ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದಲ್ಲಿ ವಿವಿಧ ಸ್ಪೇಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿಪಿ ವೇಲ್ತ್(SRM), ಎವಿಪಿ ವೇಲ್ತ್(RM), ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಒಟ್ಟು 1146 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಪದವೀಧರರು ಜ.10ರೊಳಗೆ ಬ್ಯಾಂಕಿನ ಅಧಿಕೃತ ಜಾಲತಾಣದ ಲಿಂಕ್ https://recruitment.sbi.bank.in/crpd-sco-2025-26-17/applyಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಜನವರಿ 10, 2026 (ವಿಸ್ತರಣೆ)
ಶೈಕ್ಷಣಿಕ ಅರ್ಹತೆ:
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಜೊತೆಗೆ ನಿಗದಿತ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸದ ಅನುಭವ ಹೊಂದಿರಬೇಕು.
ಮತ್ತಷ್ಟು ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.
ವಯೋಮಿತಿ:
1-05-2025ರಂತೆ;
ವಿಪಿ ವೇಲ್ತ್(SRM) ಹುದ್ದೆಗೆ – ಕನಿಷ್ಠ 26 ವರ್ಷಗಳು, ಗರಿಷ್ಠ 42 ವರ್ಷಗಳು ಎವಿಪಿ ವೇಲ್ತ್(RM) ಹುದ್ದೆಗೆ – ಕನಿಷ್ಠ 23 ವರ್ಷಗಳು, ಗರಿಷ್ಠ 35 ವರ್ಷಗಳು ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗೆ – ಕನಿಷ್ಠ 20 ವರ್ಷಗಳು, 35 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಕಿರು ಆಯ್ಕೆ ಪಟ್ಟಿ (ಶಾರ್ಟ್ಲಿಸ್ಟ್)
ಸಂದರ್ಶನ (100 ಅಂಕ)
ಸಿಟಿಸಿ ಮಾತುಕತೆ (CTC Negotiation)
ಮೆರಿಟ್ ಪಟ್ಟಿ (ಅಂತಿಮ ಆಯ್ಕೆ)
ಸಂಬಳ:
ವಿಪಿ ವೇಲ್ತ್(SRM) ಹುದ್ದೆಗೆ – ಸ್ಥಿರ ವೇತನ; 30 ಲಕ್ಷ (ವರ್ಷಕ್ಕೆ) ಎವಿಪಿ ವೇಲ್ತ್(RM) ಹುದ್ದೆಗೆ – ಸ್ಥಿರ ವೇತನ; 20 ಲಕ್ಷ (ವರ್ಷಕ್ಕೆ) ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗೆ – ಸ್ಥಿರ ವೇತನ; 04 ಲಕ್ಷ (ವರ್ಷಕ್ಕೆ)
*ಸ್ಥಿರ ವೇತನದ ಜೊತೆಗೆ ನಿಗದಿತ ಭತ್ಯೆಗಳನ್ನು ಒಳಗೊಂಡಿರುತ್ತದೆ.
ಅರ್ಜಿ ಶುಲ್ಕ:
ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ – ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.750/-
ಅರ್ಜಿ ಸಲ್ಲಿಕೆ ಹೇಗೆ?
ಹಂತ-1. ಅಧಿಕೃತ ವೆಬ್ಸೈಟ್ https://sbi.bank.inನಲ್ಲಿ “Careers” ವಿಭಾಗಕ್ಕೆ ಭೇಟಿ ನೀಡಿ.
ಹಂತ-2. ನಂತರ ಅಲ್ಲಿ “RECRUITMENT OF SPECIALIST CADRE OFFICER ON CONTRACT BASIS (Apply Online from 02.12.2025 TO 23.12.2025)“ನ ಶಿರ್ಷೀಕೆಯಡಿ ನೀಡಲಾದ “APPLY ONLINE (02.12.2025 TO 23.12.2025)(NEW)” ಲಿಂಕ್ ಮೇಲೆ ಒತ್ತುವ ಮೂಲಕ ಅರ್ಜಿ ಪುಟ ತೆರೆಯುತ್ತದೆ.
ಹಂತ-3. ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿಕೊಳ್ಳಿ, ಇಲ್ಲದಿದ್ದರೇ ಲಾಗಿನ್ ಮಾಡಿಕೊಂಡು ಅಲ್ಲಿ ಕೇಳಲಾದ ಸಂಪೂರ್ಣ ವಿವರವನ್ನು ಸರಿಯಾಗಿ ತುಂಬಿ, ಅರ್ಜಿ ಶುಲ್ಕ ಭರಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
Important Direct Links:
SBI SO Vacancy Increased and Last Date Extended Notice PDF
2puc complete