SBI PO Mains Result 2025(OUT): ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

SBI PO/Clerk Mains Result 2025
SBI PO/Clerk Mains Result 2025

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಜಾಹೀರಾತು ಸಂಖ್ಯೆ CRPD/PO/2024-25/22 ಅಡಿಯಲ್ಲಿ ಪ್ರಿಲಿಮ್ಸ್ ಸುತ್ತಿನಲ್ಲಿ ಯಶಸ್ವಿಯಾಗಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ SBI PO ಮುಖ್ಯ ಪರೀಕ್ಷೆಯನ್ನು ಮೇ 5 ರಂದು ನಡೆಸಿತ್ತು, ಇದೀಗ ಸದರಿ ಮುಖ್ಯ ಪರೀಕ್ಷೆಯ ಫಲಿತಾಂಶ(SBI PO Mains Result 2025)ವನ್ನು ಬಿಡುಗಡೆ ಮಾಡಿದೆ.

ಎಸ್.ಬಿ.ಐ ಒಟ್ಟು 600 ಪ್ರೊಬೇಷನರಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಪ್ರಿಲಿಮ್ಸ್ ಪರೀಕ್ಷೆ ನಡೆಸಿ, ಪ್ರಿಲಿಮ್ಸ್‌ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯನ್ನು ಮೇ 5 ರಂದು ಯಶಸ್ವಿಯಾಗಿ ನಡೆಸಲಾಗಿತ್ತು, ಇದೀಗ ಸದರಿ ಪರೀಕ್ಷೆಯ ಫಲಿತಾಂಶ, ಕಟ್ ಆಫ್ ಹಾಗೂ ಸ್ಕೋರ್ ಕಾರ್ಡ್ ಅನ್ನು ಅಧಿಕೃತ ವೆಬ್ ಸೈಟ್ https://sbi.co.in/ ನಲ್ಲಿ ಪ್ರಕಟಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

How to Download SBI PO Mains Result 2025 PDF ?

SBI PO ಮುಖ್ಯ ಪರೀಕ್ಷೆಯ ಫಲಿತಾಂಶ ನೋಡುವ ವಿಧಾನ;

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೃತ್ತಿಜೀವನ
    ವೆಬ್‌ಸೈಟ್‌ https://sbi.co.in/web/careers ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ನೇಮಕಾತಿ ಫಲಿತಾಂಶಗಳು ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ (ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ)ಜಾಹೀರಾತುಸಂಖ್ಯೆ:ಸಿಆರ್‌ಪಿಡಿಪಿಒ/2024-25/22 ಲಿಂಕ್ ಮೇಲೆ ಟ್ಯಾಪ್ ಮಾಡಿ.
  • ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ – ಮುಖ್ಯ ಪರೀಕ್ಷೆಯ ಫಲಿತಾಂಶ ಪಿಡಿಎಫ್ ರೂಪದಲ್ಲಿ ಕಾಣಸಿಗುತ್ತದೆ. (ಹಂತ – III (ಸೈಕೋಮೆಟ್ರಿಕ್ ಪರೀಕ್ಷೆ) ಗಾಗಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ರೋಲ್ ಸಂಖ್ಯೆಗಳು)
  • ನಿಮ್ಮ ರೋಲ್ ಸಂಖ್ಯೆಯ ಮೂಲಕ ನಿಮ್ಮ ರ್‍ಯಾಂಕನ್ನು ಪರಿಶೀಲಿಸಿಕೊಳ್ಳಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ – ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ

ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಹಂತ-3 ಪರೀಕ್ಷೆಗೆ ಕರೆಯಲಾಗುತ್ತದೆ. ಮುಖ್ಯ ಮತ್ತು ಹಂತ 3 ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಸೈಕೋಮೆಟ್ರಿಕ್ ಪರೀಕ್ಷೆ(PSYCHOMETRIC TEST)ಯ ತಾತ್ಕಾಲಿಕ ದಿನಾಂಕ 31.05.2025 ಮತ್ತು ಗುಂಪು ವ್ಯಾಯಾಮ(GROUP EXERCISE) ಮತ್ತು ಸಂದರ್ಶನ(INTERVIEWವು 05.06.2025 80 09.06.2025 ರವರೆಗೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ: ಹೆಚ್ಚಿನ ವಿವರಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ SMS/ಇಮೇಲ್ ಮೂಲಕ ಸೂಚಿಸಲಾಗುತ್ತದೆ.

Important Direct Links:

SBI PO Mains Result 2025 PDF LinkDownload
Official Websitesbi.co.in
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment