ಉಲ್ಲೇಖಿಸಲಾಗಿರುವ ಅರ್ಜಿ ಶುಲ್ಕವನ್ನು ಪಾವತಿಸಿರುವ ಡಿಮ್ಯಾಂಡ್ ಡ್ರಾಫ್ಟ್, ಭಾವಚಿತ್ರ, ಶೈಕ್ಷಣಿಕ ದಾಖಲೆಗಳು ಹಾಗೂ (10 ನೇ ತರಗತಿಯಿಂದ ಪ್ರಾರಂಭವಾಗುವ ಎಲ್ಲಾ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳು, ಪದವಿಗಳು/ಡಿಪ್ಲೊಮಾಗಳ) ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ.
• 25ರ ಅಂಚೆ ಚೀಟಿ ಹೊಂದಿರುವ ಸ್ವ-ವಿಳಾಸದ ಲಕೋಟೆಯ ಮೇಲ್ಭಾಗದಲ್ಲಿ ಪುರುಷ ನರ್ಸ್/ಮಹಿಳಾ ವಾರ್ಡನ್/ಕ್ಲರ್ಕ್’ ಹುದ್ದೆಗೆ ಅರ್ಜಿ ಎಂದು ದೊಡ್ಡ ಅಕ್ಷರಗಳಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಡಿಸೆಂಬರ್ 26ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಂಗೊಳ್ಳಿ ಗ್ರಾಮ, ಬೈಲಹೊಂಗಲ ತಾಲೂಕು, ಬೆಳಗಾವಿ ಜಿಲ್ಲೆ, ಕರ್ನಾಟಕ, ಪಿನ್ ಕೋಡ್ – 591115