SC ST Land Purchase Scheme Karnataka Online Application 2024-25
Land Purchase Scheme Karnataka 2024: ಈ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿರುತ್ತದೆ. ಖರೀದಿಸುವ ಜಮೀನು ಫಲಾಪೇಕ್ಷಿಯ ವಾಸಿಸುವ ಸ್ಧಳದಿಂದ 10 ಕಿಮೀ ವ್ಯಾಪ್ತಿಯಲ್ಲಿರಬೇಕು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಹಾಗೂ ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ” ದಿಂದ ನೀಡುವ ಈ “ಭೂ ಒಡೆತನ ಯೋಜನೆ“ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭವಾಗಿದೆ. ಅರ್ಹ ಫಲಾನುಭವಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ, ಜೊತೆಗೆ ನಿಮ್ಮ ಹಿತೈಶಿಗಳಿಗೂ ತಪ್ಪದೇ ಶೇರ್ ಮಾಡಿ.
ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ನಿಗದಿತ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು. ಒಟ್ಟು ಘಟಕ ವೆಚ್ಚ ರೂ. 25.00 ಲಕ್ಷ ಅಥವಾ ರೂ. 20.00 ಲಕ್ಷ ಆಗಿರುತ್ತದೆ. ಇದರಲ್ಲಿ ಶೇಕಡಾ 50% ರಷ್ಟು ಸಹಾಯಧನ ಹಾಗೂ ಇನ್ನುಳಿದ ಶೇಕಡಾ 50% ರಷ್ಟು ಸಾಲವು ಶೇಕಡ 6ರಷ್ಟು ಬಡ್ಡಿದರಲ್ಲಿ ಒಳಗೊಂಡಿರುತ್ತದೆ.
ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬಾರದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ಜಮೀನಿನ ದರವನ್ನು ನಿಗದಿಪಡಿಸುತ್ತದೆ.
Eligibility Criteria for SC/ST land Purchase schemes Karnataka
ಅರ್ಹತೆಗಳು;
ಫಲಾನುಭವಿಗಳ ಕನಿಷ್ಟ ವಯಸ್ಸು 18 ವರ್ಷ, ಗರಿಷ್ಠ 50 ವರ್ಷಗಳಾಗಿರಬೇಕು.
ಫಲಾನುಭವಿ ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕ ಕುಟುಂಬದ ಮಹಿಳಾ ಅಭ್ಯರ್ಥಿಯಾಗಿರಬೇಕು.
ನಿಗಮದಿಂದ ಈ ಹಿಂದೆ ಸಾಲ ಪಡೆದಿರಬಾರದು.
ಭೂ ಮಾಲೀಕರು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿರಬಾರದು.
ಅರ್ಜಿಗಳಲ್ಲಿ ಭೂ ಮಾಲೀಕರ ಮತ್ತು ಫಲಾನುಭವಿಗಳ ಭಾವಚಿತ್ರ ಕಡ್ಡಾಯವಾಗಿ ಪಡೆಯಬೇಕು
ಮುಂತಾದ ಅರ್ಹತೆಗಳು
Required Documents for SC ST Land Purchase Scheme
ಬೇಕಾದ ದಾಖಲಾತಿಗಳು;
ಅರ್ಜಿದಾರರ ಭಾವಚಿತ್ರ
ಜಾತಿ- ಆದಾಯ ಪ್ರಮಾಣ ಪತ್ರ
ಪಡಿತರ ಚೀಟಿ/ ಮತದಾರರ ಗುರುತಿನ ಚೀಟಿ/ ಆಧಾರ್ ಕಾರ್ಡ್ ಪ್ರತಿ
ಯೋಜನಾ ವರದಿ/ ದರ ಪಟ್ಟಿ
ಮುಂತಾದ ದಾಖಲಾತಿಗಳು
Last Date of SC ST Land Purchase Scheme Online Application 2024-25
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ Start Date: 23/10/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 23/11/2024
ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸತಕ್ಕದು.ಫಲಾಪೇಕ್ಷಿಗಳು ಈ ಕೆಳಕಂಡ ಲಿಂಕ್ನಲ್ಲಿ ಸಹ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
ಹಾಯ್ ಸರ್ ಅರ್ಜಿ ಸಲ್ಲಿಸುವ ವಿಧಾನಗಳು ದಯವಿಟ್ಟು ತಿಳಿಸಿ
Lond sale