ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ(SEBI)ಯು “ಎ” ದರ್ಜೆಯ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಮುಂಗಡ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಸ್ವೀಕಾರ ಅ.30ರಿಂದ ಪ್ರಾರಂಭವಾಗಲಿದೆ.
ಸಾಮಾನ್ಯ, ಕಾನೂನು, ಮಾಹಿತಿ ತಂತ್ರಜ್ಞಾನ, ಸಂಶೋಧನಾ, ಅಧಿಕೃತ ಭಾಷಾ, ಎಂಜಿನಿಯರಿಂಗ್ (ಎಲೆಕ್ಟ್ರಿಕಲ್, ಸಿವಿಲ್) ವಿಭಾಗಗಳಲ್ಲಿ ಒಟ್ಟು 110 “ಎ” ದರ್ಜೆಯ ಅಧಿಕಾರಿ (ಸಹಾಯಕ ವ್ಯವಸ್ಥಾಪಕ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು SEBI ಅಧಿಕೃತ ವೆಬ್ಸೈಟ್ https://www.sebi.gov.in/sebiweb/other/careerdetail.jsp?careerId=391ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಮುಂಗಡ ಅಧಿಸೂಚನೆ ಪ್ರಕಟಣೆಯ ದಿನಾಂಕ – ಅಕ್ಟೋಬರ್ 08, 2025
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅಕ್ಟೋಬರ್ 30, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಶೀಘ್ರದಲ್ಲಿಯೇ ತಿಳಿಸಲಾಗುವುದು.
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಶೀಘ್ರದಲ್ಲಿಯೇ ತಿಳಿಸಲಾಗುವುದು.
ಹುದ್ದೆಗಳ ವಿವರ:
ಜನರಲ್ ವಿಭಾಗ – 56 ಹುದ್ದೆಗಳು ಕಾನೂನು ವಿಭಾಗ – 20 ಹುದ್ದೆಗಳು ಮಾಹಿತಿ ತಂತ್ರಜ್ಞಾನ ವಿಭಾಗ – 22 ಹುದ್ದೆಗಳು ಸಂಶೋಧನಾ ವಿಭಾಗ – 04 ಹುದ್ದೆಗಳು ಅಧಿಕೃತ ಭಾಷಾ ವಿಭಾಗ – 03 ಹುದ್ದೆಗಳು ಎಂಜಿನಿಯರಿಂಗ್ (ಎಲೆಕ್ಟಿಕಲ್) ವಿಭಾಗ – 02 ಹುದ್ದೆಗಳು ಎಂಜಿನಿಯರಿಂಗ್ (ಸಿವಿಲ್) ವಿಭಾಗ – 03 ಹುದ್ದೆಗಳು
ಒಟ್ಟು 110 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
SEBI ನೇಮಕಾತಿಯ ಮುಂಗಡ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು.
• Master’s degree/Post Graduate diploma/BE in related discipline. /LLB/CA/CFA/CS, ect…
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.
ವಯೋಮಿತಿ:
30-09-2025 ರಂತೆ;
ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು
(ಅಭ್ಯರ್ಥಿಯು ಅಕ್ಟೋಬರ್ 01, 1995 ರಂದು ಅಥವಾ ನಂತರ ಜನಿಸಿರಬೇಕು)
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಸಾರವಾಗಿ ಮಾಹೆಯಾನ 62,500ರೂ. ರಿಂದ 1,26,100ರೂ. ವರೆಗೆ ವೇತನ, ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಆನ್ಲೈನ್ ಪರೀಕ್ಷೆ ಹಂತ I
ಆನ್ಲೈನ್ ಪರೀಕ್ಷೆ ಹಂತ II
ಸಂದರ್ಶನ
ಅಂತಿಮ ಆಯ್ಕೆ
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 1,000ರೂ. + ಜಿಎಸ್ಟಿ ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 100ರೂ. + ಜಿಎಸ್ಟಿ
ಅರ್ಜಿ ಸಲ್ಲಿಸುವ ವಿಧಾನ
• SEBI ಅಧಿಕೃತ ಜಾಲತಾಣ https://www.sebi.gov.in/sebiweb/other/careerdetail.jsp?careerId=391 ಕ್ಕೆ ಭೇಟಿ ನೀಡಿ.
• ನಂತರ ಅಕ್ಟೋಬರ್ 30ರಂದು ಸಕ್ರಿಯವಾಗುವ “ಅಧಿಕಾರಿ ಗ್ರೇಡ್ ಎ (ಸಹಾಯಕ ವ್ಯವಸ್ಥಾಪಕ) ನೇಮಕಾತಿ 2025″ ಆನ್ಲೈನ್ ಅರ್ಜಿ ನಮೂನೆಯನ್ನು ಆಯ್ಕೆ ಮಾಡಿ.
• ನಂತರ ಅಗತ್ಯ ಮಾಹಿತಿಗಳನ್ನು ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ಬಳಿಕ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.• ಕೊನೆದಾಗಿ ಅರ್ಜಿಯನ್ನು ಮತ್ತೊಮ್ಮೆ ಪರೀಶೀಲನೆ ಮಾಡಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.